ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ

ಹೋಗುಮ ಹೋಗುಮಾ ಲಾಂಗ್ ಡ್ರೈವ್ ಎಂದು ಕಾರಿನಲ್ಲಿ ಹೊರಟ. ಆದರೆ ಲಾಂಗ್ ಡ್ರೈವ್‌ನಲ್ಲಿ ಕಾರು ಹೊತ್ತಿ ಉರಿದಿತ್ತು. ಸುಟ್ಟು ಕರಕಲಾದ ಹೆಣ್ಣಿನ ಶವ ಪತ್ತೆಯಾಗಿತ್ತು. ಏನಿದು ಲಾಂಗ್ ಡ್ರೈವ್ ಹೋಗುಮಾ ಕತೆ? 

Share this Video
  • FB
  • Linkdin
  • Whatsapp

ಆತ ಸಮಾಜ ಸೇವಕ.. ಸಣ್ಣಪುಟ್ಟ ಸಹಾಯ.. ಸಣ್ಣಪುಟ್ಟ ಡೀಲ್​ಗಳನ್ನ ಮಾಡಿಕೊಂಡು ಜೀವನ ನಡೆಸುತ್ತಿದ್ದ.. ಮದುವೆಯಾಗಿ 10 ವರ್ಷವಾಗಿದೆ.. ಒಂದು ಮಗು ಕೂಡ ಇದೆ.. ಆದ್ರೆ ಹಂಡತಿ ಡಿವೋರ್ಸ್​ ತಗೆದುಕೊಂಡು ಈತನಿಂದ ದೂರವಾಗಿದ್ಲು.. ಆದ್ರೆ ಆವತ್ತೊಂದು ದಿನ ಸ್ನೇಹಿತನ ಕಾರು ಪಡೆದು ಆಸ್ಪತ್ರೆಗೆ ಅಂತ ಹೋಗಿದ್ದ.. ಆದ್ರೆ ನಿರ್ಜನ ಪ್ರದೇಶದಲ್ಲಿ ಅವನ ಕಾರಿಗೆ ಬೆಂಕಿ ಹೊತ್ತಿತ್ತು.. ಫೈರ್​​ ಸಿಗ್ನಲ್​ ಸ್ನೇಹಿತನಿಗೆ ಸಿಕ್ಕಿ ಆತ ಓಡೋಡಿ ಬಂದಿದ್ದ.. ಬಂದು ನೋಡಿದ್ರೆ ಕಾರಿನಲ್ಲಿ ಸುಟ್ಟು ಕರಕಲಾದ ಶವ.. ಪೊಲೀಸ್​​ ಕೇಸ್​​ ಆಯ್ತು.. ತನಿಖೆ ನಡೆಸಿದ ಪೊಲೀಸರಿಗೆ ಕಾರಿನಲ್ಲಿದ್ದಿದ್ದು ಹೆಣ್ಣಿನ ಶವ ಅನ್ನೋದು ಗೊತ್ತಾಗಿತ್ತು.. ಹಾಗಾದ್ರೆ ಅವನು ಎಲ್ಲಿ..? ಕಾರಿನಲ್ಲಿ ಸತ್ತ ಆ ಹೆಣ್ಣುಮಗಳು ಯಾರು..?

Related Video