ಟಾಲಿವುಡ್ ಶ್ರೀವಲ್ಲಿ ಇನ್‌ಸ್ಟಾಗ್ರಾಮ್‌ ಹ್ಯಾಕ್ ಆಯ್ತಾ?: ಉಲ್ಟಾಪಲ್ಟಾ ಆಯ್ತು ರಶ್ಮಿಕಾ ಹೆಸರು!

ಯಾಕೋ ಏನೋ ಟಾಲಿವುಡ್ ಶ್ರೀವಲ್ಲಿ ಟೈಂ ಸರಿ ಇಲ್ಲ ಅನ್ನಿಸುತ್ತೆ. ದಿನ ಬೆಳಗಾದ್ರೆ ಲ್ಲಿಲ್ಲಿಯನ್ನ ವಿವಾದಗಳು ಸುತ್ತು ವರೆಯುತ್ತಿವೆ. ಇಷ್ಟು ದಿನ ಬಾಯ್ ಕಟ್ ರಶ್ಮಿಕಾ ಅನ್ನೋ ಕಾಳು ಮೆಣಸಿನ ಹೊಗೆಯಲ್ಲಿದ್ದ ರಶ್ಮಿಕಾಗೆ ಈಗ ಹ್ಯಾಕ್ ಭಯವೂ ಕಾಡುತ್ತಿದೆಯಾ ಹೀಗೋಂದು ಡೌಟ್ ಶುರುವಾಗಿದೆ. 

Share this Video
  • FB
  • Linkdin
  • Whatsapp

ಯಾಕೋ ಏನೋ ಟಾಲಿವುಡ್ ಶ್ರೀವಲ್ಲಿ ಟೈಂ ಸರಿ ಇಲ್ಲ ಅನ್ನಿಸುತ್ತೆ. ದಿನ ಬೆಳಗಾದ್ರೆ ಲ್ಲಿಲ್ಲಿಯನ್ನ ವಿವಾದಗಳು ಸುತ್ತು ವರೆಯುತ್ತಿವೆ. ಇಷ್ಟು ದಿನ ಬಾಯ್ ಕಟ್ ರಶ್ಮಿಕಾ ಅನ್ನೋ ಕಾಳು ಮೆಣಸಿನ ಹೊಗೆಯಲ್ಲಿದ್ದ ರಶ್ಮಿಕಾಗೆ ಈಗ ಹ್ಯಾಕ್ ಭಯವೂ ಕಾಡುತ್ತಿದೆಯಾ ಹೀಗೋಂದು ಡೌಟ್ ಶುರುವಾಗಿದೆ. ಯಾಕಂದ್ರೆ ಸ್ಯಾಂಡಲ್‌ವುಡ್‌ ಸಾನ್ವಿಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ರಶ್ಮಿಕಾ ಹೆಸರು ಉಲ್ಟಾಪಲ್ಟಾ ಆಗಿದೆ. ದಿನ ಬೆಳಗಾದ್ರೆ ಲಿಲ್ಲಿ ತನ್ನ ಬಗ್ಗೆ ಅಪ್ಡೇಟ್ ಕೊಡೋದು ಸೋಷಿಯಲ್ ಮೀಡಿಯಾದಲ್ಲಿ. ಒಂದ್ ರೀತಿ ಸೋಷಿಯಲ್ ಮೀಡಿಯಾದಲ್ಲೇ ಸಂಸಾರ ಮಾಡೋ ರಶ್ಮಿಕಾ ಹೆಸರು ಈಗ ಉಲ್ಟಾ ಅಕ್ಷರದಲ್ಲಿ ಬರೆದಿದ್ದಾರೆ. ಹಾಗಾದ್ರೆ ರಶ್ಮಿಕಾ ಮಂದಣ್ಣ ಅನ್ನೋ ಬ್ಯೂಟಿಫುಲ್ ಹೆಸರನ್ನ ಉಲ್ಟಾ ಅಕ್ಷರದಲ್ಲಿ ಬರದಿದ್ದು ಯಾರು.? 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಲ್ಲಿ ಹ್ಯಾಕರ್‌ಗಳ ಕೈವಾಡ ಏನಾದ್ರು ಇದೆಯಾ ಅಂತ ಕೇಳಿದ್ರೆ, ಅದಕ್ಕೆ ಉತ್ತರ ಇದು ಹ್ಯಾಕರ್ಗಳ ಕೈವಾಡ ಅಲ್ಲವೇ ಅಲ್ಲವಂತೆ. ರಶ್ಮಿಕಾ ತನ್ನ ಹೆಸರನ್ನ ತಾನೆ ಉಲ್ಟಾ ಬರೆದುಕೊಂಡಿದ್ದಾರೆ. ಇದಕ್ಕೆ ಕಾರಣ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿದೆ. ಖಾಸಗಿ ಕಂಪನಿಯೊಂದು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಅಭಿಯಾನ ಆರಂಭಿಸಿದೆ. ಆ ಅಭಿಯಾನದ ರಾಯಭಾರಿ ರಶ್ಮಿಕಾ ಮಂದಣ್ಣ. ಹೀಗಾಗಿ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಹೆಸರು ಉಲ್ಟಾ ಕಾಣುವಂತೆ ಮಾಡಿದ್ದಾರೆ. ಅದರ ಸ್ಕ್ರೀನ್ ಶಾಟ್ ಹಂಚಿಕೊಂಡು, ‘ಓದಲು ಬಾರದ ಹೆಣ್ಣು ಮಕ್ಕಳಿಗೆ ಇದೇ ರೀತಿ ಅನಿಸುತ್ತದೆ’ ಎಂದು ರಶ್ಮಿಕಾ ಹೇಳಿದ್ದಾರೆ. ಲಿಲ್ಲಿಯಾ ಈ ಕಾರ್ಯಕ್ಕೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video