ಒಂದು ನಗರದ ಪ್ರಬುದ್ಧತೆಯನ್ನು ಅಳೆಯುವುದು ಅಲ್ಲಿನ ಕಟ್ಟಡಗಳಿಂದಲ್ಲ, ಬದಲಿಗೆ ಹಿರಿಯ ನಾಗರಿಕರನ್ನು ನಡೆಸಿಕೊಳ್ಳುವ ರೀತಿಯಿಂದ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ಹದಗೆಟ್ಟ ರಸ್ತೆ ಮತ್ತು ಸುರಕ್ಷತೆಯ ಕೊರತೆಯಿಂದಾಗಿ ವೃದ್ಧರು ಪ್ರತಿನಿತ್ಯ ಆತಂಕದಲ್ಲಿ ಬದುಕುತ್ತಿದ್ದರೆ ಸೇಫ್ ಸಿಟಿ ಎನ್ನಬಹುದೇ?
- Home
- News
- State
- State News Live: ಬೆಂಗಳೂರು ಹಿರಿಯರಿಗೆ ಸೇಫ್ ಸಿಟಿಯೇ? ನಗರದ ಅಭಿವೃದ್ಧಿ ಅಳೆಯುವುದು ಕಟ್ಟಡಗಳಿಂದಲ್ಲ; ಹಿರಿಯರನ್ನ ನಡೆಸಿಕೊಳ್ಳುವ ರೀತಿಯಿಂದ!
State News Live: ಬೆಂಗಳೂರು ಹಿರಿಯರಿಗೆ ಸೇಫ್ ಸಿಟಿಯೇ? ನಗರದ ಅಭಿವೃದ್ಧಿ ಅಳೆಯುವುದು ಕಟ್ಟಡಗಳಿಂದಲ್ಲ; ಹಿರಿಯರನ್ನ ನಡೆಸಿಕೊಳ್ಳುವ ರೀತಿಯಿಂದ!

ಬೆಂಗಳೂರು (ಸೆ.5): ಬಾಗಲಕೋಟೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬರಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಬಾಗಲಕೋಟೆಯಲ್ಲಿ ರೈತರ ಜಮೀನಿಗೆ ತೆರಳಿ ಬೆಳೆ ವೀಕ್ಷಣೆ ಮಾಡಿದರು. ಸಮೀಕ್ಷೆಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಐದು ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಡಿರುವ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದರು. ಸಾಲಮನ್ನಾ ಬೇಡಿಕೆ ಸರಿಯಿದೆ. ರೈತರ ಸಾಲ ಮನ್ನಾಗೆ ನೆರವು ಕೋರಿ ದೆಹಲಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುತ್ತೇವೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದಿಂದ ಸಾಲಮನ್ನಾ ಮಾಡಿಸುವ ಜವಾಬ್ದಾರಿ ಹೊರಬೇಕು. ಬರಗಾಲದ ಬಗ್ಗೆ ಪ್ರಧಾನಮಂತ್ರಿಗಳೇ ಹೇಳಿದ್ದು, ಕೇಂದ್ರ ಸರ್ಕಾರ ಸಾಲಮನ್ನಾ ಮಾಡಬೇಕು. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಇತರೆ ನಾಯಕರು ನಮ್ಮೊಂದಿಗೆ ದೆಹಲಿಗೆ ಬಂದು ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಹಾಗೂ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಬೇಕು ಎಂದಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ಸುದ್ದಿಗಳ ಅಪ್ಡೇಟ್ ಇಲ್ಲಿದೆ.
Karnataka News Live 5th September: ಬೆಂಗಳೂರು ಹಿರಿಯರಿಗೆ ಸೇಫ್ ಸಿಟಿಯೇ? ನಗರದ ಅಭಿವೃದ್ಧಿ ಅಳೆಯುವುದು ಕಟ್ಟಡಗಳಿಂದಲ್ಲ; ಹಿರಿಯರನ್ನ ನಡೆಸಿಕೊಳ್ಳುವ ರೀತಿಯಿಂದ!
Karnataka News Live 5th September: Dk Shivakumar - ಕನ್ನಡ ಕೇವಲ ಭಾಷೆಯಲ್ಲ, ನಮ್ಮ ಬದುಕಿನ ಅಸ್ಮಿತೆ; ಅಕ್ಕ ಸಮ್ಮೇಳನದಲ್ಲಿ ಡಿಕೆಶಿ ಭಾವಪೂರ್ಣ ಸಂದೇಶ!
ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆನ್‌ಲೈನ್ ಮೂಲಕ ವಿದೇಶಿ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಬದುಕಿನ ಅಸ್ಮಿತೆ ಮತ್ತು ಸಂಸ್ಕೃತಿಯ ಪ್ರತೀಕ ಎಂದು ಬಣ್ಣಿಸಿದ ಅವರು, ತಂತ್ರಜ್ಞಾನದ ಯುಗದಲ್ಲಿ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ನೆನಪಿಸಿದರು ಮತ್ತು ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದೆಂದು ಭಾವಪೂರ್ಣವಾಗಿ ಕರೆ ನೀಡಿದರು.
Karnataka News Live 5th September: ಡಾಕ್ಟರ್ ಹೆಸರಿನ ಮುಂದೆ Dr. ಇದ್ದಂತೆ ಇನ್ಮುಂದೆ ಶಿಕ್ಷಕರಿಗೆ Tr, ಸಿಎಂ ಡಿಕೆ ಶಿವಕುಮಾರ್ ಘೋಷಣೆ
ಡಾಕ್ಟರ್ ಹೆಸರಿನ ಮುಂದೆ ಅಧಿಕೃತವಾಗಿ, ಗೌರವಯುತವಾಗಿ Dr ಹಾಕುವ ಅವಕಾಶವಿದೆ. ಆದರೆ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಏನೂ ಹಾಕುವುದಿಲ್ಲ.ಇನ್ಮುಂದೆ ಶಿಕ್ಷಕರು ತಮ್ಮ ಹೆಸರಿನ ಮುಂದೆ Tr ಹಾಕಿಕೊಳ್ಳಬಹುದು.
Karnataka News Live 5th September: ಚಂಡಿಕಾಯಾಗಕ್ಕೂ ಮುನ್ನ ಬೂದೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಡಿಕೆಶಿ - ಕಾರಣ ಇದೇನಾ?
ಗಂಗಾವತಿ ಸಮೀಪದ ಬೂದಗುಂಪಾ ಗ್ರಾಮದ ಬೂದೇಶ್ವರ ದೇವಸ್ಥಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಚಂಡಿಕಾಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿರುವುದಾಗಿ ಡಿಕೆಶಿ ಹೇಳಿದರು.
Karnataka News Live 5th September: 2028ರ ಸಿಎಂ ಬಗ್ಗೆ ಬಂತು ಭವಿಷ್ಯವಾಣಿ - ಬೂದೇಶ್ವರ ದೇವಸ್ಥಾನದಲ್ಲಿ ಎಚ್.ಜಿ.ರಾಮುಲು ಮಾತು
ಗಂಗಾವತಿಯಲ್ಲಿ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ.ರಾಮುಲು ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2028ರಲ್ಲೂ ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Karnataka News Live 5th September: BBK 13 - ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಕಿಚ್ಚನ ಸರ್ಪ್ರೈಸ್ ಎಂಟ್ರಿ - ಹೊಸ ಮನೆ ಹೇಗಿದೆ ಗೊತ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 13ರ ಅಧಿಕೃತ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಂದು ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಸ್ವಾಗತಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಫ್ಲೈಟ್ ಕ್ಯಾಪ್ಟನ್ ಅವತಾರದಲ್ಲಿ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
Karnataka News Live 5th September: ಯಶ್ ರಾವಣನಾಗಿ ಅಬ್ಬರಿಸಿದರೆ ಬಾಕ್ಸ್ ಆಫೀಸ್‌ನಲ್ಲಿ ಏನಾಗಬಹುದು? ಆ ಲೆಕ್ಕ ಚುಕ್ತಾ ಮಾಡ್ತಾರಾ?
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ನಿರೀಕ್ಷಿತ ಫಲಿತಾಂಶ ಸಿಗದ ಬಳಿಕ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ದೊಡ್ಡ ಭರವಸೆ ‘ರಾಮಾಯಣ’ ಸಿನಿಮಾದ ಮೇಲಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಮಾಪಕರಾಗಿಯೂ ಭಾಗವಾಗಿದ್ದಾರೆ.
Karnataka News Live 5th September: ಕನ್ನಡದ ಕಂಪು ಹೊತ್ತ ಫಿಲಡೆಲ್ಫಿಯಾ ರಸ್ತೆ, ಅದ್ಧೂರಿಯಾಗಿ ಅಕ್ಕ ರಜತ ಮಹೋತ್ಸವಕ್ಕೆ ಚಾಲನೆ
ಅಮೆರಿಕದಲ್ಲಿ ಅಕ್ಕ ರಜತ ಮಹೋತ್ಸವ ವಿಶ್ವ ಕನ್ನಡ ಸಮ್ಮೇಳನಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. ಈ ಬಾರಿ ಹಲುವ ವಿಶೇಷತೆಗಳೊಂದಿಗೆ ಕಾರ್ಯಕ್ರಮ ಆರಂಭಗೊಂಡಿದೆ. ವೀರಗಾಸೆ ಸೇರಿದಂತೆ ಹಲವು ಕನ್ನಡದ ಕಲೆಗಗಳ ಮೂಲಕ ಅದ್ದೂರಿ ಮೆರವಣಿಗೆ ಸಾಗಿತ್ತು.
Karnataka News Live 5th September: Gold Jewellery - ಚಿನ್ನ ಖರೀದಿಸಲು ಈಗ ಲಕ್ಷಗಟ್ಟಲೆ ಹಣ ಬೇಕಿಲ್ಲ - ಹೀಗೆ ಪ್ಲಾನ್ ಮಾಡಿದ್ರೆ ಸಾಕು!
ಚಿನ್ನಾಭರಣ ಖರೀದಿಸಲು ಒಂದೇ ಬಾರಿಗೆ ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಿಲ್ಲ. ಡಿಜಿಟಲ್ ಗೋಲ್ಡ್, ಮಾಸಿಕ ಗೋಲ್ಡ್ ಸೇವಿಂಗ್ಸ್, ಹಳೆಯ ಚಿನ್ನದ ಎಕ್ಸ್‌ಚೇಂಜ್ ಮತ್ತು EMI ಮೂಲಕ ಚಿನ್ನ ಖರೀದಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Karnataka News Live 5th September: ಸಿನಿಮಾ, ರಾಜಕೀಯ ಎರಡರಿಂದಲೂ ದೂರ - ಮೋಹಕ ತಾರೆ ರಮ್ಯಾ ಈಗ ಏನ್ ಮಾಡ್ತಿದ್ದಾರೆ ಗೊತ್ತಾ?
ಮೋಹಕ ತಾರೆ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಈಗ ಎಲ್ಲಿದ್ದಾರೆ? ನಟಿಯಿಂದ ಸಂಸದೆಯಾಗಿ, ಈಗ ನಿರ್ಮಾಪಕಿಯಾಗಿರುವ ಅವರ ಹೊಸ ಜೀವನ, ಸಿನಿಮಾ ಕಂಬ್ಯಾಕ್ ಹಾಗೂ ಮುಂದಿನ ಯೋಜನೆಗಳ ಮಾಹಿತಿ ಇಲ್ಲಿದೆ.
Karnataka News Live 5th September: 'ನನ್ನ ಬೋಲ್ಡ್ ವಿಡಿಯೋಗಳೂ ಸಾಮಾಜಿಕ ಸೇವೆಯೇ' - ನಟಿ ಪೂನಂ ಪಾಂಡೆ ಶಾಕಿಂಗ್ ಕಾಮೆಂಟ್ಸ್ ವೈರಲ್
‘ನನ್ನ ಬೋಲ್ಡ್ ವಿಡಿಯೋಗಳೂ ದೇಶ ಸೇವೆಯೇ’ ಎಂದು ಪೂನಂ ಪಾಂಡೆ ಹೇಳಿದ್ದು, ಭಾರತದಲ್ಲಿ ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ನಟಿಯ ಕಾಮೆಂಟ್ಸ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿವೆ.
Karnataka News Live 5th September: Cricket - 14 ವರ್ಷಗಳಿಂದ ಮುರಿಯದ ವಿಶ್ವದಾಖಲೆ! ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ನೀಡಿದ ಟಾಪ್ 5 ಜೋಡಿ ಇವೆ!
Karnataka News Live 5th September: ದೇವರೇ.. ದರ್ಶನ್ ಸಂಕಷ್ಟ ದೂರವಾಗಲಿ - ಮಗನಿಗಾಗಿ ವಿಶೇಷ ಪೂಜೆ ಸಲ್ಲಿಸಿದ ತಾಯಿ ಮೀನಾ ತೂಗುದೀಪ
ದರ್ಶನ್‌ಗಾಗಿ ತಾಯಿ ಮೀನಾ ತೂಗುದೀಪ ದೇವರ ಮೊರೆ ಹೋಗಿದ್ದಾರೆ. ಮೈಸೂರಿನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಗನ ಆರೋಗ್ಯ ಹಾಗೂ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದ್ದಾರೆ.
Karnataka News Live 5th September: ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು 3 ವರ್ಷದಲ್ಲಿ 5500 ಕೋಟಿ ಖರ್ಚು - ತೇಜಸ್ವಿ ಸೂರ್ಯ ಬಿಚ್ಚಿಟ್ರು ಸತ್ಯ
Karnataka News Live 5th September: 9ನೇ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ಮಿಂಚಿದ್ದ ಈ ಪುಟ್ಟ ಬಾಲಕಿ ಇಂದು ಸ್ಟಾರ್ ಹೀರೋಯಿನ್!
ಸ್ಟಾರ್ ಹೀರೋಯಿನ್ ಶ್ರೀಲೀಲಾ 9ನೇ ವಯಸ್ಸಿನಲ್ಲಿ ಮಾಡಿದ್ದ ಭರತನಾಟ್ಯ ವಿಡಿಯೋ ಇದೀಗ ವೈರಲ್ ಆಗಿದೆ. ಶ್ರೀಕೃಷ್ಣನ ತುಂಟಾಟವನ್ನು ಅದ್ಭುತವಾಗಿ ಅಭಿನಯಿಸಿದ ಬಾಲ್ಯದ ವಿಡಿಯೋ ನೋಡಿ ಫ್ಯಾನ್ಸ್ ಅಚ್ಚರಿ!
Karnataka News Live 5th September: Siddaramaiah - ಅಚ್ಚೇ ದಿನ್ ಎಲ್ಲಿ, 15 ಲಕ್ಷ ಎಲ್ಲಿ? ಬಿಜೆಪಿಗೆ ಸವಾಲೆಸೆದು ತಮ್ಮ ರಾಜೀನಾಮೆ ಸತ್ಯ ಬಿಚ್ಚಿಟ್ಟ ಮಾಜಿ ಸಿಎಂ!
Karnataka News Live 5th September: ಆ ಕಾಲದಲ್ಲೇ ಸ್ವಿಮ್‌ಸೂಟ್ ಧರಿಸಿದ ಬೋಲ್ಡ್ ನಾಯಕಿ 'ಅಭಿನಯ ಶಾರದೆ' ಜಯಂತಿ ಬಗ್ಗೆ ನಿಮಗೆಷ್ಟು ಗೊತ್ತು?
14ನೇ ವಯಸ್ಸಿಗೇ ಚಿತ್ರರಂಗ ಪ್ರವೇಶಿಸಿ, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅಭಿನಯ ಶಾರದೆ ಜಯಂತಿ ಅವರ ಸುದೀರ್ಘ ಸಿನಿ ಪಯಣ, ದಿಗ್ಗಜ ನಟರೊಂದಿಗಿನ ಸಿನಿಮಾ ಅನುಭವ, ವೈಯಕ್ತಿಕ ಜೀವನದ ಏಳುಬೀಳು ಹಾಗೂ ರಾಜಕೀಯ ಪ್ರವೇಶದ ಕುತೂಹಲಕಾರಿ ಕಥೆ.
Karnataka News Live 5th September: Gowrishankar SRG - ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್
'ಕೆರೆಬೇಟೆ' ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ನಟ ಗೌರಿಶಂಕರ್ ಎಸ್‌ಆರ್‌ಜಿ ಅವರು 70ನೇ ಫಿಲ್ಮ್‌ಫೇರ್ ಪ್ರಶಸ್ತಿ (ದಕ್ಷಿಣ) ಸಮಾರಂಭದಲ್ಲಿ ಅತ್ಯುತ್ತಮ ನಟ (ವಿಮರ್ಶಕ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
Karnataka News Live 5th September: ಬೆಂಗಳೂರಲ್ಲಿ ಭಯಾನಕ ಹಾರರ್ - ಮಧ್ಯರಸ್ತೆಯಲ್ಲಿ ಗಂಡನ ಎದುರಲ್ಲೇ ನಡೀತು ಲೈಂ*ಕ ದೌರ್ಜನ್ಯ
ಬೆಂಗಳೂರಲ್ಲಿ ಮತ್ತೊಂದು ಭಯಾನಕ ಕೃತ್ಯ ನಡೆದಿದೆ. ಆಟೋದಲ್ಲಿ ಹೋಗ್ತಿದ್ದ ದಂಪತಿಯ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪೊಂದು ಮಾಡಬಾರದ ಕೃತ್ಯವನ್ನ ನಡೆಸಿದೆ. ಅಷ್ಟಕ್ಕೂ ಮುಂಜಾನೆ ಆ ಫ್ಲೈಓವರ್‌ನಲ್ಲಿ ಏನಾಯ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.