ದುಡ್ಡು ಡಬಲ್ ಮಾಡೋಕೆ ಮೋದಿ ಹೇಳ್ತಾರೆ ಈ 4 ಸೂತ್ರಗಳು..!
ಪ್ರಧಾನಿ ನರೇಂದ್ರ ಮೋದಿ ಆಸ್ತಿ ಕಳೆದೊಂದು ವರ್ಷದಲ್ಲಿ 36 ಲಕ್ಷ ರು.ಗಳಷ್ಟು ಹೆಚ್ಚಿದೆ. ಬ್ಯಾಂಕ್ ಠೇವಣಿ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿದ್ದರಿಂದ ಅವರ ಆಸ್ತಿ 2.49 ಕೋಟಿಯಿಂದ 2.85 ಕೋಟಿ ರು.ಗೇರಿದೆ.
ಬೆಂಗಳೂರು (ಅ. 17): ಪ್ರಧಾನಿ ನರೇಂದ್ರ ಮೋದಿ ಆಸ್ತಿ ಕಳೆದೊಂದು ವರ್ಷದಲ್ಲಿ 36 ಲಕ್ಷ ರು.ಗಳಷ್ಟುಹೆಚ್ಚಿದೆ. ಬ್ಯಾಂಕ್ ಠೇವಣಿ ಹಾಗೂ ಸುರಕ್ಷಿತ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿದ್ದರಿಂದ ಅವರ ಆಸ್ತಿ 2.49 ಕೋಟಿಯಿಂದ 2.85 ಕೋಟಿ ರು.ಗೇರಿದೆ. ಒಂದೇ ವರ್ಷದಲ್ಲಿ ಪ್ರಧಾನಿ ಮೋದಿ ಆಸ್ತಿ ಏರಿಕೆಯಾಗಿದೆ.
ಎಲ್ಲಾ ಸಿಬ್ಬಂದಿಗೆ ವೇತನ ಹೆಚ್ಚಿಸಿದ ಇನ್ಫೋಸಿಸ್, ಎಷ್ಟು ಪರ್ಸೆಂಟ್?
ಬಹುಮತ ಪಡೆದ ಸರ್ಕಾರವನ್ನು 5 ವರ್ಷಗಳ ಕಾಲ ಮುನ್ನಡೆಸಿರುವ ಮೋದಿ ಬಳಿ ಸ್ವಂತ ಜಮೀನಿಲ್ಲ. ಅಷ್ಟೇ ಏಕೆ ಒಂದು ಸಣ್ಣ ಕಾರನ್ನೂ ಅವರು ಹೊಂದಿಲ್ಲ ಎಂದು ಅವರೇ ಸಲ್ಲಿಸಿರುವ ಪ್ರಮಾಣಪತ್ರ ಹೇಳುತ್ತದೆ. ಯಾವುದೇ ಜಮೀನು ಅಥವಾ ವಾಣಿಜ್ಯ ಕಟ್ಟಡವನ್ನು ತಾವು ಹೊಂದಿಲ್ಲ. ತಾವು ಹೊಂದಿರುವ ಏಕೈಕ ಸ್ಥಿರಾಸ್ತಿ ಎಂದರೆ, ಗುಜರಾತಿನ ಗಾಂಧಿನಗರದಲ್ಲಿ ಮನೆಯಲ್ಲಿ ತಮಗಿರುವ ಶೇ.25ರಷ್ಟುಪಾಲು. ಅದರ ಮಾರುಕಟ್ಟೆಮೌಲ್ಯ 1.10 ಕೋಟಿ ರು. ಎಂದು ತಿಳಿಸಿದ್ದಾರೆ. ಹಾಗಾದರೆ ಒಂದೇ ವರ್ಷದಲ್ಲಿ ಮೋದಿ ಆಸ್ತಿ ಏರಿಕೆಯಾಗಿದ್ಹೇಗೆ? ದುಡ್ಡು ಡಬಲ್ ಮಾಡೋಕೆ ಮೋದಿ ಹೇಳ್ತಾರೆ ಈ 4 ಸೂತ್ರಗಳು..!