ಬಿಗ್‌ ಬಾಸ್ ಕನ್ನಡ ಸೀಸನ್ 13ರ ಅಧಿಕೃತ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಂದು ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಬಿಗ್‌ ಬಾಸ್ ಮನೆಗೆ ಸ್ವಾಗತಿಸಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಫ್ಲೈಟ್ ಕ್ಯಾಪ್ಟನ್ ಅವತಾರದಲ್ಲಿ ಕಿಚ್ಚ ಸುದೀಪ್ ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 6ರ ಸಂಜೆ ಕಿಚ್ಚ ಸುದೀಪ್ ಅದ್ಧೂರಿಯಾಗಿ ಹೊಸ ಸೀಸನ್‌ಗೆ ಚಾಲನೆ ನೀಡಲಿದ್ದಾರೆ. ಒಬ್ಬೊಬ್ಬರಾಗಿ ಸ್ಪರ್ಧಿಗಳು ಬಿಗ್‌ ಬಾಸ್ ಮನೆ ಪ್ರವೇಶಿಸುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಮನೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಅದೂ ಸಾಮಾನ್ಯವಾಗಿ ಅಲ್ಲ.. ಫ್ಲೈಟ್ ಕ್ಯಾಪ್ಟನ್ ಅವತಾರದಲ್ಲಿ!

ಈ ಬಾರಿ ಬಿಗ್‌ ಬಾಸ್ ಮನೆಯೊಳಗೆ ಏನೆಲ್ಲಾ ಬದಲಾವಣೆ ಮಾಡಲಾಗಿದೆ? ಮನೆ ಹೇಗಿದೆ? ಹೊಸ ಸೀಸನ್‌ನಲ್ಲಿ ಪ್ರೇಕ್ಷಕರಿಗೆ ಏನೆಲ್ಲಾ ಸರ್ಪ್ರೈಸ್ ಕಾದಿದೆ? ಎಂಬ ಕುತೂಹಲಕ್ಕೆ ಸುದೀಪ್ ಅವರೇ ಮೊದಲ ಸುಳಿವು ನೀಡಿದ್ದಾರೆ.

ಫ್ಲೈಟ್ ಕ್ಯಾಪ್ಟನ್ ಆಗಿ ಕಿಚ್ಚನ ಗ್ರ್ಯಾಂಡ್ ಎಂಟ್ರಿ!

ಬಿಗ್‌ ಬಾಸ್ ಸೀಸನ್ 13ರ ಅಧಿಕೃತ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗಲೇ ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲೈಟ್ ಕ್ಯಾಪ್ಟನ್ ವೇಷ ಧರಿಸಿ ವಿಮಾನ ಏರಿ ನೇರವಾಗಿ ಬಿಗ್‌ ಬಾಸ್ ಮನೆಗೆ ಬಂದಿರುವ ಕಿಚ್ಚ, ಮನೆಯೊಳಗೆ ಕಾಲಿಟ್ಟ ಕ್ಷಣವೇ ಪ್ರೋಮೊದಲ್ಲಿ ಗಮನ ಸೆಳೆದಿದ್ದಾರೆ. ಮನೆಯ ಬಾಗಿಲಿಗೆ ಬಂದ ಸುದೀಪ್, ಬಲಗಾಲಿಟ್ಟು ಬಿಗ್‌ ಬಾಸ್ ಮನೆಯೊಳಗೆ ಹೆಜ್ಜೆ ಇಟ್ಟಿದ್ದಾರೆ. ಬಳಿಕ ಕ್ಯಾಪ್ಟನ್ ಲುಕ್‌ನಲ್ಲೇ ಮನೆಯ ಪ್ರತಿಯೊಂದು ಭಾಗವನ್ನೂ ಸುತ್ತಾಡಿ ಪರಿಶೀಲಿಸಿದ್ದಾರೆ.

ಈ ಬಾರಿ ಬಿಗ್‌ ಬಾಸ್ ಮನೆ ಹೇಗಿದೆ?

ಸ್ಪರ್ಧಿಗಳು ಮನೆಯೊಳಗೆ ಕಾಲಿಡುವ ಮುನ್ನವೇ ವೀಕ್ಷಕರಿಗೆ ಹೊಸ ಮನೆಯ ಪರಿಚಯ ಮಾಡಿಕೊಡುವ ಜವಾಬ್ದಾರಿಯನ್ನು ಸುದೀಪ್ ಹೊತ್ತುಕೊಂಡಿದ್ದಾರೆ. ಮನೆಯ ಒಳಾಂಗಣ, ಹೊಸ ಬದಲಾವಣೆಗಳು ಹಾಗೂ ಈ ಸೀಸನ್‌ನಲ್ಲಿ ಮಾಡಿರುವ ವಿಶೇಷ ವ್ಯವಸ್ಥೆಗಳನ್ನು ಪ್ರೋಮೊ ಮೂಲಕ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಕಿಚ್ಚ ಮನೆಯೊಳಗೆ ಓಡಾಡುತ್ತಾ ಒಂದೊಂದೇ ಜಾಗವನ್ನು ಗಮನಿಸುವ ದೃಶ್ಯಗಳು ಈಗಾಗಲೇ ಕುತೂಹಲ ಹೆಚ್ಚಿಸಿವೆ. ಹೀಗಾಗಿ ಈ ಬಾರಿ ಬಿಗ್‌ ಬಾಸ್ ಮನೆ ಹಿಂದಿನ ಸೀಸನ್‌ಗಳಿಗಿಂತ ಹೇಗೆ ವಿಭಿನ್ನವಾಗಿರಲಿದೆ? ಎಂಬ ಪ್ರಶ್ನೆಗೆ ಪ್ರೇಕ್ಷಕರಿಗೆ ನಿಧಾನವಾಗಿ ಉತ್ತರ ಸಿಗುತ್ತಿದೆ.

ನಾಳೆಯಿಂದ ಶುರುವಾಗಲಿದೆ ಅಸಲಿ ಆಟ!

ಮನೆಯ ಪರಿಚಯವನ್ನು ಕಿಚ್ಚ ಮಾಡಿಕೊಟ್ಟಿದ್ದರೂ, ನಿಜವಾದ ಆಟ ಶುರುವಾಗುವುದು ಸೆಪ್ಟೆಂಬರ್ 6ರ ಸಂಜೆ. ಅಂದು ಸುದೀಪ್ ಅವರು ಹೊಸ ಸೀಸನ್‌ನ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಬಿಗ್‌ ಬಾಸ್ ಮನೆಗೆ ಸ್ವಾಗತಿಸಲಿದ್ದಾರೆ. ಯಾರು ಮನೆಯೊಳಗೆ ಕಾಲಿಡುತ್ತಾರೆ? ಮೊದಲ ದಿನವೇ ಏನೆಲ್ಲಾ ಟ್ವಿಸ್ಟ್‌ಗಳು ಎದುರಾಗುತ್ತವೆ? ಯಾರು ಮೊದಲಿನಿಂದಲೇ ಗಮನ ಸೆಳೆಯುತ್ತಾರೆ? ಎಂಬ ಕುತೂಹಲದ ನಡುವೆಯೇ ಬಿಗ್‌ ಬಾಸ್ ಕನ್ನಡ ಸೀಸನ್ 13ಕ್ಕೆ ಅದ್ಧೂರಿ ಚಾಲನೆ ಸಿಗಲಿದೆ.

ಇನ್ನು ಸ್ಪರ್ಧಿಗಳು ಬರುವುದಕ್ಕೂ ಮುನ್ನವೇ ಕಿಚ್ಚ ಸುದೀಪ್ ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ಟು ಸೀಸನ್ 13ರ ಹೈಪ್ ಹೆಚ್ಚಿಸಿದ್ದಾರೆ. ಇನ್ನು ನಾಳೆಯಿಂದ ಕಿಚ್ಚನ ಮುಂದೆ ಶುರುವಾಗಲಿದೆ ಅಸಲಿ ಬಿಗ್‌ ಬಾಸ್ ಆಟ!