'ಬಾನದಾರಿಯಲ್ಲಿ' ಟೀಂ ಜೊತೆ ಸಫಾರಿ: ನಟಿಯರ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್‌ ಹೀಗ್ಯಾಕೆ ಹೇಳಿದ್ರು..

ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮತ್ತು ರಂಗಾಯಣ ರಘು ನಟಿಸಿರುವ ಸಿನಿಮಾ ಬಾನದಾರಿಯಲ್ಲಿ ಸೆ. 28ಕ್ಕೆ ಬಿಡುಗಡೆಯಾಗುತ್ತಿದೆ. ಮುಂಗಾರು ಮಳೆ ಕಥೆ ಬರೆದ ಪ್ರೀತಂ ಗುಬ್ಬಿ ಈ ಬಾನದಾರಿಯಲ್ಲಿ ಚಿತ್ರ ಮಾಡಿದ್ದಾರೆ. 

First Published Sep 27, 2023, 9:03 PM IST | Last Updated Sep 27, 2023, 9:03 PM IST

ಗೋಲ್ಡನ್ ಸ್ಟಾರ್ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮತ್ತು ರಂಗಾಯಣ ರಘು ನಟಿಸಿರುವ ಸಿನಿಮಾ ಬಾನದಾರಿಯಲ್ಲಿ ಸೆ. 28ಕ್ಕೆ ಬಿಡುಗಡೆಯಾಗುತ್ತಿದೆ. ಮುಂಗಾರು ಮಳೆ ಕಥೆ ಬರೆದ ಪ್ರೀತಂ ಗುಬ್ಬಿ ಈ ಬಾನದಾರಿಯಲ್ಲಿ ಚಿತ್ರ ಮಾಡಿದ್ದಾರೆ. ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಇಲ್ಲಿ ಗಣಿಗೆ ಜೋಡಿ ಆಗಿದ್ದಾರೆ. ಇವರ ಈ ಚಿತ್ರದಲ್ಲಿ ತುಂಬಾ ಒಳ್ಳೆ ಹಾಡುಗಳೂ ಇವೆ. ಮಸೈಮರಾ ಕಾಡಿನಲ್ಲೂ ಈ ಚಿತ್ರವನ್ನ ಶೂಟ್ ಮಾಡಲಾಗಿದೆ. ಈ ಮೂಲಕ ಕನ್ನಡಿಗರಿಗೆ ಹೊಸ ಅನುಭವ ಕೂಡ ದೊರೆಯಲಿದೆ. ಲವ್ ಸ್ಟೋರಿ ಸಿನಿಮಾ ಬೇಕು ಅನ್ನೋರು ಬಾನದಾರಿಯಲ್ಲಿ ಚಿತ್ರ ನೋಡಬಹುದು. ಇದೀಗ ಬಾನದಾರಿಯಲ್ಲಿ ಚಿತ್ರತಂಡ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಶೇಷ ಸಂದರ್ಶನವನ್ನು ನೀಡಿದ್ದು, ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.