'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್‌ನನ್ನು ಪ್ರೀತಿಸುವ ಸುಷ್ಮಾ, ಆತನಿಂದಲೇ ಬದುಕಿನ ಪಾಠ ಕಲಿಯುತ್ತಾಳೆ. ಆದರೆ, ಭೂಮಿಕಾಳ ಕೈಯಿಂದ ಬರೆಸಿದ್ದ ಪ್ರೇಮಪತ್ರವು ಅನಿರೀಕ್ಷಿತವಾಗಿ ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡುತ್ತದೆ.  ಸುಷ್ಮಾ ಪಾತ್ರ ನಿರ್ವಹಿಸಿದ ನಟಿ ಸಹನಾ ಗೌಡ ಕುರಿತ ಮಾಹಿತಿ.

ಗೌತಮ್​ ಸರ್​, ಗೌತಮ್​ ಸರ್​ ನಾನು ನಿಮ್ಮನ್ನು ತುಂಬಾ ಲವ್​ ಮಾಡ್ತೇನೆ ಎನ್ನುತ್ತಾ, ತನಗಿಂತ ಸಿಕ್ಕಾಪಟ್ಟೆ ಹಿರಿಯನಾಗಿರೋ ಗೌತಮ್​ ಪ್ರೀತಿಯ ಬಲೆಗೆ ಬಿದ್ದು, ಕೊನೆಗೆ ಗೌತಮ್​ನಿಂದಲೇ ಬದುಕಿನ ಪಾಠ ಹೇಳಿಸಿಕೊಂಡಾಕೆ ಸುಷ್ಮಾ. ಯೌವನದಲ್ಲಿ ಉಂಟಾಗುವ ಈ ಪ್ರೀತಿ ನಿಜವಾಗಿಯೂ ಏನು, ಪ್ರೀತಿಯ ಅರ್ಥ ತಿಳಿಯದೇ ಇಂಥ ವಯಸ್ಸಿನಲ್ಲಿ ಮೋಸ ಹೋಗುವ ಯುವತಿಯರಿಗೆ ಅತ್ಯಂತ ಸುಂದರವಾಗಿ ಪಾಠ ಮಾಡುವ ಮೂಲಕ, ನಿಜ ಜೀವನದಲ್ಲಿಯೂ ಯುವತಿಯರಿಗೆ ಮನಮುಟ್ಟುವ ಮಾತನಾಡಿದ್ದಾರೆ ಅಮೃತಧಾರೆಯ ಗೌತಮ್​ ಅರ್ಥಾತ್​ ರಾಜೇಶ್​ ನಟರಂಗ ಅವರು. ಇಂಥದ್ದೊಂದು ಸುಂದರ ಪಾಠ ಮಾಡಲು ಸ್ಫೂರ್ತಿಯಾದಾಕೆ ಇದೇ ಸುಷ್ಮಾ.

ಯಾರೀ ಸುಷ್ಮಾ?

ಹಾಗಿದ್ರೆ ಯಾರೀ ಸುಷ್ಮಾ? ಈ ಪಾತ್ರವನ್ನು ನಿಭಾಯಿಸ್ತಿರೋ ನಟಿಯ ಹೆಸರು ಸಹನಾ ಗೌಡ. ಇದೀಗ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಬಹುಶಃ ಸೀರಿಯಲ್​ನಲ್ಲಿ, ಸುಷ್ಮಾ ಪಾತ್ರ ಮುಗಿದಂತೆ ಕಾಣಿಸುತ್ತಿದೆ.ಏಕೆಂದರೆ, ವಠಾರದ ಪಾತ್ರವಿನ್ನೂ ಮುಕ್ತಾಯದ ಹಂತದಲ್ಲಿದೆ.

ಸುಷ್ಮಾ ಪಾತ್ರ ಅಂತ್ಯ

ಭೂಮಿಕಾ ಮತ್ತು ಗೌತಮ್​ ಒಂದಾಗಿರೋ ಕಾರಣದಿಂದಾಗಿ, ಭೂಮಿಕಾ ಕೈಯಲ್ಲಿಯೇ ಗೌತಮ್​ಗೆ ಲವ್​ ಲೆಟರ್​ ಬರೆಸಿದ್ದ ಸುಷ್ಮಾ ಪಾತ್ರವೂ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನಟಿ ಸಹನಾ ಅವರು ಇಡೀ ತಂಡದ ಜೊತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಭೂಮಿಕಾ ಕೈಯಿಂದ ಲೆಟರ್​

ಕಿಟಕಿಯಿಂದಲೇ ಗೌತಮ್​ನನ್ನು ನೋಡಿ ಲವ್​ ಮಾಡಿ, ಕೊನೆಗೆ ಗೌತಮ್​ಗೆ ಪ್ರೀತಿಯ ನಿವೇದನೆಯನ್ನು ಹೇಳಿಕೊಳ್ಳಲು ಲವ್​ ಲೆಟರ್​ ಬರೆಯಲು ಬಾರದೇ ಭೂಮಿಕಾ ಕೈಯಿಂದಲೇ ಬರೆಸಿದ್ದಳು ಸುಷ್ಮಾ. ಈ ವಯಸ್ಸಿನಲ್ಲಿನ ತೊಳಲಾಟವನ್ನು ಗಮನಿಸಿದ್ದ ಭೂಮಿಕಾ ಕೂಡ, ಸತ್ಯಾಂಶ ಏನು ಎಂದು ಹೇಳದೇ ಲವ್​ ಲೆಟರ್​ ಬರೆದು ಕೊಟ್ಟಿದ್ದಳು. ಕೊನೆಗೆ ಈ ಪ್ರೇಮ ಪತ್ರವನ್ನು ಭೂಮಿಕಾಳೇ ತನಗೆ ಬರೆದದ್ದು ಎಂದು ಗೌತಮ್​ ಅಂದುಕೊಂಡಿದ್ದ. ಒಟ್ಟಿನಲ್ಲಿ ಈ ಲವ್​ ಲೆಟರ್​ ಭೂಮಿಕಾ ಮತ್ತು ಗೌತಮ್​ನನ್ನು ಒಂದು ಮಾಡಿದೆ.