ಟೆಕ್ಕಿ ಗಂಡನಿಂದ ಕಿರುಕುಳ: ಪುಟ್ಟ ಮಗನ ಬಗೆಯೂ ಯೋಚಿಸದೇ ಸೀದಾ ಹೋಗಿ ನೇಣಿಗೆ ಶರಣಾದ ತಾಯಿ

ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಕೌಟುಂಬಿಕ ಕಲಹದ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ. ಟೆಕ್ಕಿಯಾಗಿದ್ದ ಆಕೆಯ ಪತಿ ನೀಡುತ್ತಿದ್ದ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ. 

First Published May 17, 2024, 12:00 PM IST | Last Updated May 17, 2024, 12:00 PM IST

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಕೌಟುಂಬಿಕ ಕಲಹದ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ. ಟೆಕ್ಕಿಯಾಗಿದ್ದ ಆಕೆಯ ಪತಿ ನೀಡುತ್ತಿದ್ದ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಿನ್ನೆ ಘಟನೆ ನಡೆದಿದ್ದು, ಸಾವಿಗೆ ಶರಣಾದ ಮಹಿಳೆಯನ್ನು ಸಂಧ್ಯಾ ಎಂದು ಗುರುತಿಸಲಾಗಿದೆ. ಅಳಿಯ ಜಯಪ್ರಕಾಶ್ ಮಗಳಿಗೆ ದಿನವೂ ಕಿರುಕುಳ ನೀಡುತ್ತಿದ್ದ ಎಂದು ಸಂಧ್ಯಾ ತಂದೆ ಆರೋಪಿಸಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಧ್ಯಾ ಹಾಗೂ ಜಯಪ್ರಕಾಶ್ ಮದುವೆಯಾಗಿ 5 ವರ್ಷ ಆಗಿದ್ದು, 4 ವರ್ಷದ ಒಂದು ಗಂಡು ಮಗುವಿತ್ತು. ಎಲ್ಲಾ ಕಡೆ ಸಾಲ ಮಾಡಿದ್ದ ಗಂಡ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಇದರಿಂದ ಮನನೊಂದ ಸಂಧ್ಯಾ ಪುಟ್ಟ ಕಂದನ ಬಗೆಯೂ ಯೋಚಿಸದೇ ಸೀದಾ ಹೋಗಿ ನೇಣಿಗೆ ಶರಣಾಗಿದ್ದಾಳೆ. ಅಪ್ಪ ಅಮ್ಮನ ಕಿತ್ತಾಟದಿಂದ ಕಂದ ತಬ್ಬಲಿಯಾಗಿದ್ದಾನೆ.

Video Top Stories