ಬೆಂಗಳೂರಿನಲ್ಲಿ ಭೋಗ್ಯಕ್ಕೆ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ₹5 ಲಕ್ಷ ಪಡೆದು ವಂಚಿಸಿದ್ದ ಅಬ್ದುಲ್ ಹಸನ್ ಎಂಬಾತನನ್ನು ಡಿ.ಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹಣ ವಾಪಸ್ ಕೇಳಿದಾಗ ನಿಂದಿಸಿದ್ದ ಆರೋಪಿಯು, ಇದೇ ರೀತಿ ಹಲವರಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.
State News Live: ಬೆಂಗಳೂರಲ್ಲಿ ಲೀಸ್‌ಗೆ ಮನೆ ಪಡೆಯುವ ಮುನ್ನ ಜಾಗ್ರತೆ; ಹೀಗೂ ಆಗಬಹುದು!

ಬೆಂಗಳೂರು (ಜ.26): ಸುವರ್ಣನ್ಯೂಸ್-ಕನ್ನಡಪ್ರಭ ಅಸಮಾನ್ಯ ಕನ್ನಡಿಗ 'ಪುಸ್ತಕ ಮನೆ' ಅಂಕೇಗೌಡ ಸೇರಿ ರಾಜ್ಯದ 9 ಮಂದಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ. ನವದೆಹಲಿ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದ್ದು, ಕರ್ನಾಟಕದ 9 ಸಾಧಕರು ಭಾಜನರಾಗಿದ್ದಾರೆ. ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಉಳಿದಂತೆ ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ದೇಶದ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
Karnataka News Live 26th January:ಬೆಂಗಳೂರಲ್ಲಿ ಲೀಸ್‌ಗೆ ಮನೆ ಪಡೆಯುವ ಮುನ್ನ ಜಾಗ್ರತೆ; ಹೀಗೂ ಆಗಬಹುದು!
Karnataka News Live 26th January:ಹಳ್ಳಿಗಳಲ್ಲಿ ಮದ್ಯ ಮಾರಾಟ ಹೆಚ್ಚಳ, ಗ್ಯಾರಂಟಿ ಹಣಕ್ಕೆ ಸರ್ಕಾರದಿಂದ ಕುಡುಕರ ಸೃಷ್ಟಿ - ಬಿವೈ ವಿಜಯೇಂದ್ರ ಟೀಕೆ!
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಗ್ರಾಮೀಣ ದಿನಸಿ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಇದು ಕುಡುಕರ ಸಾಮ್ರಾಜ್ಯ ನಿರ್ಮಿಸುವ ಪ್ರಯತ್ನವಾಗಿದೆ ಎಂದಿದ್ದಾರೆ.
Karnataka News Live 26th January:ಸಾವಿರಾರು ಕೋಟಿ ಒಡೆಯನಾದ್ರೂ ಹೆಂಡ್ತಿ ಹಾಕಿದ ಕಂಡೀಶನ್ ಮೀರಲ್ಲ ಪದ್ಮಶ್ರೀ ಪುರಸ್ಕೃತ ಈ ನಟ! ಯಾರದು?
Padma Shri awardee actor Murali Mohan: ತೆಲುಗು, ತಮಿಳು ಭಾಷೆಯ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮುರಳಿ ಮೋಹನ್ ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಆದರೂ ಅವರು ಹೆಂಡತಿ ಹಾಕಿದ ಈ ಕಂಡೀಶನ್ ಎಂದೂ ಮುರಿದಿಲ್ಲ. ಏನದು?
Karnataka News Live 26th January:ಪೋಕ್ಸೋ ಕನಿಷ್ಠ ಶಿಕ್ಷೆ ಮೇಲ್ಮನವಿ ಸಲ್ಲಿಸಲು ತಡ, ಸರ್ಕಾರಕ್ಕೇ ದಂಡ ವಿಧಿಸಿದ ಕೋರ್ಟ್!
ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ವಿಧಿಸಿದ್ದ ಕಡಿಮೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು 535 ದಿನಗಳ ಕಾಲ ವಿಳಂಬ ಮಾಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
Karnataka News Live 26th January:ಪದ್ಮ ಪ್ರಶಸ್ತಿ ಪುರಸ್ಕೃತ ಕನ್ನಡಿಗರಿವರು
ಶತಾವಧಾನಿ ಗಣೇಶ್, ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಪದ್ಮ ವಿಜೇತರು. ಈ ಪೈಕಿ ಗಣೇಶ್ ಅವರಿಗೆ ಪದ್ಮಭೂಷಣ ಬಂದಿದ್ದರೆ, ಉಳಿದವರಿಗೆ ಪದ್ಮಶ್ರೀ ಸಂದಿದೆ.
Karnataka News Live 26th January:ಇತಿಹಾಸದಲ್ಲೇ ಇದೇ ಮೊದಲ ಬಾರಿ ಲಾಲ್‌ಬಾಗ್ ಪುಷ್ಪ ಪ್ರದರ್ಶನದಿಂದ ಭಾರೀ ಗಳಿಕೆ
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸುತ್ತಿರುವ ಫಲಪುಷ್ಪ ಪ್ರದರ್ಶನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತ್ಯಧಿಕ ಟಿಕೆಟ್ ಹಣ ಸಂಗ್ರಹವಾಗುವ ನಿರೀಕ್ಷೆ ತೋಟಗಾರಿಕೆ ಇಲಾಖೆಯದ್ದು.
Karnataka News Live 26th January:ಲವರ್‌ಗೆ ಬೆತ್ತಲೆ ಫೋಟೋ ಕಳಿಸಿದ 19 ವರ್ಷದ ಯುವತಿ, ಶುರುವಾಯ್ತು ಸಂಕಷ್ಟ! ಈ ತಪ್ಪು ಮಾಡಲೇಬೇಡಿ
Karnataka News Live 26th January:Photos - ರಿಯಲ್ ಆಗಿ ನಿಶ್ಚಿತಾರ್ಥ ಮಾಡ್ಕೊಂಡ Puttakkana Makkalu Serial ನಟಿ ಸಂಜನಾ ಬುರ್ಲಿ
Actress Sanjana Burli Photos: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಆಗಿ ಅನೇಕ ಜನರ ಮನಸ್ಸು ಗೆದ್ದಿದ್ದ ನಟಿ ಸಂಜನಾ ಬುರ್ಲಿ ಅವರು ಗುಡ್‌ನ್ಯೂಸ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Karnataka News Live 26th January:ನೈತಿಕ ಪೊಲೀಸ್‌ಗಿರಿಯಿಂದ ತಪ್ಪಿಸಿಕೊಳ್ಳಲು ಪಿಜ್ಜಾ ಶಾಪ್‌ನ 2ನೇ ಮಹಡಿಯಿಂದ ಕೆಳಗೆ ಹಾರಿದ ಜೋಡಿ
ಹಿಂದೂ ಸಂಘಟನೆಗಳ ನೈತಿಕ ಪೊಲೀಸ್‌ಗಿರಿಗೆ ಬೆದರಿ ಜೋಡಿಯೊಂದು ಪಿಜ್ಜಾ ಶಾಪೊಂದರ 2ನೇ ಮಹಡಿಯಿಂದ ಹಾರಿದ ಘಟನೆ ಉತ್ತರ ಪ್ರದೇಶದ ಶಹಜಾಹಾನ್‌ಪುರದ ಬರೇಲಿ ಸಮೀಪದ ಮೊರ್ಹ್ ಎಂಬಲ್ಲಿ ನಡೆದಿದೆ ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Karnataka News Live 26th January:ಡಿಕೆಶಿಗೂ ನನಗೂ ಹೋಲಿಕೆ ಮಾಡಬೇಡಿ : ಎಚ್ಡಿಕೆ
ಬಿಡದಿ ಟೌನ್‌ಶಿಪ್ ಯೋಜನೆಗೆ ಒಂದಿಂಚು ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಬಿಡುವುದಿಲ್ಲ. ಈ ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಮಾತ್ರವಲ್ಲ ಯಾರು ಬೇಕಾದರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
Karnataka News Live 26th January:ಸನ್ನಡತೆ ಕೈದಿಗಳಿಗೆ ಸಿಹಿ ಸುದ್ದಿ- ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಬಂಪರ್ ಆಫರ್
ಕರುನಾಡಿನ ಸೆರೆಮನೆಗಳಲ್ಲಿ ‘ಸುಧಾರಣಾ ಪರ್ವ’ ಶುರುವಾಗಿದ್ದು, ಇನ್ಮುಂದೆ ಸನ್ನಡತೆ ತೋರುವ ಕೈದಿಗಳಿಗೆ ಕನಿಷ್ಠ 2 ತಿಂಗಳು ಶಿಕ್ಷೆ ಪ್ರಮಾಣ ಕಡಿತ,ಉತ್ತಮ ಕರ್ತವ್ಯ ನಿರ್ವಹಿಸಿರುವ ಕಾರಾಗೃಹದ ಅಧಿಕಾರಿ-ಸಿಬ್ಬಂದಿಗೆ ಬಹುಮಾನ ಜತೆ ‘ಹೊರ ರಾಜ್ಯ ಪ್ರವಾಸ’ ಭಾಗ್ಯ ಸಿಗಲಿದೆ.
Karnataka News Live 26th January:ಬೆಳಗಾವಿ ಬಳಿ ₹400 ಕೋಟಿ ದರೋಡೆ ಪ್ರಕರಣ-ಕಂಟೇನರ್‌ಗಾಗಿ ಭಾರೀ ಹುಡುಕಾಟ : 6 ಜನ ಅರೆಸ್ಟ್
ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ₹400 ಕೋಟಿ ನಗದು ಹೊಂದಿದ್ದ ಎರಡು ಕಂಟೇನರ್‌ಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಸ್ಐಟಿ ತಂಡ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.
Karnataka News Live 26th January:ಮೈಸೂರಿನ ಮಾಜಿ ಬಸ್ ಕಂಡಕ್ಟರ್ ಸೇರಿ 45 ಅನನ್ಯ ತೆರೆಮರೆ ಸಾಧಕರಿಗೆ ಪದ್ಮ ಗೌರವ
ಜಗತ್ತಿನ ಅತಿ ದೊಡ್ಡ ಮುಕ್ತ ಗ್ರಂಥಾಲಯ ಸ್ಥಾಪಿಸಿದ ಮಾಜಿ ಬಸ್ ಕಂಡಕ್ಟರ್ ಅಂಕೇಗೌಡ, ಏಷ್ಯಾದ ಮೊದಲ ಮಾನವ ಎದೆಹಾಲಿನ ಬ್ಯಾಂಕ್ ರಚಿಸಿದ ಮಕ್ಕಳ ವೈದ್ಯೆ ಅರ್ಮಿದಾ ಫರ್ನಾಂಡಿಸ್, 90 ವರ್ಷದ ಬುಡಕಟ್ಟು ಸಂಗೀತವಾದ್ಯದ ವಾದಕ ಭಿಕ್ಲ್ಯಾ ಲಡಾಕ್ಯ ಧಿಂಡಾ ಸೇರಿ 45 ಮಂದಿ ಸಾಧಕರು ಪದ್ಮ ಪ್ರಶಸ್ತಿಗೆ ಆಯ್ಕೆ
Karnataka News Live 26th January:2018ರಲ್ಲಿ ಸಿದ್ದು ಹೇಳಿದ್ದ ಭವಿಷ್ಯ ಏನಾಯ್ತು : ಹೊಸ ಭವಿಷ್ಯದ ನುಡಿದ ಎಚ್‌ಡಿಕೆ
‘2018ರ ವಿಧಾನಸಭಾ ಚುನಾವಣೆ ವೇಳೆ ಇದೇ ಸಿದ್ದರಾಮಯ್ಯ, ‘ಅವರಪ್ಪನಾಣೆ ಎಚ್ಡಿಕೆ ಸಿಎಂ ಆಗಲ್ಲ’ ಎಂದಿದ್ದರು. ಆಮೇಲೆ, ಚುನಾವಣಾ ಫಲಿತಾಂಶದ ಬಳಿಕ ಮನೆ ಬಾಗಿಲಿಗೆ ಅವರೇ ಬಂದ್ರು. ನೀವೇ ಸಿಎಂ ಆಗಿ ಎಂದ್ರು. ನಾನು ಸಿಎಂ ಆದೆ. ಈಗಲೂ ಅವರ ಹೇಳಿಕೆಯಿಂದ ನಾವು ನಮ್ಮ ನಿರೀಕ್ಷೆ ಮುಟ್ಟುತ್ತೇವೆ.
Karnataka News Live 26th January:2028ಕ್ಕೂ ಬಿಜೆಪಿ, ದಳ ಅಧಿಕಾರಕ್ಕೇರಲ್ಲ : ಸಿದ್ದರಾಮಯ್ಯ
‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರೋದಿಲ್ಲ. 2028ರಲ್ಲೂ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತೆ. ಜೆಡಿಎಸ್-ಬಿಜೆಪಿಯವರು ಮೈತ್ರಿ ಮಾಡಿಕೊಂಡರೂ ಕೂಡ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Karnataka News Live 26th January:ಬೆಂಗಳೂರು ಯುವಕರ ಸ್ವಚ್ಛತಾ ಕಾಳಜಿಗೆ ಪ್ರಧಾನಿ ಮೋದಿ ಶ್ಲಾಘನೆ
ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ದೇಶವಾಸಿಗಳು, ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಯುವಕರು ತೋರಿಸುತ್ತಿರುವ ಕಾಳಜಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Karnataka News Live 26th January:131 ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ - 90 ಮಹಿಳೆಯರು
ಗಣರಾಜ್ಯೋತ್ಸವದ ಮುನ್ನಾದಿನದಂದು, ಸರ್ಕಾರವು 2026ರ 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಕೇರಳದ ಮಾಜಿ ಸಿಎಂ ಮತ್ತು ಹಿರಿಯ ಕಮ್ಯುನಿಸ್ಟ್ ನಾಯಕ ವಿ.ಎಸ್. ಅಚ್ಯುತಾನಂದನ್ ಮತ್ತು ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ನೀಡಲಾಗಿದೆ.