Tamannaah Bhatia: ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟ ಮಿಲ್ಕಿ ಬ್ಯೂಟಿ

ಮದುವೆ ವಿಚಾರದ ಬಗ್ಗೆ ನಟಿ ತಮನ್ನಾ ಭಾಟಿಯಾ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಯಾವಾಗ ಎನ್ನುವ ಬಗ್ಗೆಯೂ ತಮನ್ನಾ ಹೇಳಿಕೊಂಡಿದ್ದಾರೆ.  ಹೌದು! ಮಿಲ್ಕಿ ಬ್ಯೂಟಿ ಎಂದೇ ಹೆಸರಾದ ನಟಿ ತಮನ್ನಾ, ಎರಡು ವರ್ಷಗಳ ಬಳಿಕ ಮದುವೆ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಮದುವೆ (Wedding) ವಿಚಾರದ ಬಗ್ಗೆ ನಟಿ ತಮನ್ನಾ ಭಾಟಿಯಾ (Tamanna Bhatia) ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಯಾವಾಗ ಎನ್ನುವ ಬಗ್ಗೆಯೂ ತಮನ್ನಾ ಹೇಳಿಕೊಂಡಿದ್ದಾರೆ. ಹೌದು! ಮಿಲ್ಕಿ ಬ್ಯೂಟಿ ಎಂದೇ ಹೆಸರಾದ ನಟಿ ತಮನ್ನಾ, ಎರಡು ವರ್ಷಗಳ ಬಳಿಕ ಮದುವೆ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಮದುವೆ ಹುಡುಗ ಚಿತ್ರರಂಗದವರಂತೂ ಅಲ್ಲ ಎಂದಿದ್ದು, ಬ್ಯುಸಿನೆಸ್ ಮ್ಯಾನ್ ಎಂದು ತಮನ್ನಾ ಹೇಳಿಕೊಂಡಿದ್ದಾರೆ. ಸದ್ಯ ತಮನ್ನಾಗೆ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಆಫರ್‌ಗಳಿವೆಯಂತೆ, ತಮ್ಮ ಕಾಲ್‌ಶೀಟ್‌ ಎಲ್ಲ ಮುಗಿಯಲು ಎರಡು ವರ್ಷಬೇಕು ಅನಂತರ ನನ್ನ ಮದುವೆ ಎಂದು ತಿಳಿಸಿದ್ದಾರೆ.

ಪತಿಯ ಬಟ್ಟೆ ಹಾಕಿದ್ದೀರಾ ಎಂದು ಕಾಲೆಳೆದವರಿಗೆ Deepika Padukone ಕೊಟ್ಟ ಉತ್ತರವಿದು!

ಸದ್ಯ ತಮನ್ನಾ ಅಭಿನಯದ 'ಎಫ್3' ಚಿತ್ರ ತೆರೆಗೆ ಸಿದ್ದವಾಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ನಟನೆಯ 'ಭೋಲ ಶಂಕರ್' ಸಿನಿಮಾದಲ್ಲಿ ನಟಿ ತಮನ್ನಾ ಭಾಟಿಯಾ ಅಭಿನಯಿಸುತ್ತಿದ್ದಾರೆ. ವಿಶೇಷವಾಗಿ ಕನ್ನಡದ 'ಕಬ್ಜ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಇದೆ. ಒಟ್ಟಿನಲ್ಲಿ ತಮನ್ನಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇನ್ನು ತಮನ್ನಾ ಅವರ ಸೌಂದರ್ಯ ಮತ್ತು ನಟನೆಯ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ತಮನ್ನಾ ಇಂಡಸ್ಟ್ರಿಗೆ ಬಂದು 15 ವರ್ಷಗಳಾಗಿವೆ. ಈ ವರ್ಷಗಳಲ್ಲಿ ತಮನ್ನಾ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video