Bengaluru: ಜಿಬಿಎ ಕಾಮಗಾರಿ ವೇಳೆ ಪೈಪ್‌ಲೈನ್‌ಗೆ ಹಾನಿ; ಏಳೆಂಟು ಅಡಿ ಎತ್ತರಕ್ಕೆ ಚಿಮ್ಮಿದ ಗ್ಯಾಸ್!
ಬೆಂಗಳೂರಿನ ಅನಾಹುತವೊಂದು ತಪ್ಪಿದೆ. ಜಿಬಿಎ ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿ ಏಳೆಂಟು ಅಡಿ ಎತ್ತರಕ್ಕೆ ಗ್ಯಾಸ್ ಚಿಮ್ಮಿ ಆತಂಕ ಸೃಷ್ಟಿಸಿದ ಘಟನೆ ನಗರದ ಮಾರತಹಳ್ಳಿ ಸಮೀಪ ನಡೆದಿದೆ. ಅದೃಷ್ಟವಶಾತ್ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಅನಾಹುತ ತಪ್ಪಿಸಿದ್ದಾರೆ.

ಜಿಬಿಎ ಕಾಮಗಾರಿ ವೇಳೆ ಗ್ಯಾಸ್ ಪೈಪ್‌ಲೈನ್ ಗೆ ಹಾನಿ, ತಪ್ಪಿದ ಅನಾಹುತ
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿ ವೇಳೆ ಗೇಲ್ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿ ಆತಂಕ ಸೃಷ್ಟಿಸಿದ ನಗರದ ಮಾರತ್ಥಳ್ಳಿ ಸಮೀಪದ ಯಮಲೂರು ಸಿಗ್ನಲ್ ಬಳಿ ನಡೆದಿದೆ.
ಹೆಚ್‌ಎಎಲ್ (HAL) ಪೊಲೀಸ್ ಠಾಣೆಯ ಸಮೀಪ ಇಂದು ಮಧ್ಯಾಹ್ನ 12.30 ಸುಮಾರಿಗೆ ಘಟನೆ ನಡೆದಿದೆ. ಬಸ್ ನಿಲ್ದಾಣದ ಬಳಿ ಕಾಮಗಾರಿ ನಡೆಯುತಿದ್ದ ವೇಳೆ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿ ಲೀಕ್ ಆಗಿದೆ.
ಮುಖ್ಯರಸ್ತೆಯಲ್ಲಿ ಗ್ಯಾಸ್ ಲೀಕೇಜ್; ತಪ್ಪಿದ ಅನಾಹುತ
ನಡೆದಿದ್ದೇನು
ಜಿಬಿಎ ಕಾಮಗಾರಿ ವೇಳೆ ಮನೆಗಳಿಗೆ ಸಂಪರ್ಕ ನೀಡುವ ನೆಲದಾಳದ ಗೇಲ್ ಗ್ಯಾಸ್ ಪೈಪ್‌ಲೈನ್‌ಗೆ ಹಾನಿಯಾಗಿದೆ. ಇದರಿಂದ ಸುಮಾರು ಅಡಿ ಎತ್ತರಕ್ಕೆ ಗ್ಯಾಸ್ ಚಿಮ್ಮಿದ್ದರಿಂದ ಆತಂಕಗೊಂಡಿದ್ದ ವಾಹನ ಸವಾರರು. ಘಟನೆಯಿಂದ ಎಚ್ಚೆತ್ತ ಕಾಮಗಾರಿ ಸಿಬ್ಬಂದಿ ತಕ್ಷಣ ಮುಖ್ಯ ರಸ್ತೆಯ ವಾಹನ ಸಂಚಾರ ವನ್ನು ನಿಲ್ಲಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ವಾಹನ ಹಾಗ ಗೇಲ್ ಗ್ಯಾಸ್ ನಿರ್ವಹಣಾ ತಂಡ ಲೀಕೇಜ್ ಆಗುತ್ತಿದ್ದ ಗ್ಯಾಸ್ ಹತೋಟಿಗೆ ತಂದಿದ್ದಾರೆ.
ಗ್ಯಾಸ್ ಪೈಪ್‌ಲೈನ್‌ಗೆ ಹಾನಿ; ತಪ್ಪಿದ ದುರಂತ
ಪೈಪ್‌ಲೈನ್‌ನಿಂದ ಮುಖ್ಯರಸ್ತೆಗೆ ಗ್ಯಾಸ್ ಚಿಮ್ಮುತ್ತಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ, ಗ್ಯಾಸ್ ನಿರ್ವಹಣ ತಂಡ ಪರಿಸ್ಥಿತಿ ನಿಯಂತ್ರಿಸಿದರು. ಅಲ್ಲದೆ ಗ್ಯಾಸ್ ಸೋರಿಕೆಯಾದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ. ಲೀಕೇಸ್ ಆದ ಸ್ಥಳದಿಂದ ದೂರದಿಂದ ವಾಹನ ಸಂಚರಿಸುವಂತೆ ವ್ಯವಸ್ಥೆ ಮಾಡಲಾಯ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

