ದೇಶದ ಪ್ರಮುಖ ಮಹಾನಗರಗಳಲ್ಲಿ ಡೇಟಿಂಗ್ ಆಪ್ ಹೆಸರಿನಲ್ಲಿ ಹೊಸದೊಂದು ಸ್ಕ್ಯಾಮ್ ಶುರುವಾಗಿದೆ. ರೆಸ್ಟೋರೆಂಟ್ ಡೇಟಿಂಗ್ ಹೆಸರಿನಲ್ಲಿ ಈ ಡೇಟಿಂಗ್ ಆಪ್‌ನಲ್ಲಿ ಪರಿಚಿತರಾದ ಹೆಣ್ಣು ಮಕ್ಕಳನ್ನು ನಂಬಿ ಬರುವ ಹುಡುಗರು ತಮಗೆ ತಿಳಿಯದಂತೆ ಮೋಸದ ಜಾಲವೊಂದಕ್ಕೆ ಬಿದ್ದು ಜೇಬು ಖಾಲಿ ಮಾಡಿಕೊಳ್ಳುತ್ತಾರೆ.
ಇತ್ತೀಚೆಗೆ ಡೇಟಿಂಗ್ ಆಪ್‌ಗಳ ಮೂಲಕವೇ ಅನೇಕ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ಹುಡುಕುತ್ತಿರುತ್ತಾರೆ. ದೇಶದ ಮಹಾನಗರಗಳಾದ ಮುಂಬೈ, ಚೆನ್ನೈ, ದೆಹಲಿ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಡೇಟಿಂಗ್ ಆಪ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಬೇಡಿಕೆ ಈ ಬೇಡಿಕೆಯನ್ನೇ ದುರುಪಯೋಗಪಡಿಸಿಕೊಂಡು ಕೆಲವರು ಅದರ ಮೂಲಕ ಹಣ ಮಾಡಲು ಯತ್ನಿಸುತ್ತಿದ್ದು, ಡೇಟಿಂಗ್ ಆಪ್ ನಂಬಿ ಹುಡುಗಿಯರ ಜೊತೆ ಹೋದವರು ತಮ್ಮ ಜೇಬು ಖಾಲಿ ಮಾಡಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಲಿದೆ.
ಹೌದು ದೇಶದ ಪ್ರಮುಖ ಮಹಾನಗರಗಳಲ್ಲಿ ಡೇಟಿಂಗ್ ಆಪ್ ಹೆಸರಿನಲ್ಲಿ ಹೊಸದೊಂದು ಸ್ಕ್ಯಾಮ್ ಶುರುವಾಗಿದೆ. ರೆಸ್ಟೋರೆಂಟ್ ಡೇಟಿಂಗ್ ಹೆಸರಿನಲ್ಲಿ ಈ ಡೇಟಿಂಗ್ ಆಪ್‌ನಲ್ಲಿ ಪರಿಚಿತರಾದ ಹೆಣ್ಣು ಮಕ್ಕಳನ್ನು ನಂಬಿ ಬರುವ ಹುಡುಗರು ತಮಗೆ ತಿಳಿಯದಂತೆ ಮೋಸದ ಜಾಲವೊಂದಕ್ಕೆ ಬಿದ್ದು ಜೇಬು ಖಾಲಿ ಮಾಡಿಕೊಳ್ಳುತ್ತಾರೆ. ಇಂತಹದೊಂದು ಜಾಲ ದೇಶದ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ.
ಹೇಗೆ ನಡೆಯುತ್ತೆ ವಂಚನೆ?
ಸಾಮಾನ್ಯವಾಗಿ ಹೊಟೇಲ್‌ಗಳಿಗೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋದಾಗ ಹುಡುಗರೇ ಬಿಲ್ ಪಾವತಿ ಮಾಡುತ್ತಾರೆ. ಹುಡುಗಿಯರಿಗೆ ಯಾವ ಆಹಾರ ಪಾನೀಯ ಬೇಕು ಎಂದು ಆಯ್ಕೆ ಮಾಡುವ ಅವಕಾಶ ಕೊಡುತ್ತಾರೆ. ಹಾಗೂ ಅದರ ಬೆಲೆಯ ಬಗ್ಗೆಯೂ ಬಹುತೇಕರ ಹುಡುಗರು ನೋಡುವುದಕ್ಕೆ ಹೋಗುವುದಿಲ್ಲ. ಹಾಗೂ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂಬ ಮನೋಭಾವದಿಂದ ಅವರು ಕರೆದ ಹೊಟೇಲ್‌ಗೆ ಹುಡುಗರು ಹೋಗುತ್ತಾರೆ ಗಂಡು ಮಕ್ಕಳ ಈ ಮನಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡ ಕೆಲವು ವಂಚಕರು ಈ ಬಂಬಲ್, ಟಿಂಡರ್ ಕ್ಲಿಂಜ್ ಮುಂತಾದ ಡೇಟಿಂಗ್ ಆಪ್‌ಗಳಲ್ಲಿ ಪ್ರೊಫೈಲ್ ಸೃಷ್ಟಿಸಿಕೊಂಡು ಹುಡುಗರ ಸಂಪರ್ಕಿಸುತ್ತಾರೆ. ಭೇಟಿಯಾದ ಕೆಲಸ ಸಮಯದಲ್ಲೇ ಅವರು ಎಲ್ಲಾದರೂ ರೆಸ್ಟೋರೆಂಟ್‌ಗಳಲ್ಲಿ ಭೇಟಿಯಾಗೋಣ ಎಂದು ಹೊರಗಡೆ ಕರೆಯುತ್ತಾರೆ. ಹೆಣ್ಮಕ್ಕಳೇ ಕರೆದಾಗ ಬೇಡ ಎನ್ನುವ ಗಂಡೈಕ್ಳು ಬಹಳ ಕಡಿಮೆ. ಸೋ ಅವರು ಕರೆದಲ್ಲಿಗೆ ಹೋಗುತ್ತಾರೆ.
ಆದರೆ ಆ ರೆಸ್ಟೋರೆಂಟ್‌ಗಳು ಹಾಗೂ ಇದೇ ರೀತಿ ವಂಚನೆ ಜಾಲದಲ್ಲಿ ತೊಡಗಿರುವ ಹೆಣ್ಣು ಮಕ್ಕಳ ಜೊತೆ ಡೀಲ್ ಮಾಡಿಕೊಂಡು ಬಿಡುತ್ತಾರೆ. ಆಪ್‌ನಲ್ಲಿ ಪರಿಚಯವಾದ ಕಾರಣಕ್ಕೆ ಹುಡುಗರಿಗೂ ಆ ಡೀಲ್‌ಗಿಳಿದ ಹೆಣ್ಣು ಮಕ್ಕಳ ಬಗೆಗಾಗಲಿ ಅರಿವಿರುವುದಿಲ್ಲ. ಹೀಗೆ ಅಲ್ಲಿಗೆ ಹೋಗುತ್ತಿದ್ದಂತೆ ಅವರು ಅಲ್ಲಿನ ಮೆನುವಿನಲ್ಲಿ ಇರುವ ಅತ್ಯಂತ ದುಬಾರಿ ವೈನ್, ಪಾನೀಯ ಮುಂತಾದವುಗಳನ್ನು ಬಿಂದಾಸ್ ಆಗಿ ಆರ್ಡರ್ ಮಾಡುತ್ತಾರೆ. ಔಪಾಚಾರಿಕವಾಗಿಯೂ ಅವರು ಇದನ್ನು ಆರ್ಡರ್ ಮಾಡ್ಲ ಅಂತ ಕೇಳೋದೇ ಇಲ್ಲ. ಇವರು ಆರ್ಡರ್ ಮಾಡುವ ಪಾನೀಯಗೆ ಕೆಲವೊಮ್ಮೆ ಮೆನುವಿನಲ್ಲಿ ದರವೇ ಇರಲ್ಲ. ಇದಾದ ನಂತರ ಆರ್ಡರ್ ಮಾಡಿದ ಆಹಾರವನ್ನು ಪೂರ್ತಿ ತಿಂದು ಮುಗಿಸುವ ಮೊದಲೇ ಅವರಿಗೆ ತುರ್ತು ಕರೆ ಬರುತ್ತದೆ. ಕರೆಯ ನೆಪದಲ್ಲಿ ಅವರು ಎದ್ದು ಹೋಗುತ್ತಾರೆ.
ನಂತರ ಬರುತ್ತೇ ನೋಡಿ ಬಿಲ್, ಹೌದು ಆ ಹುಡುಗಿ ಹೊರಟು ಹೋದ ನಂತರವೇ ರೆಸ್ಟೋರೆಂಟ್ ಸಿಬ್ಬಂದಿ ನಿಮಗೆ ಬಿಲ್ ನೀಡ್ತಾರೆ. ಆ ಬಿಲ್ ನೋಡಿ ನೀವು ಒಂದುಕ್ಷಣ ಬೆವರೋದಂತು ಪಕ್ಕ. ಬಹುತೇಕ ಇಲ್ಲಿ ನೀಡುವ ಬಿಲ್‌ಗಳ 20 ಸಾವಿರಕ್ಕಿಂತ ಮೇಲ್ಪಟ್ಟ ಬಿಲ್ಲೇ ಆಗಿರುತ್ತದೆ. ಈ ಸಮಯದಲ್ಲಿ ಆಘಾತಗೊಂಡು ನೀವಿದನ್ನು ಪ್ರಶ್ನಿಸಿದರೆ ನಿಮ್ಮನ್ನು ಥಳಿಸುವುದಕ್ಕೆ ಅಲ್ಲಿ ಬೌನ್ಸರ್‌ಗಳು ರೆಡಿ ಇರ್ತಾರೆ.
ಬೆಂಗಳೂರಿನ ಪ್ರತಿಷ್ಠಿತ ಪ್ರದೇಶಗಳಾದ ನೈಟ್ ಲೈಫ್‌ಗೆ ಫೇಮಸ್ ಆದ ಎಂ.ಜಿ. ರಸ್ತೆ ಮತ್ತು ಕೋರಮಂಗಲದ ಹಲವು ಕೆಫೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿದ್ದು, ವ್ಯಕ್ತಿಯೊಬ್ಬರಿಗೆ 40 ಸಾವಿರ ರೂ ಬಿಲ್ ನೀಡಿದ ಬಗ್ಗೆ ವರದಿಯಾಗಿದೆ. ಈ ದಂಧೆಗಾಗಿ ರೆಸ್ಟೋರೆಂಟ್ ಮಾಲೀಕರು ಮತ್ತು ವಂಚಕ ಯುವತಿಯರು ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಾರೆ. ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಂ.ಜಿ. ರೋಡ್ನಲ್ಲಿ ಇಂತಹ ದಂಧೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ಇಂತಹ ಹಲವು ಜಾಲಗಳನ್ನು ಪೊಲೀಸರು ಪತ್ತೆಹಚ್ಚಿ ರೆಸ್ಟೋರೆಂಟ್ ಮ್ಯಾನೇಜರ್‌ಗಳನ್ನು ಬಂಧಿಸಿದ್ದಾರೆ.


