ದರ್ಶನ್‌ಗಾಗಿ ತಾಯಿ ಮೀನಾ ತೂಗುದೀಪ ದೇವರ ಮೊರೆ ಹೋಗಿದ್ದಾರೆ. ಮೈಸೂರಿನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಗನ ಆರೋಗ್ಯ ಹಾಗೂ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಮೈಸೂರು (ಸೆ.05): ನಟ ದರ್ಶನ್ ಅಭಿಮಾನಿಗಳ ಪಾಲಿಗೆ ಇದೀಗ ಮತ್ತೊಂದು ಭಾವುಕ ಕ್ಷಣ. ಪುತ್ರನ ಕ್ಷೇಮ, ಆರೋಗ್ಯ ಹಾಗೂ ನೆಮ್ಮದಿಗಾಗಿ ತಾಯಿ ಮೀನಾ ತೂಗುದೀಪ ದೇವರ ಮೊರೆ ಹೋಗಿದ್ದಾರೆ. ಮೈಸೂರಿನ ಪ್ರಸಿದ್ಧ ಒಂಟಿಕೊಪ್ಪಲ್ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ವಿಶೇಷ ಪೂಜೆ ಹಾಗೂ ಅರ್ಚನೆ ಸಲ್ಲಿಸಿದ್ದಾರೆ.
ಶ್ರಾವಣ ಮಾಸದ ಕಡೆಯ ಶನಿವಾರದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿದ ಮೀನಾ ತೂಗುದೀಪ, ದರ್ಶನ್ ಸೇರಿದಂತೆ ಕುಟುಂಬದವರ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದ್ದಾರೆ. ಪುತ್ರನ ಆರೋಗ್ಯ ಉತ್ತಮವಾಗಿರಲಿ, ಮನಸ್ಸಿಗೆ ನೆಮ್ಮದಿ ಸಿಗಲಿ, ಜೀವನದಲ್ಲಿ ಎದುರಾಗಿರುವ ಸಂಕಷ್ಟಗಳು ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
ಶ್ರೀಕೃಷ್ಣನ ಸನ್ನಿಧಿಯಲ್ಲೂ ವಿಶೇಷ ಪ್ರಾರ್ಥನೆ
ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶ್ರೀಕೃಷ್ಣನ ಸನ್ನಿಧಿಯಲ್ಲೂ ಮೀನಾ ತೂಗುದೀಪ ವಿಶೇಷ ಪೂಜೆ ನೆರವೇರಿಸಿದ್ದಾರೆ. ಮಗ ದರ್ಶನ್‌ಗೆ ಎದುರಾಗಿರುವ ಕಷ್ಟಗಳು ಆದಷ್ಟು ಬೇಗ ದೂರವಾಗಿ, ಮತ್ತೆ ಉತ್ತಮ ದಿನಗಳು ಮರಳಲಿ ಎಂಬ ಆಶಯದೊಂದಿಗೆ ದೇವರ ಮೊರೆ ಹೋಗಿದ್ದಾರೆ.
ದರ್ಶನ್ ಅವರ ಕಾನೂನು ಹೋರಾಟದ ನಡುವೆಯೇ ತಾಯಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ಇದೀಗ ಸಾರ್ವಜನಿಕರ ಗಮನ ಸೆಳೆದಿದೆ. ಪುತ್ರನ ಮೇಲಿನ ತಾಯಿಯ ಕಾಳಜಿ ಹಾಗೂ ಪ್ರಾರ್ಥನೆಯ ಕ್ಷಣಗಳು ಅಭಿಮಾನಿಗಳಲ್ಲೂ ಭಾವುಕತೆ ಮೂಡಿಸಿವೆ.
ಮಗನಿಗಾಗಿ ತಾಯಿಯ ಪ್ರಾರ್ಥನೆ.. ಅಭಿಮಾನಿಗಳಲ್ಲೂ ಭಾವುಕತೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಕಾನೂನು ಹೋರಾಟ ಎದುರಿಸುತ್ತಿದ್ದಾರೆ. ಪ್ರಕರಣದ ಬೆಳವಣಿಗೆಗಳ ನಡುವೆಯೇ ಮೀನಾ ತೂಗುದೀಪ ದೇವರ ಮೊರೆ ಹೋಗಿರುವುದು ಇದೀಗ ಚರ್ಚೆಯಾಗುತ್ತಿದೆ. ಇನ್ನು ದರ್ಶನ್ ಅವರ ಸಂಕಷ್ಟಗಳು ದೂರವಾಗಿ, ಅವರಿಗೆ ನೆಮ್ಮದಿ ಹಾಗೂ ಉತ್ತಮ ದಿನಗಳು ಮರಳಲಿ” ಎಂಬುದು ತಾಯಿಯ ಪ್ರಾರ್ಥನೆಯಾಗಿದ್ದು, ಈ ವಿಶೇಷ ಪೂಜೆ ಇದೀಗ ದರ್ಶನ್ ಅಭಿಮಾನಿಗಳ ಗಮನವನ್ನೂ ಸೆಳೆದಿದೆ.


