'ಕೆಜಿಎಫ್' ರಾಕಿ ಬಾಯ್ ಮತ್ತು 'ಟಾಕ್ಸಿಕ್' ಸಿನಿಮಾದಲ್ಲಿ ನಟ ಯಶ್ ಅವರ ಟ್ರೆಂಡ್ ಸೆಟ್ಟರ್ ಕೇಶವಿನ್ಯಾಸದ ಹಿಂದಿರುವ ಮಾಂತ್ರಿಕ ಕೈಗಳು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರದ್ದು. ಯಶ್ ಅವರ ಪಾತ್ರಗಳಿಗೆ ಐಕಾನಿಕ್ ನೋಟ ನೀಡುವುದರ ಜೊತೆಗೆ, ಅಲೆಕ್ಸ್ ತಮ್ಮ ಸಲೂನ್ ಉದ್ಯಮದ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಯಶಸ್ವಿ ಉದ್ಯಮಿಯೂ ಹೌದು.
ಚಿತ್ರರಂಗದಲ್ಲಿ ನಟನ ಅಭಿನಯ ಎಷ್ಟ ಮುಖ್ಯವೋ, ಆ ಪಾತ್ರಕ್ಕೆ ಜೀವ ತುಂಬುವ ಅವರ ಬಾಹ್ಯ ನೋಟ (Look) ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿದ 'ಕೆಜಿಎಫ್' (KGF) ಸಿನಿಮಾದಲ್ಲಿ ರಾಕಿ ಬಾಯ್ ಪಾತ್ರದ ಉದ್ದನೆಯ ಕೇಶವಿನ್ಯಾಸ ದೇಶಾದ್ಯಂತ ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ಈಗ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಯಾಗಿದ್ದು, ರಾಕಿ ಬಾಯ್ ಅವರ ಆಕರ್ಷಕ ಲುಕ್ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ. ಆದರೆ, ನಟ ಯಶ್ ಅವರ ಈ ಐಕಾನಿಕ್ ಮತ್ತು ಟ್ರೆಂಡ್ ಸೆಟ್ಟರ್ ಕೇಶವಿನ್ಯಾಸದ ಹಿಂದೆ ಒಬ್ಬ ದಕ್ಷ ಮತ್ತು ಕಲಾತ್ಮಕ ಹೇರ್ ಸ್ಟೈಲಿಸ್ಟ್ ಕೈಚಳಕವಿದೆ. ಅವರೇ ಪ್ರಸಿದ್ಧ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್.
ಯಶ್ ಪಾತ್ರ ಸೃಷ್ಟಿಸಿದರೆ, ಅಲೆಕ್ಸ್ ನೋಟ ನೀಡುತ್ತಾರೆ!
ಚಿತ್ರರಂಗದಲ್ಲಿ ಒಂದು ಮಾತು ಪ್ರಸಿದ್ಧವಾಗಿದೆ ಅದೇನೆಂದರೆ, "ನಟ ಯಶ್ ಪರದೆಯ ಮೇಲೆ ಪಾತ್ರವನ್ನು ಸೃಷ್ಟಿಸಿದರೆ, ಆ ಪಾತ್ರಕ್ಕೆ ತಕ್ಕಂತೆ ಅವರ ಲುಕ್ ಹಾಗೂ ಶೈಲಿಯನ್ನು ಸೃಷ್ಟಿಸುವುದು ಅಲೆಕ್ಸ್ ವಿಜಯಕಾಂತ್! ಹೌದು, 'ಕೆಜಿಎಫ್' ಸರಣಿಯ ಚಾಪ್ಟರ್ 1 ಮತ್ತು 2 ರಲ್ಲಿ ಯಶ್ ಅವರ ಕೇಶವಿನ್ಯಾಸ ಮತ್ತು ಗಡ್ಡದ ಶೈಲಿ ಎಷ್ಟು ಜನಪ್ರಿಯವಾಯಿತೆಂದರೆ, ಪ್ರತಿಯೊಬ್ಬ ಯುವಕನೂ ಅದೇ ರೀತಿ ಹೇರ್‌ಸ್ಟೈಲ್ ಮಾಡಲು ಸಲೂನ್‌ಗಳಿಗೆ ಮುಗಿಬಿದ್ದಿದ್ದ. ಈಗ ಬಿಡುಗಡೆಯಾಗಲಿರುವ 'ಟಾಕ್ಸಿಕ್' ಸಿನಿಮಾದಲ್ಲೂ ಅಲೆಕ್ಸ್ ವಿಜಯಕಾಂತ್ ಅವರೇ ಯಶ್ ಅವರ ಹೊಸ ಶೈಲಿಯ ವಿನ್ಯಾಸವನ್ನು ಸಿದ್ಧಪಡಿಸುತ್ತಿದ್ದಾರೆ.
ಸಾಧನೆಯ ಹಾದಿ ಮತ್ತು ಉದ್ಯಮ ಸಾಮ್ರಾಜ್ಯ!
ಅಲೆಕ್ಸ್ ವಿಜಯಕಾಂತ್ ಕೇವಲ ಒಬ್ಬ ನಟನಿಗೆ ಕೇಶವಿನ್ಯಾಸ ಮಾಡುವ ಸಾಮಾನ್ಯ ಹೇರ್‌ಸ್ಟೈಲಿಸ್ಟ್ ಅಲ್ಲ. ಅವರು ತಮ್ಮ ವಿಶಿಷ್ಟ ಕಲೆ ಹಾಗೂ ಕಠಿಣ ಪರಿಶ್ರಮದಿಂದ ಸೌಂದರ್ಯ ಮತ್ತು ಕೇಶವಿನ್ಯಾಸ ಕ್ಷೇತ್ರದಲ್ಲಿ ದೊಡ್ಡ ಉದ್ಯಮ ಸಾಮ್ರಾಜ್ಯವನ್ನೇ ನಿರ್ಮಿಸಿದ್ದಾರೆ.
150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಆಸರೆ!
ಅಲೆಕ್ಸ್ ವಿಜಯಕಾಂತ್ ಒಡೆತನದ ಪ್ರಸಿದ್ಧ ಸಲೂನ್‌ನಲ್ಲಿ (Salon) ಪ್ರಸ್ತುತ 150 ಕ್ಕೂ ಹೆಚ್ಚು ಜನರು ಉದ್ಯೋಗ ಕಂಡುಕೊಂಡಿದ್ದಾರೆ. ಬೃಹತ್ ಮಟ್ಟದಲ್ಲಿ ಬೆಳೆದಿರುವ ಇವರ ಸಂಸ್ಥೆ, ಅನೇಕ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ.
ಸೆಲೆಬ್ರಿಟಿಗಳ ನೆಚ್ಚಿನ ಸ್ಟೈಲಿಸ್ಟ್; ಚಿತ್ರರಂಗದ ಪ್ರಮುಖ ತಾರೆಯರು, ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ತಮ್ಮ ಹೇರ್‌ಸ್ಟೈಲ್ ಹಾಗೂ ಮೇಕ್ ಓವರ್‌ಗಾಗಿ ಅಲೆಕ್ಸ್ ವಿಜಯಕಾಂತ್ ಅವರನ್ನು ಸಂಪೂರ್ಣವಾಗಿ ನಂಬುತ್ತಾರೆ.
ಟಾಕ್ಸಿಕ್' ಮೇಲಿನ ನಿರೀಕ್ಷೆ ಮತ್ತು ಹೊಸ ಟ್ರೆಂಡ್!
ಯಶ್ ಅವರ ಪ್ರತಿಯೊಂದು ಸಿನಿಮಾದ ಬಿಡುಗಡೆಯ ಮುನ್ನ ಅವರ 'ಲುಕ್' ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತದೆ. ಯಶ್ ಪಡೆದಿರುವ ಹೊಸ ಅವತಾರ ಹಾಗೂ ಕೇಶವಿನ್ಯಾಸದ ಫೋಟೋಗಳ ಹಿಂದೆ ಇವರೆ ಇದ್ದಾರೆ. ಅಲೆಕ್ಸ್ ವಿಜಯಕಾಂತ್ ಅವರು ಈ ಬಾರಿಯೂ ಭಾರತೀಯ ಚಿತ್ರರಂಗದಲ್ಲಿ ಹೊಸ ಮಾದರಿಯ ಶೈಲಿಯನ್ನು ಪರಿಚಯಿಸಲು ಸಜ್ಜಾಗಿದ್ದಾರೆ.
ಅಲೆಕ್ಸ್ ಶ್ರಮ ನಿಜಕ್ಕೂ ಪ್ರಶಂಸನೀಯ!
ಚಿತ್ರರಂಗದಲ್ಲಿ ನಟರು ಪರದೆಯ ಮೇಲೆ ಬೆಳಕಿಗೆ ಬಂದರೂ, ಅವರ ಹಿನ್ನೆಲೆಯಲ್ಲಿ ಶ್ರಮಿಸುವ ಅಲೆಕ್ಸ್ ವಿಜಯಕಾಂತ್ ಅವರಂತಹ ತಂತ್ರಜ್ಞರ ಕಲಾತ್ಮಕ ಪ್ರತಿಭೆ ಮತ್ತು ಶ್ರಮ ನಿಜಕ್ಕೂ ಪ್ರಶಂಸನೀಯ. ಕೇವಲ ಕೇಶವಿನ್ಯಾಸದ ಮೂಲಕ ಕೋಟಿಗಟ್ಟಲೆ ಅಭಿಮಾನಿಗಳನ್ನು ಸೆಳೆಯುವ ನಟನ ಶೈಲಿಯನ್ನು ರೂಪಿಸುವುದು ಸಾಮಾನ್ಯ ವಿಷಯವಲ್ಲ, ಅದನ್ನೇ ಅಲೆಕ್ಸ್ ಅತ್ಯಂತ ನಿಖರತೆಯಿಂದ ಸಾಧಿಸಿ ತೋರಿಸಿದ್ದಾರೆ.


