- Home
- Entertainment
- Gowrishankar SRG: ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್
Gowrishankar SRG: ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ, 'ಕೆರೆಬೇಟೆ' ಸಿನಿಮಾ ನಾಯಕನಿಗೆ ಫಿಲ್ಮ್‌ಫೇರ್
'ಕೆರೆಬೇಟೆ' ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ನಟ ಗೌರಿಶಂಕರ್ ಎಸ್‌ಆರ್‌ಜಿ ಅವರು 70ನೇ ಫಿಲ್ಮ್‌ಫೇರ್ ಪ್ರಶಸ್ತಿ (ದಕ್ಷಿಣ) ಸಮಾರಂಭದಲ್ಲಿ ಅತ್ಯುತ್ತಮ ನಟ (ವಿಮರ್ಶಕ) ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಕೆರೆಬೇಟೆ ಬೇಟೆಗಾರನಿಗೆ ಫಿಲ್ಮ್‌ಫೇರ್ ಗೌರವ!
ಕನ್ನಡ ಚಿತ್ರರಂಗದ ನಟ ಗೌರಿಶಂಕರ್ ಎಸ್‌ಆರ್‌ಜಿ ಅವರು 70ನೇ ಫಿಲ್ಮ್‌ಫೇರ್ ಪ್ರಶಸ್ತಿಗಳ (ದಕ್ಷಿಣ) ಸಮಾರಂಭದಲ್ಲಿ ಕನ್ನಡಕ್ಕ ಅತ್ಯುತ್ತಮ ನಟ (ವಿಮರ್ಶಕರ ಪ್ರಶಸ್ತಿ)ಯನ್ನು ಪಡೆದುಕೊಂಡಿದ್ದಾರೆ. 'ಕೆರೆಬೇಟೆ' ಚಿತ್ರದಲ್ಲಿನ ಅಭಿನಯಕ್ಕಾಗಿ ಗೌರಿಶಂಕರ್ ಅವರಿಗೆ ಈ ಗೌರವ ದೊರೆತಿದೆ.
ನಾಯಕ ನಟರಾಗಿ ಕನ್ನಡ ಚಿತ್ರಕ್ಕೆ ಪಾದಾರ್ಪಣೆ
2010ರಲ್ಲಿ ಬಿಡುಗಡೆಯಾದ 'ಜೋಕಾಲಿ' ಸಿನಿಮಾ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದ ಗೌರಿಶಂಕರ್ ಅವರು, ಆ ಚಿತ್ರದ 'ಚುಚ್ಚಿ ಚುಚ್ಚಿ ಕೊಂದೆಯಲ್ಲೇ' ಸೇರಿದಂತೆ ಎಲ್ಲಾ ಹಾಡುಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿತ್ತು.
ಕಿರುತೆರೆಯಲ್ಲಿ ದಾಖಲೆ ಬರೆದ ಸಿನಿಮಾ
2017ರಲ್ಲಿ 'ರಾಜಹಂಸ' ಕೌಟುಂಬಿಕ ಕಥಾಹಂದರ ಸಿನಿಮಾದೊಂದಿಗೆ ಕನ್ನಡ ಪ್ರೇಕ್ಷಕರ ಎದುರಿಗೆ ಬಂದಿದ್ದರು. ವಿಮರ್ಶಕರಿಂದ ಪ್ರಶಂಸೆ ಪಡೆದ ಈ ಚಿತ್ರ ಕಳೆದ ಮೂರು ವರ್ಷಗಳಲ್ಲಿ ಕಿರುತೆರೆಯಲ್ಲಿ 190ಕ್ಕಿಂತ ಹೆಚ್ಚು ಪ್ರಸಾರ ಆಗಿ ದಾಖಲೆ ನಿರ್ಮಿಸಿದೆ.
ಗ್ರಾಮೀಣ ಹಿನ್ನೆಲೆಯ ಕಲ್ಟ್ ಸಿನಿಮಾ 'ಕೆರೆಬೇಟೆ'
2024ರಲ್ಲಿ ಬಿಡುಗಡೆಯಾದ 'ಕೆರೆಬೇಟೆ' ಸಿನಿಮಾ ಗ್ರಾಮೀಣ ಹಿನ್ನೆಲೆಯ ಕಲ್ಟ್ ಸಿನಿಮಾ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಗೌರಿಶಂಕರ್ ಅವರು ಈ ಚಿತ್ರದಲ್ಲಿ ಹೃದಯಸ್ಪರ್ಶಿ ಮತ್ತು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದ್ದಾರೆ.
'ಕಾಮನ್ ಮ್ಯಾನ್ ನಾನೇ ಸಿಎಂ' ಸಿನಿಮಾದಲ್ಲಿ ಬ್ಯುಸಿ
ಕೆರೆಬೇಟೆ ಸಿನಿಮಾ ಗೋವಾದಲ್ಲಿ ನಡೆದ 55ನೇ ಅಂತರರಾಷ್ಟ್ರೀಯ ಚಲಚಿತ್ರೋತ್ಸವದ (ಐಎಫ್‌ಎಫ್‌ಐ 2024) ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿ ಪ್ರದರ್ಶನಗೊಂಡಿತ್ತು. ಇದು ಕನ್ನಡ ಚಿತ್ರಕ್ಕೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟಿತ್ತು. ನಟ ಗೌರಿಶಂಕರ್ ಅವರು ಸದ್ಯ 'ಕಾಮನ್ ಮ್ಯಾನ್ ನಾನೇ ಸಿಎಂ' ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, 2026 ಸೆಪ್ಟೆಂಬರ್ 25ರಂದು ಬಿಡುಗಡೆಗೆ ಸಿದ್ಧತೆವಾಗಿದೆ.
ಗೌರಿಶಂಕರ್ ಎಸ್.ಆರ್.ಜಿ ನಾಯಕ ನಟ ಮಾತ್ರವಲ್ಲ!
ಗೌರಿಶಂಕರ್ ಎಸ್.ಆರ್.ಜಿ ಅವರು ನಾಯಕ ನಟ ಮಾತ್ರವಲ್ಲದೇ, ಚಿತ್ರಕಥೆಗಾರ ಹಾಗೂ ನಿರ್ಮಾಪಕರು ಆಗಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಂಕರಹಳ್ಳಿ ಗ್ರಾಮದ ಕೃಷಿ ಕುಟುಂದಲ್ಲಿ ಜನಿಸಿದ್ದರು. ನಟನೆಯೊಂದಿಗೆ ಕೃಷಿಕರು ಆಗಿರುವ ಗೌರಿಶಂಕರ್ ಅವರು, ಚಿತ್ರರಂಗಕ್ಕೆ ಬರುವ ಮುನ್ನ ಜಿಮ್ನಾಸ್ಟಿಕ್ಸ್ ಪಟ್ಟುವು ಆಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

