ದಾಖಲೆ ಮತಗಳಿಂದ ಬಿಗ್​ಬಾಸ್​ ಗೆದ್ದ ಗಿಲ್ಲಿ ನಟನಿಗೆ ಇನ್ನೂ ಬಹುಮಾನದ ಕಾರು ಮತ್ತು 50 ಲಕ್ಷ ರೂಪಾಯಿ ನಗದು ಸಿಕ್ಕಿಲ್ಲ.  ಈ ಹಿಂದೆ ಕಾರ್ತಿಕ್ ಮಹೇಶ್ ಅವರು ಈ  ಬಗ್ಗೆ ಮಾತನಾಡಿದ್ದರು. ಗಿಲ್ಲಿಗೆ ಇವೆಲ್ಲಾ ಸಿಗಲು ಇನ್ನೆಷ್ಟು ದಿನ ಬೇಕು? 

ಬಿಗ್​ಬಾಸ್​ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದಲ್ಲಿ ವೋಟ್​ ಪಡೆದು ಗೆದ್ದುಬೀಗಿದವರು ಗಿಲ್ಲಿ ನಟ. ಇದೀಗ ಅವರು ಗಂಟೆಗಳಲ್ಲಿ ಲಕ್ಷ ಲಕ್ಷ ದುಡಿಯುವ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಘಟಾನುಘಟಿ ರಾಜಕಾರಣಿಗಳು ಕೂಡ ಸಿಕ್ಕು ಮಾತನಾಡುವ ಲೆವೆಲ್​ಗೆ ಬೆಳೆದು ನಿಂತಿದ್ದಾರೆ. ತಮ್ಮೆಲ್ಲಾ ಜನೋಪಕಾರಿ ಕೆಲಸಗಳನ್ನೂ ಬದಿಗಿಟ್ಟು ರಾಜಕಾರಣಿಗಳು ಗಿಲ್ಲಿನಟನನ್ನು ಮಾತನಾಡಿಸಲು ಬರುತ್ತಿದ್ದಾರೆ ಎಂದರೆ ಗಿಲ್ಲಿಯ ಕ್ರೇಜ್​ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಅಷ್ಟಕ್ಕೂ 45 ಕೋಟಿಗೂ ಅಧಿಕ ಮತ ಪಡೆಯುವುದು ಎಂದರೆ ಸುಲಭದ ಮಾತಲ್ಲ ಬಿಡಿ.

ಸಕತ್​ ಚರ್ಚೆ

ಇದೀಗ ಗಿಲ್ಲಿ ನಟನ ಕಾರು ಮತ್ತು ಅವರಿಗೆ ಸಿಕ್ಕಿರೋ 50 ಲಕ್ಷ ರೂಪಾಯಿ ಕ್ಯಾಷ್​ಪ್ರೈಸ್​ ಬಗ್ಗೆ ಸಕತ್​ ಚರ್ಚೆ ನಡೆಯುತ್ತಿದೆ. ಬಿಗ್​ಬಾಸ್​​ ಗಿಫ್ಟ್​ ಕೊಟ್ಟಿರೋ ಕಾರಿನಲ್ಲಿ ತಮ್ಮ ನೆಚ್ಚಿನ ನಟನನ್ನು ನೋಡುವ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿ ಅವರಿಗೆ 50 ಲಕ್ಷ ರೂಪಾಯಿ (ತೆರಿಗೆ ಕಡಿತಗೊಳಿಸಿದ ನಂತರ ಸುಮಾರು 35 ಲಕ್ಷ) ನಗದು ಸೇರಿದಂತೆ ಮಾರುತಿ ಸುಜುಕಿ ಇನ್ವಿಕ್ಟೋ ಕಾರು ಸಿಕ್ಕಿದೆ. ಇದನ್ನು ಹೊರತುಡಪಸಿದರೆ ಶರವಣ ಅವರು 20 ಲಕ್ಷ ರೂಪಾಯಿ ಕೊಟ್ಟಿದ್ದಾರೆ ಎನ್ನಲಾಗಿದೆ, ಜೊತೆಗೆ ಕಿಚ್ಚ ಸುದೀಪ್​ 10 ಲಕ್ಷ ಕೊಟ್ಟಿದ್ದಾರೆ.

ದುಡ್ಡು ಕೂಡ ಸಿಕ್ಕಿಲ್ಲ!

ಇಷ್ಟೆಲ್ಲಾ ಇದ್ದರೂ ಗಿಲ್ಲಿ ನಟನಿಗೆ ದುಡ್ಡು ಕೂಡ ಸಿಕ್ಕಿಲ್ಲ, ಕಾರು ಕೂಡ ಬಂದಿಲ್ಲ ಎನ್ನಲಾಗುತ್ತಿದೆ. ನಗದು ಬಹುಮಾನ ಸಿಗಲು ಕೂಡ ಗಿಲ್ಲಿ ಇನ್ನೂ ಕಾಯಬೇಕಿದೆ. ಈ ಹಿಂದೆಯೂ ಈ ಬಗ್ಗೆ ಸ್ಪರ್ಧಿಗಳು ಹೇಳಿಕೊಂಡದ್ದು ಉಂಟು. ಗಿಲ್ಲಿ ನಟ ಈ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲವಾದರೂ, ಅವರಿಗೆ ನಗದು ಸಿಗಲಿಲ್ಲ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಕಾರು ಕೂಡ ಸಿಗುವುದು ಇನ್ನೂ ಲೇಟ್​ ಇದೆ ಎನ್ನುವ ಮಾತು ಕೇಳಿಬರುತ್ತಿದೆ.

ದೊಡ್ಡ ಪ್ರೊಸೀಜರ್​

ಇದಕ್ಕೆ ಕಾರಣ, ಬಿಗ್​ಬಾಸ್​​ ಮುಗಿದ ಮೇಲೆ ಇವೆಲ್ಲಾ ಸಿಗಲು ಪ್ರೊಸೀಜರ್​ ದೊಡ್ಡದಿದೆ. ಅಷ್ಟಕ್ಕೂ ಹಿಂದೊಮ್ಮೆ ಬಿಗ್​ಬಾಸ್​ 10ರ ವಿನ್ನರ್​ ಆಗಿದ್ದ ಕಾರ್ತಿಕ್ ಮಹೇಶ್ ಅವರು ಈ ಬಗ್ಗೆ ಅಸಮಾಧಾನವನ್ನೂ ಹೊರಹಾಕಿದ್ದು ಇದರ. ಇವರಿಗೆ ಬಿಗ್​ಬಾಸ್​ನಿಂದ ಕಾರು ಸಿಕ್ಕಿದ್ದರೂ, ಹಲವು ತಿಂಗಳು ಅವರಿಗೆ ಅದು ಕೊಟ್ಟೇ ಇರಲಿಲ್ಲ. ಈ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಕೂಡ ಹೇಳಿಕೊಂಡಿದ್ದರು. ಆ ಬಳಿಕ ಅವರಿಗೆ ಕಾರು ಸಿಗಲು ಮುಕ್ಕಾಲು ವರ್ಷಗಳೇ ಹಿಡಿದವು. ಬಿಗ್​ಬಾಸ್​ನಲ್ಲಿ ಕಾರಿನ ಘೋಷಣೆಯಾಗಿ 8-9 ತಿಂಗಳ ಹೊತ್ತಿಗೆ ಅವರಿಗೆ ಕಾರು ಸಿಕ್ಕಿತ್ತು. ಆದ್ದರಿಂದ ಗಿಲ್ಲಿ ನಟ ಕೂಡ ಇನ್ನೂ ಕೆಲವು ತಿಂಗಳು ಕಾಯಲೇಬೇಕಿದೆ. ಆದ್ದರಿಂದ ಅವರ ಅಭಿಮಾನಿಗಳು ಕೂಡ ಗಿಲ್ಲಿ ನಟ ಬಿಗ್​ಬಾಸ್​​ ಕಾರಿನಲ್ಲಿ ಕುಳಿತು ಪಯಣ ಮಾಡುವುದನ್ನು ನೋಡಲು ಹಲವು ತಿಂಗಳು ಕಾಯಬೇಕಾದರೂ ಅಚ್ಚರಿಯೇನಿಲ್ಲ. ಅಷ್ಟು ಸಮಯದಲ್ಲಿ ಒಂದು ಹಂತದಲ್ಲಿ ಬಿಗ್​ಬಾಸ್ ವೀಕ್ಷಕರು ಈ ರಿಯಾಲಿಟಿ ಷೋ ಅನ್ನು ಬಹುತೇಕ ಮರೆತೇ ಬಿಟ್ಟಿರುತ್ತಾರೆ. ಮುಂದಿನ ಸೀಸನ್​ಗಾಗಿ ಕಾಯುತ್ತಿರುತ್ತಾರೆ!