Asianet Suvarna News Asianet Suvarna News

ನಟ ನರೇಶ್-ಪವಿತ್ರಾ ಲೋಕೇಶ್ ವಿವಾಹ ನಿಜಾನಾ..?

ನಟ ನರೇಶ್  ಮತ್ತು ಪವಿತ್ರಾ ಲೋಕೇಶ್ ರಹಸ್ಯವಾಗಿ ಹಸೆಮಣೆ ಏರಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನರೇಶ್-ಪವಿತ್ರಾ ಲೋಕೇಶ್ ಕಳೆದ ವರ್ಷದಿಂದ ಟಾಲಿವುಡ್ ಮತ್ತು ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿರೋ ಜೋಡಿ. ಪವಿತ್ರಾ ಲೋಕೇಶ್ ಹಾಗು ನರೇಶ್ ಮಧ್ಯೆ  ಅಫೇರ್ ಇದೇ ಅಂತ ದೊಡ್ಡ ರಾಂದ್ಧಾಂತವೇ ನಡೆದಿತ್ತು. ಮೈಸೂರಿನ ಹೋಟೆಲ್ನಲ್ಲಿ ನರೇಶ್-ಪವಿತ್ರಾ ಒಟ್ಟಿಗೆ ಇದ್ದಾಗ ನರೇಶ್ ಮೂರನೇ ಹೆಂಡತಿ ರಮ್ಯಾ ಹೋಟೆಲ್ ಗೆ ನುಗ್ಗಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ರು. ಆದ್ರೆ ಯಾವ್ದಕ್ಕೂ ಕ್ಯಾರೆ ಎನ್ನದ ಈ ಲವ್ ಬರ್ಡ್ಸ್ ಒಂದ್ ಚೂರು ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ನರೇಶ್ ಮತ್ತು ಪವಿತ್ರಾ ಲೋಕೇಶ್ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು. ಈ ಲವರ್ಸ್ ಸತಿ ಪತಿಗಳಾಗಿದ್ದಾರೆ. ತಮ್ಮ ಮದುವೆ ವೀಡಿಯೋವನ್ನ ನರೇಶ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Video Top Stories