MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Karnataka Districts
  • ಬೆಂಗಳೂರು ರೌಡಿಶೀಟರ್ ಶಬ್ಬೀರ್ ಹತ್ಯೆ: ಹವಾ ಮೆಂಟೇನ್, ಹಫ್ತಾ ವಸೂಲಿ ವಿಚಾರಕ್ಕೆ ಹೊಡೆದು ಹಾಕಿದ 11 ಜನರ ಗ್ಯಾಂಗ್!

ಬೆಂಗಳೂರು ರೌಡಿಶೀಟರ್ ಶಬ್ಬೀರ್ ಹತ್ಯೆ: ಹವಾ ಮೆಂಟೇನ್, ಹಫ್ತಾ ವಸೂಲಿ ವಿಚಾರಕ್ಕೆ ಹೊಡೆದು ಹಾಕಿದ 11 ಜನರ ಗ್ಯಾಂಗ್!

ಬೆಂಗಳೂರಿನ ಬಂಡೆಪಾಳ್ಯದಲ್ಲಿ ನಡೆದ ರೌಡಿಶೀಟರ್ ಶಬ್ಬೀರ್ ಕೊಲೆ ಪ್ರಕರಣವು ಹಫ್ತಾ ವಸೂಲಿ ಮತ್ತು ಜಾಗದ ವಿವಾದದಿಂದ ನಡೆದಿದೆ. ಈ ವ್ಯವಸ್ಥಿತ ಕೃತ್ಯದಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕಠಿಣ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

2 Min read
Author : Sathish Kumar KH
Published : Jan 26 2026, 05:36 PM IST
Share this Photo Gallery
  • FB
  • TW
  • Linkdin
  • Whatsapp
15
ಕೋಕಾ ಕಾಯ್ದೆಯಡಿ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜು
Image Credit : Asianet News

ಕೋಕಾ ಕಾಯ್ದೆಯಡಿ ಕ್ರಮಕ್ಕೆ ಪೊಲೀಸ್ ಇಲಾಖೆ ಸಜ್ಜು

ಬೆಂಗಳೂರು (ಜ.26): ಸಿಲಿಕಾನ್ ಸಿಟಿಯ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿಶೀಟರ್ ಶಬ್ಬೀರ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯಗಳು ಹೊರಬಿದ್ದಿವೆ. ಹಫ್ತಾ ವಸೂಲಿ ಮತ್ತು ಏರಿಯಾದಲ್ಲಿ ಹವಾ ಮೆಂಟೇನ್ ಮಾಡುವ ಕುರಿತಾಗಿ ಆರಂಭವಾದ ಜಗಳವೇ ಈ ಕೊಲೆಗೆ ಪ್ರಮುಖ ಕಾರಣವಾಗಿದೆ. ಈ ಕೊಲೆಗೆ ಸಂಬಂಧಿಸಿದಂತೆ, ಬಂಧಿತ 11 ಮಂದಿ ಆರೋಪಿಗಳ ವಿರುದ್ಧ ಕಠಿಣ 'ಕೋಕಾ' (KOKA) ಕಾಯ್ದೆ ಅಡಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಹವಾ ಮೆಂಟೇನ್ ಹಾಗೂ ಹಫ್ತಾ ಕಿರುಕುಳ
Image Credit : Asianet News

ಹವಾ ಮೆಂಟೇನ್ ಹಾಗೂ ಹಫ್ತಾ ಕಿರುಕುಳ

ಕೊಲೆಯಾದ ಶಬ್ಬೀರ್ ಬಂಡೆಪಾಳ್ಯ ಭಾಗದಲ್ಲಿ ರೌಡಿಶೀಟರ್ ಆಗಿದ್ದು, ತನ್ನ ಹವಾ ಮೆಂಟೇನ್ ಮಾಡಲು ಸಾರ್ವಜನಿಕರಿಗೆ ನಿರಂತರ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮುಖ್ಯವಾಗಿ ಸ್ಥಳೀಯ ಗುಜರಿ ಅಂಗಡಿ ಮಾಲೀಕರಿಂದ ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಂದ ನಿಯಮಿತವಾಗಿ ಹಫ್ತಾ ವಸೂಲಿ ಮಾಡುತ್ತಿದ್ದ. ಇದರಿಂದ ಸ್ಥಳೀಯರು ತೀವ್ರವಾಗಿ ರೋಸಿ ಹೋಗಿದ್ದರು.

Related Articles

Related image1
ಬೆಂಗಳೂರು ಲೋಕಲ್ ರೌಡಿ ಆಟೋ ನಾಗನ ದುರಂತ ಅಂತ್ಯ! ಎಣ್ಣೆ ಪಾರ್ಟಿಗೆ ಕರೆದೊಯ್ದು ಫಾರ್ಮ್‌ಹೌಸಲ್ಲಿ ಮರ್ಡರ್
Related image2
ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಬರ್ಬರ ಹತ್ಯೆ, ಐವರು ಅರೆಸ್ಟ್, ಕೊಲೆಗೆ ಸ್ಕೆಚ್ ಹೇಗೆ ನಡೆದಿತ್ತು?
35
ಜಾಗದ ತಕರಾರು ಮತ್ತು ಸ್ಕೆಚ್
Image Credit : Asianet News

ಜಾಗದ ತಕರಾರು ಮತ್ತು ಸ್ಕೆಚ್

ಕೊಲೆಗೆ ಪ್ರಮುಖ ಕಾರಣವಾಗಿದ್ದು ಒಂದು ಜಾಗದ ವಿವಾದ. ಮಸೀದಿ ಪಕ್ಕದಲ್ಲಿದ್ದ ಆರೋಪಿ ಸನ್ನಿ ಎಂಬಾತನ ಸಹೋದರಿಯ ಜಾಗದ ಮೇಲೆ ಶಬ್ಬೀರ್ ಕಣ್ಣು ಹಾಕಿದ್ದ. 'ಈ ಜಾಗವನ್ನು ನನಗೆ ಬಿಟ್ಟುಕೊಡಬೇಕು, ಇಲ್ಲವಾದರೆ ನಾನೇ ಇಲ್ಲಿ ಕಾಂಪೌಂಡ್ ಹಾಕುತ್ತೇನೆ' ಎಂದು ಸನ್ನಿಗೆ ನೇರವಾಗಿ ಧಮ್ಕಿ ಹಾಕಿದ್ದ. ಶಬ್ಬೀರ್ ಕಿರುಕುಳ ಮಿತಿಮೀರಿದಾಗ, ಸನ್ನಿ ಮತ್ತು ಆತನ 10 ಮಂದಿ ಸಹಚರರು ಸೇರಿ ಶಬ್ಬೀರ್‌ನನ್ನು ಮುಗಿಸಲು ಗ್ಯಾರೇಜ್‌ವೊಂದರಲ್ಲಿ ಕುಳಿತು ಪ್ಲಾನ್ ಮಾಡಿದ್ದರು.

45
ಸಿನೆಮಾ ಶೈಲಿಯಲ್ಲಿ ದಾಳಿ - ಪರಾರಿ
Image Credit : Asianet News

ಸಿನೆಮಾ ಶೈಲಿಯಲ್ಲಿ ದಾಳಿ - ಪರಾರಿ

ಯೋಜನೆಯಂತೆ ಶಬ್ಬೀರ್ ಒಂಟಿಯಾಗಿರುವುದನ್ನು ಗಮನಿಸಿದ ಆರೋಪಿಗಳು, ಮೊದಲು ಆತನ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಶಬ್ಬೀರ್ ಚೇತರಿಸಿಕೊಳ್ಳುವಷ್ಟರಲ್ಲಿ 11 ಮಂದಿ ಹಂತಕರು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಕೃತ್ಯ ಎಸಗಿದ ಬಳಿಕ ರಕ್ತಸಿಕ್ತ ಮಾರಕಾಸ್ತ್ರಗಳನ್ನು ಒಂದು ಕಡೆ ಬಚ್ಚಿಟ್ಟು, ಆಟೋ ಮೂಲಕ ಕೆ.ಆರ್. ಪುರಂ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದಾರೆ. ಅಲ್ಲಿಂದ ಮುಂಬೈ, ರಾಜಸ್ಥಾನ ಮತ್ತು ಹೈದರಾಬಾದ್‌ಗೆ ಪರಾರಿಯಾಗಿದ್ದರು.

55
ಪೊಲೀಸರಿಂದ ಬೇಟೆ ಮತ್ತು 'ಕೋಕಾ' ಎಚ್ಚರಿಕೆ
Image Credit : Asianet News

ಪೊಲೀಸರಿಂದ ಬೇಟೆ ಮತ್ತು 'ಕೋಕಾ' ಎಚ್ಚರಿಕೆ

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಅವರ ನೇತೃತ್ವದ ವಿಶೇಷ ತಂಡವು ತಾಂತ್ರಿಕ ಕಾರ್ಯಾಚರಣೆ ನಡೆಸಿ, ವಿವಿಧ ರಾಜ್ಯಗಳಲ್ಲಿ ಅವಿತಿದ್ದ ಎಲ್ಲಾ 11 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿದ ಡಿಸಿಪಿ, 'ಇದು ವ್ಯವಸ್ಥಿತವಾಗಿ ನಡೆದ ಕೊಲೆಯಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹಾಕಲು ಸಿದ್ಧತೆ ನಡೆಸಿದ್ದೇವೆ' ಎಂದು ತಿಳಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ಕ್ರೈಮ್ ನ್ಯೂಸ್
 

Latest Videos
Recommended Stories
Recommended image1
ಸಿದ್ದರಾಮಯ್ಯರ ನೂತನ ಮನೆ ಗೃಹಪ್ರವೇಶ ಮಾಡಿಸಿದ್ದು ಪ್ರಸಿದ್ಧ ವಿಧ್ವಾಂಸರು; ಇಲ್ಲಿದೆ Exclusive Photos
Recommended image2
ವೈಟ್‌ಫೀಲ್ಡ್‌ನಲ್ಲಿ ತಲೆಎತ್ತಲಿದೆ ಮುಂಬೈನ ಜಿಯೋ ವರ್ಲ್ಡ್‌ಗಿಂತ ಬೃಹತ್ ಕನ್ವೆನ್ಶನ್‌ ಸೆಂಟರ್‌: 48.35 ಎಕರೆ ಕೆಟಿಪಿಒ ಜಾಗ ಬಳಕೆ
Recommended image3
ಪಣತ್ತೂರು ಸಿಡಿಪಿ ರಸ್ತೆಗೆ ಸಿಕ್ತು ಅನುಮತಿ: ಎರಡು ಭಾಗವಾಗಲಿದೆ 40 ವರ್ಷಗಳ ಹಳೆಯ 150 ಎಕರೆ ದಟ್ಟ ಅರಣ್ಯ!
Related Stories
Recommended image1
ಬೆಂಗಳೂರು ಲೋಕಲ್ ರೌಡಿ ಆಟೋ ನಾಗನ ದುರಂತ ಅಂತ್ಯ! ಎಣ್ಣೆ ಪಾರ್ಟಿಗೆ ಕರೆದೊಯ್ದು ಫಾರ್ಮ್‌ಹೌಸಲ್ಲಿ ಮರ್ಡರ್
Recommended image2
ಗಡಿಪಾರಾಗಿ ಬಂದಿದ್ದ ರೌಡಿಶೀಟರ್ ಬರ್ಬರ ಹತ್ಯೆ, ಐವರು ಅರೆಸ್ಟ್, ಕೊಲೆಗೆ ಸ್ಕೆಚ್ ಹೇಗೆ ನಡೆದಿತ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved