ಎಲ್ಲ ಸಿಬ್ಬಂದಿಗೆ ವೇತನ ಹೆಚ್ಚಿಸಿದ ಇನ್ಫೋಸಿಸ್, ಎಷ್ಟು ಪರ್ಸಂಟ್?
ಕೊರೋನಾ ನಡುವೆಯೂ ವೇತನ ಹೆಚ್ಚಳ ಮಾಡಿದ ಇನ್ಫೋಸಿಸ್/ ಜನವರಿ ಒಂದರಿಂದಲೇ ನ್ವಯ/ ಎಲ್ಲ ಉದ್ಯೋಗಿಗಳಿಗೆ ಲಾಭ/ ಲಾಭಾಂಶ ದಾಖಲಿಸಿದ್ದ ಕಂಪನಿ
ಬೆಂಗಳೂರು(ಅ. 14) ಕೊರೋನಾ ವೈರಸ್ ಮತ್ತು ಲಾಕ್ ಡೌನ್ ಕಾರಣಕ್ಕೆ ಎಲ್ಲ ಕಂಪನಿಗಳು ಸಂಕಷ್ಟ ಅನುಭವಿಸುತ್ತಿದ್ದರೆ ಇನ್ಫೋಸಿಸ್ ಮಾತ್ರ ಲಾಭ ಮಾಡಿದ್ದು ಅಲ್ಲದೆ ತನ್ನ ಸಿಬ್ಬಂದಿಗೆ ಬಂಪರ್ ನೀಡಿದೆ.
ಜನವರಿ 1. 2021 ರಿಂದಲೇ ಅನ್ವಯವಾಗುವಂತೆ ಕಂಪನಿಯ ಎಲ್ಲ ಹಂತದ ನೌಕರರ ವೇತನ ಹೆಚ್ಚಳದ ಜತೆಗೆ ಬಡ್ತಿ ನೀಡಿದೆ. ಈ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕಕ್ಕೆ ವಿಶೇಷ ಪ್ರೋತ್ಸಾಹಧನದ ಜೊತೆಗೆ ಶೇ.100ರಷ್ಟು ವೇರಿಯಬಲ್ ಪೇ ಯನ್ನು ಕೂಡ ನೀಡುತ್ತಿರುವುದಾಗಿ ಇನ್ಫೋಸಿಸ್ ತಿಳಿಸಿದೆ.
ಸಿಇಒಗೆ ಸಂಬಳ ಎಷ್ಟು ಬೇಕು? ನಾರಾಯಣ ಮೂರ್ತಿ ಲೆಕ್ಕಾಚಾರ
ಸೆಪ್ಟೆಂಬರ್ ಅಂತ್ಯಕ್ಕೆ ಇನ್ಫೋಸಿಸ್‌ನಲ್ಲಿ 2.4 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಕಂಪನಿಯ ಯಶಸ್ಸಿಗೆ ಉದ್ಯೋಗಿಗಳು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರ ಕಾರ್ಯಕ್ಷಮತೆಯ ಮಾನ್ಯತೆಯಾಗಿ, ಎರಡನೇ ತ್ರೈಮಾಸಿಕಕ್ಕೆ ವಿಶೇಷ ಪ್ರೋತ್ಸಾಹ ಧನದೊಂದಿಗೆ ಶೇ.100 ವೇರಿಯೇಬಲ್ ಪೇ ನೀಡುತ್ತಿದ್ದೇವೆ ಎಂದು ಪ್ರಕಟಣೆ ತಿಳಿಸಿದೆ.
ಇನ್ಫೋಸಿಸ್ ದೇಶದ 2ನೇ ಅತಿದೊಡ್ಡ ಸಾಫ್ಟ್‌ವೇರ್ ಕಂಪನಿಯಾಗಿದ್ದು, ಕಳೆದ ಸೆಪ್ಟೆಂಬರ್ ತ್ರೈಮಾಸಿಕದ ಲಾಭದಲ್ಲಿ ಶೇ.20.6ರಷ್ಟು ಲಾಭ ಕಂಡಿದೆ.
ಎರಡನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ 3000 ಫ್ರೆಶರ್ ಸೇರಿದಂತೆ 5,500 ಜನರನ್ನು ನೇಮಿಸಿಕೊಂಡಿದೆ. ಕಂಪನಿಯು ಈ ವರ್ಷ 16,500 ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಮತ್ತು ಮುಂದಿನ ವರ್ಷ 15,000 ಜನರನ್ನು ನೇಮಿಸಿಕೊಳ್ಳುವ ಗುರಿ ಹೊಂದಿದೆ. ಇನ್ಫೋಸಿಸ್ 2019 ರಲ್ಲಿ ತನ್ನ ಶೇ. 85 ಉದ್ಯೋಗಿಗಳಿಗೆ ಶೇ. 6 ರಷ್ಟು ವೇತನ ಹೆಚ್ಚಳ ನೀಡಿತ್ತು.