11:54 PM (IST) Jul 21

Karnataka News Live 21 July 2026 ಜಿಂಬಾಬ್ವೆ ವಿರುದ್ಧ ಎಂಟ್ರಿಗೆ ನಾಲ್ವರ ನಡುವೆ ಭಾರಿ ಫೈಟಿಂಗ್! ಯಾರಿಗೆ ಸಿಗಲಿದೆ ಚಾನ್ಸ್?

ಜುಲೈ 23 ರಿಂದ ಆರಂಭವಾಗಲಿರುವ ಭಾರತ-ಜಿಂಬಾಬ್ವೆ ಟಿ20 ಸರಣಿಗೆ ಯುವ ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ನಾಯಕ ಶ್ರೇಯಸ್ ಅಯ್ಯರ್ ತಮ್ಮ ನಾಯಕತ್ವದಲ್ಲಿ ಮೊದಲ ಗೆಲುವು ದಾಖಲಿಸುವ ಒತ್ತಡದಲ್ಲಿದ್ದು, ಪ್ರಭ್‌ಸಿಮ್ರಾನ್ ಸಿಂಗ್, ಹರ್ಷ್ ದುಬೆ, ಅಶೋಕ್ ಶರ್ಮಾ ಸೇರಿದಂತೆ ಹಲವು ಯುವಕರು ಪಾದಾರ್ಪಣೆಯ ನಿರೀಕ್ಷೆಯಲ್ಲಿದ್ದಾರೆ.
Read Full Story
11:28 PM (IST) Jul 21

Karnataka News Live 21 July 2026 ಕ್ಯಾರವಾನ್‌, ಕಾಂಟ್ರಾಕ್ಟ್ ಅನಿವಾರ್ಯ, ಬರಹಗಾರರಿಗೆ ಬೆಲೆ ಕೊಡಿ - ಕಾಂತಾರ ಬೆಡಗಿ ಹೇಳಿದ್ದೇನು?

ಸಿನಿಮಾ ಇಂಡಸ್ಟ್ರಿ ಇಷ್ಟೆಲ್ಲಾ ಮುಂದುವರಿದಿದೆ, ಆದರೆ ಸ್ಯಾಂಡಲ್‌ವುಡ್‌ನಲ್ಲಿ ಕಾಂಟ್ರಾಕ್ಟ್, ಅಗ್ರಿಮೆಂಟ್‌ ಅನ್ನೋದು ವ್ಯವಸ್ಥಿತವಾಗಿಲ್ಲ. ನಿರ್ಮಾಪಕರು ಅಡ್ವಾನ್ಸ್‌ ಕೊಡುತ್ತಾರೆ ಎಂದರು ನಟಿ ಸಪ್ತಮಿ ಗೌಡ.

Read Full Story
10:24 PM (IST) Jul 21

Karnataka News Live 21 July 2026 ಕೃಷ್ಣಾ ನದಿಗೆ ಕೊಲ್ಹಾಪುರ ಜಿಲ್ಲೆಯಲ್ಲಿ ಇನ್ನೊಂದು ಅಣೆಕಟ್ಟು, ಕನ್ನಡ ಸಂಘಸಂಸ್ಥೆಗಳ ವಿರೋಧ

ಕೊಲ್ಲಾಪುರ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ 'ರಾಧಾಕೃಷ್ಣ ನೀರಾವರಿ ಯೋಜನೆ'ಯಡಿ ಹೊಸ ಜಲಾಶಯ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ಹರಿಯುವ ನೀರಿನ ಪ್ರಮಾಣ ಸುಮಾರು 4 ಟಿಎಂಸಿ ಯಷ್ಟು ಕಡಿಮೆಯಾಗಲಿದೆ.

Read Full Story
10:09 PM (IST) Jul 21

Karnataka News Live 21 July 2026 ರೈತನಿಗೆ ದೌರ್ಜನ್ಯ ಎಸಗಿದ ವಿಡಿಯೋ ವೈರಲ್; ಕೊಪ್ಪಳದ ಬೇವೂರು ಪಿಎಸ್‌ಐ ಎತ್ತಂಗಡಿ!

ಕೊಪ್ಪಳದ ಬೇವೂರು ಠಾಣೆಯ ಪಿಎಸ್‌ಐ ಗುರುರಾಜ್ ಟಿ. ಅವರು ಪವನ ವಿದ್ಯುತ್ ಘಟಕದ ವಿವಾದದಲ್ಲಿ ರೈತನ ಮೇಲೆ ದೌರ್ಜನ್ಯ ಎಸಗಿದ್ದರು. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಸಾರ್ವಜನಿಕರ ಆಕ್ರೋಶ ಮತ್ತು ಐಜಿಪಿಗೆ ನೀಡಿದ ದೂರಿನ ಅನ್ವಯ ಅವರನ್ನು ಡಿಸಿಆರ್‌ಬಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
09:58 PM (IST) Jul 21

Karnataka News Live 21 July 2026 ಸಿಎಂ ಡಿಕೆ ಶಿವಕುಮಾರ್‌ಗೆ ರಂಭಾಪುರಿ ಶ್ರೀಗಳ ಮೇಲೇಕೆ ಅಷ್ಟೊಂದು ಭಕ್ತಿ? - ರಹಸ್ಯ ಬಿಚ್ಚಿಟ್ಟ ಜಗದ್ಗುರುಗಳು!

ಸಿಎಂ ಡಿ.ಕೆ. ಶಿವಕುಮಾರ್ ಅವರ ರಂಭಾಪುರಿ ಪೀಠದ ಮೇಲಿನ ಅಪಾರ ಭಕ್ತಿಗೆ ಕಾರಣವನ್ನು ಹಾಲಿ ರಂಭಾಪುರಿ ಶ್ರೀಗಳು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಡಿ.ಕೆ. ಶಿವಕುಮಾರ್‌ಗೆ ಅವರ ಬಾಲ್ಯದ ಘಟನೆಯನ್ನು ಅವರು ತಿಳಿಸಿದ್ದಾರೆ.

Read Full Story
09:35 PM (IST) Jul 21

Karnataka News Live 21 July 2026 ಸ್ಟಾರ್ ಹೀರೋ ಆಗುವುದಕ್ಕಿಂತ ಕಥೆಯೇ ಮುಖ್ಯ - ರವಿಚಂದ್ರನ್ ಪುತ್ರನ ವಿಭಿನ್ನ ನಿರ್ಧಾರ

Manoranjan Ravichandran: ಕಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ. ನೆಗೆಟಿವ್ ಶೇಡ್ ಇದ್ದರೂ ಅದೇ ಪಾತ್ರವನ್ನು ನನಗೆ ಹೆಚ್ಚು ಆಕರ್ಷಿಸಿತು. ಇಂತಹ ವಿಭಿನ್ನ ಪಾತ್ರಗಳನ್ನು ಮಾಡುವುದೇ ನನಗೆ ಸವಾಲಾಗಿ ಕಾಣುತ್ತದೆ ಎಂದು ಮನೋರಂಜನ್ ಹೇಳಿದ್ದಾರೆ.

Read Full Story
09:03 PM (IST) Jul 21

Karnataka News Live 21 July 2026 Delhi Protest - ಸುಮ್ಮನೆ ಹೊರಟಿದ್ದೆ, ಬೈದು ಫೋನ್ ಒಡೆದ್ರು! ಜಂತರ್ ಮಂತರ್‌ನಲ್ಲಿ ಕಣ್ಣೀರಿಟ್ಟ ಯುವಕನ ಕರುಣಾಜನಕ ಕಥೆ!

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ, ಪೊಲೀಸರ ಲಾಠಿ ಪ್ರಹಾರಕ್ಕೆ ನಿರಪರಾಧಿ ಯುವಕನೊಬ್ಬ ಬಲಿಯಾಗಿದ್ದಾನೆ. ತಾನು ಶಾಂತಿಯುತವಾಗಿ ಹೊರಡುತ್ತಿದ್ದರೂ ಪೊಲೀಸರು ಹಲ್ಲೆ ನಡೆಸಿ ಮೊಬೈಲ್ ಒಡೆದು ಹಾಕಿದ್ದಾರೆಂದು ಆತ ಕಣ್ಣೀರಿಟ್ಟಿದ್ದು, ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
08:34 PM (IST) Jul 21

Karnataka News Live 21 July 2026 ಬೆಂಗಳೂರಿನ 1 BHK ಮನೆಗೆ ಇಬ್ಬರು ಪುರುಷ ರೂಮ್‌ಮೇಟ್‌ ಬೇಕಾಗಿದ್ದಾರೆ - ಪೋಸ್ಟರ್ ವೈರಲ್

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 'ರೂಮ್‌ಮೇಟ್ ಬೇಕಾಗಿದ್ದಾರೆ' ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಪೂರ್ಣ ಸಜ್ಜುಗೊಂಡ 1BHK ಮನೆಗೆ, ಅದರಲ್ಲೂ ವಿಶೇಷವಾಗಿ 'ಮಲಯಾಳಿಗಳಿಗೆ ಆದ್ಯತೆ' ಎಂದು ಬರೆದಿರುವುದು ಜನರ ಅಚ್ಚರಿಗೆ ಮತ್ತು ಚರ್ಚೆಗೆ ಕಾರಣವಾಗಿದೆ.
Read Full Story
05:58 PM (IST) Jul 21

Karnataka News Live 21 July 2026 Job - ಅಗ್ನಿವೀರ್‌ ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್‌ - ಶೇ.25 ಅಲ್ಲ, ಬರೋಬ್ಬರಿ ಶೇ. 75ರಷ್ಟು ಅಭ್ಯರ್ಥಿಗಳಿಗೆ ಖಾಯಂ ಸೇವಾ ಅವಕಾಶ?

ಅಗ್ನಿವೀರ್ ಸ್ಪರ್ಧಾರ್ಥಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಎದುರಾಗಿದೆ. 3ಸೇನೆ ಕಡೆಯಿಂದ ಒಳ್ಳೆಯ ಸುದ್ದಿ. ಈ ನಿಟ್ಟಿನಲ್ಲಿ ಯುವಕರಿಗೆ ಸೇನೆಯಲ್ಲಿ ಖಾಯಂ ಉದ್ಯೋಗದ ಅವಕಾಶಗಳು ಹೆಚ್ಚಾಗಲಿವೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
05:08 PM (IST) Jul 21

Karnataka News Live 21 July 2026 Supreme Court - ಸಂಸಾರದ ಜಗಳ ಆಫೀಸ್ ಮೆಟ್ಟಿಲೇರಿದರೆ ಏನಾಗುತ್ತೆ? ಹೆಂಡತಿಯರಿಗೆ ಸುಪ್ರೀಂ ಖಡಕ್ ವಾರ್ನಿಂಗ್!

ಪತಿಯ ಸ್ನೇಹಿತ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ಗೆ ವರ್ಗಾಯಿಸುವಂತೆ ಕೋರಿ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
04:59 PM (IST) Jul 21

Karnataka News Live 21 July 2026 ಬನ್ನೇರುಘಟ್ಟ ಮೆಟ್ರೋ ಮಾರ್ಗ ಮತ್ತೆ ವಿಳಂಬ - ಆಗೆಸ್ಟ್ 15ರ ಡೆಡ್‌ಲೈನ್ ಮಿಸ್; ಸೆಪ್ಟೆಂಬರ್‌ನಲ್ಲಿ ಸಂಚಾರ ಆರಂಭ?

ಬನ್ನೇರುಘಟ್ಟ ರಸ್ತೆಯ ನಮ್ಮ ಮೆಟ್ರೋ 'ಪಿಂಕ್ ಲೈನ್' ಸಂಚಾರವು ಆಗಸ್ಟ್ 15ರ ಗಡುವನ್ನು ತಪ್ಪಿಸಿಕೊಳ್ಳುವುದು ಖಚಿತವಾಗಿದೆ. ಸಿಗ್ನಲಿಂಗ್ ವ್ಯವಸ್ಥೆಯ ಸುರಕ್ಷತಾ ಮೌಲ್ಯಮಾಪನ ಪ್ರಮಾಣಪತ್ರ ಬಾಕಿಯಿರುವುದೇ ಈ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ.

Read Full Story
04:57 PM (IST) Jul 21

Karnataka News Live 21 July 2026 ಶಿವಣ್ಣ-ವಿಜಯ್ ರಾಘವೇಂದ್ರ ಜೊತೆ ಕೊಡಗಿನ ಬೆಡಗಿ ವರ್ಷ ಬೊಳ್ಳಮ್ಮ - ಕನ್ನಡದಲ್ಲಿ ಹೊಸ ಅಧ್ಯಾಯ

Varsha Bollamma First Look: ದಕ್ಷಿಣ ಭಾರತದ ಜನಪ್ರಿಯ ನಟಿ ವರ್ಷ ಬೊಳ್ಳಮ್ಮ ಅವರು ಬಹುನಿರೀಕ್ಷಿತ 'ಮಹಾನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

Read Full Story
04:36 PM (IST) Jul 21

Karnataka News Live 21 July 2026 ಬಹುನಿರೀಕ್ಷಿತ ಧ್ರುವ ಸರ್ಜಾ ಚಿತ್ರಕ್ಕೆ ಬ್ರೇಕ್ - ನಿರ್ದೇಶಕ ಸೂರಿ ಹೇಳಿದ ಆ ಸತ್ಯವೇನು?

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರದಿಂದ ನಿರ್ದೇಶಕ ಸೂರಿ ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ವಿಳಂಬದ ಕಾರಣ, 'ಕ್ರಿಮಿನಲ್' ಚಿತ್ರದ ಪ್ರಭಾವ ಹಾಗೂ ಮುಂದಿನ ಯೋಜನೆ ಕುರಿತು ಸೂರಿ ಹೇಳಿದ್ದೇನು?

Read Full Story
04:27 PM (IST) Jul 21

Karnataka News Live 21 July 2026 ಮೂರು ವರ್ಷಗಳ ಬಳಿಕ Jakkur Flying School ಪುನರಾರಂಭ!; ಕಾರ್ಯನಿರ್ವಹಣೆಗೆ DGCA ಹೊಸ ಅನುಮೋದನೆ

ಬೆಂಗಳೂರಿನ ಜಕ್ಕೂರು ಸರ್ಕಾರಿ ವಿಮಾನ ಚಾಲನಾ ತರಬೇತಿ ಶಾಲೆಯು ಮೂರು ವರ್ಷಗಳ ಸುದೀರ್ಘ ವಿರಾಮದ ನಂತರ ಡಿಜಿಸಿಎಯಿಂದ ನೂತನ ಅನುಮೋದನೆ ಪಡೆದಿದೆ. ಈ ಮೂಲಕ, ಸಂಸ್ಥೆಯು ವಿವಿಧ ಪೈಲಟ್ ತರಬೇತಿ ಕೋರ್ಸ್‌ಗಳನ್ನು ಪುನರಾರಂಭಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ.

Read Full Story
03:48 PM (IST) Jul 21

Karnataka News Live 21 July 2026 ಬಂಗಾರ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡ್ತಿದ್ದ ಕುಖ್ಯಾತ ಕಳ್ಳ ಶಿಗ್ಲಿ ಬಸ್ಯಾ; ಬಿಗ್‌ಬಾಸ್ ಕನ್ನಡ ಮನೆಗೆ ಬರಲು ರೆಡಿ

ಗದಗದ ಕುಖ್ಯಾತ ಕಳ್ಳ 'ಶಿಗ್ಲಿ ಬಸ್ಯಾ' ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಸಲು ಪಣತೊಟ್ಟಿದ್ದಾನೆ. ಸನ್ಮಾರ್ಗದಲ್ಲಿ ನಡೆಯಲು ಅವಕಾಶ ಕೋರಿ, ತುಮಕೂರಿನ ಸಿದ್ದಗಂಗಾ ಮಠದಿಂದ ಬಿಡದಿಯ ಬಿಗ್‌ಬಾಸ್ ಮನೆಯವರೆಗೆ ಪಾದಯಾತ್ರೆ ಆರಂಭಿಸಿದ್ದಾನೆ. ಈ ಮೂಲಕ ವಾಹಿನಿ ಮುಖ್ಯಸ್ಥರು ಮತ್ತು ಕಿಚ್ಚ ಸುದೀಪ್ ಅವರ ಗಮನ ಸೆಳೆದು, ದೊಡ್ಮನೆ ಪ್ರವೇಶಿಸುವ ಗುರಿ ಹೊಂದಿದ್ದಾನೆ.
Read Full Story
03:18 PM (IST) Jul 21

Karnataka News Live 21 July 2026 ನಮ್ಮ ತಾಯಿ ಭೂಮಿಯ ಒಡಲು ಸೇರಿದ್ದಾರೆ -ಅಮ್ಮನ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅಗಲಿದ ತಮ್ಮ ತಾಯಿಯನ್ನು ನೆನೆದು ಭಾವುಕರಾದರು. ನಮ್ಮ ತಾಯಿ ಎಂದೂ ಮಾಧ್ಯಮಗಳ ಮುಂದೆ ಬಂದವಳಲ್ಲ. ಅವರೀಗ ಭೂಮಿ ತಾಯಿಯ ಒಡಲು ಸೇರಿದ್ದಾರೆ, ಶಿವ-ವಿಷ್ಣುವಿನ ಪಾದ ಸೇರಿದ್ದಾರೆ ಎಂದು ಭಾವುಕರಾದರು.

Read Full Story
03:18 PM (IST) Jul 21

Karnataka News Live 21 July 2026 Bengaluru - ಸಮಗ್ರ ಅಭಿವೃದ್ಧಿ ಟೆಂಡರ್ ರದ್ದು, ಶೀಘ್ರದಲ್ಲೇ ಔಟರ್ ರಿಂಗ್ ರೋಡ್ ಒತ್ತುವರಿ ತೆರವಿಗೆ ಜಿಬಿಎ ಸಿದ್ಧತೆ

ಬೆಂಗಳೂರಿನ ಹೊರವರ್ತುಲ ರಸ್ತೆಯ ಸಮಗ್ರ ಅಭಿವೃದ್ಧಿ ಟೆಂಡರ್‌ ರದ್ದುಗೊಂಡಿದ್ದು, ಮೊದಲು ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಜಿಬಿಎ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್ ಮತ್ತು ಪ್ರವಾಹಕ್ಕೆ ಕಾರಣವಾದ ರಸ್ತೆ ಹಾಗೂ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸಿದ ನಂತರವೇ ಹೊಸ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.
Read Full Story
02:42 PM (IST) Jul 21

Karnataka News Live 21 July 2026 ಬೆಂಗಳೂರು ಉಪನಗರ ರೈಲು ಯೋಜನೆಗೆ ಬೂಸ್ಟ್ - ಮತ್ತಿಕೆರೆ to ಯಶವಂತಪುರ ₹199 ಕೋಟಿ ವೆಚ್ಚದ ‘ಡಬಲ್ ಡೆಕ್ಕರ್’ ಕಾರಿಡಾರ್!

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸಲು ಉಪನಗರ ರೈಲು ಯೋಜನೆಯಡಿ (BSRP) ಮತ್ತಿಕೆರೆ ಮತ್ತು ಯಶವಂತಪುರ ನಡುವೆ 'ಡಬಲ್ ಡೆಕ್ಕರ್' ಕಾರಿಡಾರ್ ನಿರ್ಮಿಸಲಾಗುತ್ತಿದೆ. ಈ ವಿಶಿಷ್ಟ ಮಾದರಿಯಲ್ಲಿ ರಸ್ತೆ ಮೇಲ್ಸೇತುವೆಯ ಮೇಲೆ ಉಪನಗರ ರೈಲು ಮಾರ್ಗ ನಿರ್ಮಾಣವಾಗಲಿದ್ದು, ಇದಕ್ಕಾಗಿ ಕೆ-ರೈಡ್ ₹199 ಕೋಟಿ ವೆಚ್ಚದ ಹೊಸ ಟೆಂಡರ್ ಆಹ್ವಾನಿಸಿದೆ. ಈ ಯೋಜನೆಯು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲಿದೆ.
Read Full Story
02:33 PM (IST) Jul 21

Karnataka News Live 21 July 2026 ಪತ್ನಿ, ಮಕ್ಕಳ ಬಾಯಿಗೆ ಪ್ಲಾಸ್ಟರ್‌ ಹಚ್ಚಿ ಕೊಂದ ಪತಿ.. ಮೈಸೂರಲ್ಲಿ ಪಾಪದ ಕೃತ್ಯ

ಮೈಸೂರು ಜಿಲ್ಲೆಯ ಹುಣಸೂರಿನ ನ್ಯೂ ಮಾರುತಿ ಬಡಾವಣೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ, ತಾನೂ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಈ ಕೃತ್ಯಕ್ಕೆ ಕೌಟುಂಬಿಕ ಕಲಹ ಅಥವಾ ಆರ್ಥಿಕ ಸಂಕಷ್ಟ ಕಾರಣವಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Read Full Story
01:45 PM (IST) Jul 21

Karnataka News Live 21 July 2026 ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಬಿಗ್ ಶಾಕ್ - ಕೋರ್ಟ್‌ನಿಂದ ಸಮನ್ಸ್..!

ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

Read Full Story