ಟಿಬೆಟ್-ನೇಪಾಳ ಗಡಿಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಸದ್ಗುರುಗಳ ಇಶಾ ಫೌಂಡೇಶನ್‌ನ 77 ಯಾತ್ರಾರ್ಥಿಗಳು ನಾಪತ್ತೆಯಾಗಿದ್ದು, ಅವರು ತಂಗಿದ್ದ ಇಮಿಗ್ರೇಷನ್ ಕಚೇರಿ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಈ ದುರಂತದ ಬಗ್ಗೆ ಸದ್ಗುರುಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಎಂತಹ ಅಪಾಯವಿದ್ದರೂ ತಾವೇ ಸ್ವತಃ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ.
- Home
- News
- State
- Karnataka News Live: ನೇಪಾಳ ಪ್ರವಾಹದಲ್ಲಿ ಇಶಾ ಫೌಂಡೇಶನ್‌ನ 77 ಮಂದಿ ನಾಪತ್ತೆ.. ಆತಂಕದಲ್ಲಿ ಮಾಹಿತಿ ಹಂಚಿಕೊಂಡ ಸದ್ಗುರು
Karnataka News Live: ನೇಪಾಳ ಪ್ರವಾಹದಲ್ಲಿ ಇಶಾ ಫೌಂಡೇಶನ್‌ನ 77 ಮಂದಿ ನಾಪತ್ತೆ.. ಆತಂಕದಲ್ಲಿ ಮಾಹಿತಿ ಹಂಚಿಕೊಂಡ ಸದ್ಗುರು

ಬೆಂಗಳೂರು: ರಾಜ್ಯದಲ್ಲಿನ ಮಳೆ ಕೊರತೆಯನ್ನು ಸಾಧ್ಯವಾದಷ್ಟು ನೀಗಿಸುವ ಪ್ರಯತ್ನದ ಭಾಗವಾಗಿ ಮುಂದಿನ ಎರಡು- ಮೂರು ದಿನಗಳಲ್ಲಿ ನಾಲ್ಕೂ ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಮೋಡ ಬಿತ್ತನೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆ ಸಂಬಂಧ ಮೇಲ್ವಿಚಾರಣಾ ಸಮಿತಿ, ತಾಂತ್ರಿಕ ಸಮಿತಿ ಹಾಗೂ ಕಾರ್ಯಾಚರಣೆ ಮತ್ತು ಮೌಲ್ಯಮಾಪನ ಸಮಿತಿ ಎಂಬ ಮೂರು ಸಮಿತಿಗಳನ್ನು ರಚಿಸಲಾಗಿದೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣಾ ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ. ಅಂದಾಜು 27 ಕೋಟಿ ರು. ವೆಚ್ಚದಲ್ಲಿ 60 ದಿನಗಳ ಕಾಲ (ಸುಮಾರು 200 ಗಂಟೆ) ಮೋಡ ಬಿತ್ತನೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ಇರಲಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿ ಜಲ ಸಂಪನ್ಮೂಲ ಇಲಾಖೆಯ ಮೂಲಕವೇ ಮೋಡ ಬಿತ್ತನೆ ಮಾಡುತ್ತೇವೆ.
Karnataka News Live 26 August 2026ನೇಪಾಳ ಪ್ರವಾಹದಲ್ಲಿ ಇಶಾ ಫೌಂಡೇಶನ್‌ನ 77 ಮಂದಿ ನಾಪತ್ತೆ.. ಆತಂಕದಲ್ಲಿ ಮಾಹಿತಿ ಹಂಚಿಕೊಂಡ ಸದ್ಗುರು
Karnataka News Live 26 August 2026ಕಸ್ತೂರಿ ರಂಗನ್ ವರದಿ; ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ - ಸಿಎಂ ಡಿಕೆಶಿ
ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಕೇಂದ್ರದ ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪಕ್ಷಾತೀತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Karnataka News Live 26 August 2026ಈ ವಿಚಾರಕ್ಕೆ ‘ಅಶ್ವಿನಿ ನಕ್ಷತ್ರ’ ಬೇಡವೆಂದಿದ್ದ ಜೆಕೆ - ಅದೇ ಧಾರಾವಾಹಿ ಬದಲಿಸಿತು ಅವರ ಬದುಕು!
Kannada Seriel Actor Karthik Jayaram ‘ಜೆಕೆ’ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, ‘ಅಶ್ವಿನಿ ನಕ್ಷತ್ರ’ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.
Karnataka News Live 26 August 2026Captain Abhimanyu - ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್ ಕ್ಯಾಪ್ಟನ್ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!
Karnataka News Live 26 August 2026ತೆಂಗಿನ ಮರದಲ್ಲಿ ಬಿಟ್ಟ ಕಂದು ಬಣ್ಣದ ಹೀರೇಕಾಯಿ? ರಾಮನಗರದ ರೈತನ ತೋಟದಲ್ಲಿ ವಿಸ್ಮಯ! ಏನಿದು
ಕರ್ನಾಟಕದಲ್ಲಿ ಬರಗಾಲದಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಇದರ ನಡುವೆ, ರಾಮನಗರದ ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದಲ್ಲಿ ಹೀರೇಕಾಯಿಯಂತೆ ಉದ್ದವಾದ ವಿಚಿತ್ರ ತೆಂಗಿನಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.
Karnataka News Live 26 August 2026'ಕಂಡೋರ ಮೆಚ್ಚಿಸೋಕೆ ಹೋಗ್ಬೇಡಿ' ಟಾಕ್ಸಿಕ್ ಬಗ್ಗೆ ನೆಗೆಟಿವ್ Review ಮಾಡುವವರ ಜನ್ಮ ಜಾಲಾಡಿದ All OK
Karnataka News Live 26 August 2026ಹಾವುಗಳ ಲೋಕದ ಈ ರಹಸ್ಯ ಗೊತ್ತಾದ್ರೆ ‘ಸೇಡು’ ಕಥೆಗಳೇ ಬದಲಾಗುತ್ತವೆ - ಇಲ್ಲಿದೆ ನಿಮಗೆ ಗೊತ್ತಿರದ ಸತ್ಯ
Snakes ತಮ್ಮ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಭಾವಿಸಿದಾಗ ಸಾಮಾನ್ಯವಾಗಿ ಆತ್ಮರಕ್ಷಣೆಗಾಗಿ ದಾಳಿ ಮಾಡುತ್ತವೆ. ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ, ತಮ್ಮನ್ನು ಕೊಂದ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತವೆ ಎಂಬ ನಂಬಿಕೆಗಳು ಜನರಲ್ಲಿ ಇದ್ದರೂ, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ.
Karnataka News Live 26 August 2026ನಾನು ಲಾಯಕ್ಕಿಲ್ಲ ಮಮ್ಮಿ, ಸಾಯೋಕೂ ಭಯವಾಗ್ತಿದೆ.. IIT ದೆಹಲಿ ವಿದ್ಯಾರ್ಥಿ ಕೇಸ್‌ಗೆ ರೋಚಕ ಟ್ವಿಸ್ಟ್.. ಸಾವಿಗೂ ಮುನ್ನ ಹೇಳಿದ್ದೇನು?
ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಆತ್ಮ*ತ್ಯೆಗೂ ಮುನ್ನ ತನ್ನ ವೈಫಲ್ಯದ ಬಗ್ಗೆ ತಾಯಿಯ ಮುಂದೆ ಅತ್ತು ನೋವು ತೋಡಿಕೊಂಡಿದ್ದ ಆಘಾತಕಾರಿ ವಿಷಯ ಹೊರಬಂದಿದೆ. ಕಾಲೇಜು ಆಡಳಿತ ಮಂಡಳಿಯು ಹಾಸ್ಟೆಲ್ ನೀಡದೆ ಮತ್ತು ವೈದ್ಯಕೀಯ ವರದಿಗಳನ್ನು ಒಪ್ಪದೆ ಆತನಿಗೆ ಮಾನಸಿಕ ಕಿರುಕುಳ ನೀಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
Karnataka News Live 26 August 2026Success Story - ಬದುಕು ಬದಲಿಸಿದ ಒಂದು ಮೆಸೇಜ್ ಒಂದು ಮೆಸೇಜ್ ಬದಲಿಸಿತು ಬದುಕು; 17ರ ಹುಡುಗ 22ಕ್ಕೆ ಗಳಿಸಿದ್ದು 1 ಕೋಟಿ ರೂ.!
Karnataka News Live 26 August 2026ಬೆಂಗಳೂರಲ್ಲಿ 1 ಕೋಟಿ ರೂ ಚಿನ್ನಾಭರಣ ಲೂಟಿ.. ನೇಪಾಳ ಗಡಿಯಲ್ಲಿ ಆರೋಪಿಗಳು ಲಾಕ್ ಆಗಿದ್ದು ಹೇಗೆ?
ನಂಬಿಕಸ್ಥ ಮನೆಯಾಳೇ ಕಳ್ಳತನಕ್ಕೆ ಇಳಿದ ಕೇಸ್ ಇದಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಕಿಡಿಗೇಡಿಗಳ ಗ್ಯಾಂಗ್ ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿತ್ತು. ಇದೀಗ ಆ ಗ್ಯಾಂಗ್ ಅರೆಸ್ಟ್ ಆಗಿದೆ.
Karnataka News Live 26 August 2026Toxic - ರಾಕಿ ಭಾಯ್‌ನ ಈ ಲುಕ್ ಹಿಂದಿರುವವರು ಇವರೆ! ‘ಕೆಜಿಎಫ್’ನಿಂದ ‘ಟಾಕ್ಸಿಕ್’ವರೆಗೆ ಇವರದ್ದೇ ಕೈಚಳಕ!
'ಕೆಜಿಎಫ್' ರಾಕಿ ಬಾಯ್ ಮತ್ತು 'ಟಾಕ್ಸಿಕ್' ಸಿನಿಮಾದಲ್ಲಿ ನಟ ಯಶ್ ಅವರ ಟ್ರೆಂಡ್ ಸೆಟ್ಟರ್ ಕೇಶವಿನ್ಯಾಸದ ಹಿಂದಿರುವ ಮಾಂತ್ರಿಕ ಕೈಗಳು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರದ್ದು. ಯಶ್ ಅವರ ಪಾತ್ರಗಳಿಗೆ ಐಕಾನಿಕ್ ನೋಟ ನೀಡುವುದರ ಜೊತೆಗೆ, ಅಲೆಕ್ಸ್ ತಮ್ಮ ಸಲೂನ್ ಉದ್ಯಮದ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಯಶಸ್ವಿ ಉದ್ಯಮಿಯೂ ಹೌದು.
Karnataka News Live 26 August 2026ಒಂದೇ ಒಂದು ಮೆಸೇಜ್ ನಟಿ ರುಕ್ಮಿಣಿ ವಸಂತ್ ಜೀವನವನ್ನೇ ಬದಲಿಸಿತು - ಇಂದು ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್!
Toxic Actress Rukmini Vasanth ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ರುಕ್ಮಿಣಿ ವಸಂತ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳಲ್ಲಿನ ಕುತೂಹಲಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
Karnataka News Live 26 August 2026VB-G RAM G - ಹೊಟ್ಟೆಗೆ ಹಿಟ್ಟಿಲ್ಲ, ಕೈಗೆ ಕೆಲಸವಿಲ್ಲ; ಹೊಸ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಡ ಕೂಲಿ ಕಾರ್ಮಿಕರು!
Karnataka News Live 26 August 2026‘ಅರೇಂಜ್ ಮ್ಯಾರೇಜ್, ಆದರೆ ಲವ್ ಆಯ್ತು’ - ಪಾವನಾ ಜೊತೆಗಿನ ಮದುವೆ ಬಗ್ಗೆ ನಟ ಚಿಕ್ಕಣ್ಣ ಹೇಳಿದ್ದೇನು?
Kannada Comedy Actor Chikkanna ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳ 29 ಮತ್ತು 30ರಂದು ಮದುವೆ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ. ಚಿಕ್ಕಣ್ಣ-ಪಾವನಾ ಮದುವೆಯ ಸಂಪೂರ್ಣ ವಿವರಗಳು ಮತ್ತು ನಟ ಹೇಳಿದ ಕುತೂಹಲಕಾರಿ ಮಾತುಗಳು ಇಲ್ಲಿವೆ.
Karnataka News Live 26 August 2026ಖ್ಯಾತ ನಿರ್ದೇಶಕ ಇನ್ನಿಲ್ಲ, ಸ್ಟಂಟ್ ಹಾಕಿದ್ರೂ ಹೃದಯಾಘಾತ ಆಗಿದ್ದು ಏಕೆ? ಆ ಗುಟ್ಟು ಇಲ್ಲಿದೆ ನೋಡಿ!
ಕುಕು ಕೊಹ್ಲಿ ಕೇವಲ ನಿರ್ದೇಶಕರಾಗಿರಲಿಲ್ಲ, ಅವರು ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾಗಿದ್ದರು. 'ಕೊಹ್ರಾಮ್', 'ಜುಲ್ಮಿ', 'ಯೇ ದಿಲ್ ಆಶಿಕಾನಾ' ನಂತಹ ಚಿತ್ರಗಳು ಇಂದಿಗೂ ಟಿವಿಯಲ್ಲಿ ಪ್ರಸಾರವಾದರೆ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ. ಅಜಯ್ ದೇವಗನ್ ಎಂಬ ಸೂಪರ್ ಸ್ಟಾರ್ ಕೊಟ್ಟ ಈ 'ಗುರು'ವಿನ ನೆನಪು ಚಿತ್ರರಂಗದಲ್ಲಿ ಸದಾ ಅಮರ.
Karnataka News Live 26 August 2026ದರ್ಶನ್‌ಗೆ ಮದುವೆಯ ಆಹ್ವಾನ ಪತ್ರಿಕೆ ನೀಡದೇ ಇರೋದಕ್ಕೆ ಕಾರಣ ತಿಳಿಸಿದ ನಟ ಚಿಕ್ಕಣ್ಣ!
ಹಾಸ್ಯನಟ ಚಿಕ್ಕಣ್ಣ, ಉದ್ಯಮಿ ಪಾವನಾ ಗೌಡ ಅವರನ್ನು ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿರುವುದರಿಂದ ದರ್ಶನ್ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.
Karnataka News Live 26 August 2026Cricket - ವೈಭವ್, ಜೈಸ್ವಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ - ಬಿಸಿಸಿಐ, ಐಸಿಸಿಗೆ ದಿಗ್ಗಜ ಕ್ರಿಕೆಟಿಗನ ಕರೆ!
Karnataka News Live 26 August 2026Mysuru Dasara - ಗಜಪಯಣಕ್ಕೆ ಚಾಲನೆ, ಕಾಡಿನಿಂದ ನಾಡಿಗೆ 9 ಆನೆಗಳು; ಕ್ಯಾಪ್ಟನ್ ಅಭಿಮನ್ಯುಗೆ ರಾಜಮರ್ಯಾದೆ ವಿದಾಯ
Karnataka News Live 26 August 2026‘ಪ್ರೀತಿ ಅಪರೂಪ, ಅದನ್ನು ಕಳೆದುಕೊಳ್ಳಬೇಡಿ’ - ಹಾಗಾದ್ರೆ ಸಿಟಿ ಲೈಟ್ಸ್ ಈ ಹಾಡಿನ ವಿಶೇಷತೆ ಏನು?
City Lights ಚಿತ್ರದ 4ನೇ ಹಾಡು ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ಈ ಹಾಡನ್ನು ಮೊದಲು ತಮ್ಮ ತಾಯಿಗೆ ಕೇಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ‘ಸಿಟಿ ಲೈಟ್ಸ್’ನ ಈ ಪ್ರೇಮಗೀತೆಯಲ್ಲಿ ಅಂಥದ್ದೇನು ವಿಶೇಷ? ಸಿನಿಮಾ ಹಾಗೂ ಹಾಡಿನ ಸಂಪೂರ್ಣ ಕಥೆ ಇಲ್ಲಿದೆ.
Karnataka News Live 26 August 2026ಕರ್ನಾಟಕದಲ್ಲಿ ಬಿಪಿ, ಶುಗರ್, ಬೊಜ್ಜು ಮಹಾಮಾರಿ - 10 ವರ್ಷಗಳಲ್ಲಿ ಬಿಪಿ ಭಾದಿತರು ಶೇ. 27 ರಷ್ಟು ಏರಿಕೆ
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನಂತಹ ಸಾಂಕ್ರಾಮಿಕವಲ್ಲದ ರೋಗಗಳು ಆತಂಕಕಾರಿಯಾಗಿ ಹೆಚ್ಚಾಗಿವೆ.