- Home
- Karnataka Districts
- Bengaluru Urban
- ಬೆಂಗಳೂರಿನ 1 BHK ಮನೆಗೆ ಇಬ್ಬರು ಪುರುಷ ರೂಮ್‌ಮೇಟ್ ಬೇಕಾಗಿದ್ದಾರೆ: ಪೋಸ್ಟರ್ ವೈರಲ್
ಬೆಂಗಳೂರಿನ 1 BHK ಮನೆಗೆ ಇಬ್ಬರು ಪುರುಷ ರೂಮ್‌ಮೇಟ್ ಬೇಕಾಗಿದ್ದಾರೆ: ಪೋಸ್ಟರ್ ವೈರಲ್
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 'ರೂಮ್‌ಮೇಟ್ ಬೇಕಾಗಿದ್ದಾರೆ' ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಪೂರ್ಣ ಸಜ್ಜುಗೊಂಡ 1BHK ಮನೆಗೆ, ಅದರಲ್ಲೂ ವಿಶೇಷವಾಗಿ 'ಮಲಯಾಳಿಗಳಿಗೆ ಆದ್ಯತೆ' ಎಂದು ಬರೆದಿರುವುದು ಜನರ ಅಚ್ಚರಿಗೆ ಮತ್ತು ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆ
ಬೆಂಗಳೂರು ನಗರದಲ್ಲಿ ಬಾಡಿಗೆ ಮನೆ, ಎಲ್ಲಾ ವ್ಯವಸ್ಥೆಗಳನ್ನು ಹೊಂದಿರುವ ಪಿಜಿ ರೂಮ್ಸ್ ಹುಡುಕೋದು ಸವಾಲಿನ ಕೆಲಸ, ಕಾಲೇಜು, ಕಾರ್ಪೋರೇಟ್ ಕಂಪನಿಗಳಿರೋ ವ್ಯಾಪ್ತಿಯಲ್ಲಿ ನಮ್ಮಲ್ಲಿ ಪಿಜಿ ರೂಮ್‌ಗಳಿವೆ ಸಂಪರ್ಕಿಸಿ ಎಂಬ ಭಿತ್ತಿಪತ್ರಗಳನ್ನು ಗೋಡೆ, ಮರಗಳಿಗೆ ಅಂಟಿಸಲಾಗಿರುತ್ತದೆ.
ರೂಮ್‌ಮೇಟ್ಸ್ ಬೇಕಿದ್ದಾರೆ
ಇತ್ತೀಚೆಗೆ ಬಾಡಿಗೆಗೆ ಬಾಯ್‌ಫ್ರೆಂಡ್ ಸಿಗ್ತಾರೆ ಎಂಬ ಪೋಸ್ಟ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಅಂತಹುವುದೇ ಒಂದು ಪೋಸ್ಟ್ ಬೆಂಗಳೂರಿನ ವೈಟ್‌ಫೀಲ್ಡ್ ಭಾಗದಲ್ಲಿ ಕಂಡು ಬಂದಿದೆ. ಮರವೊಂದಕ್ಕೆ ಪೋಸ್ಟರ್ ಅಂಟಿಸಲಾಗಿದ್ದು, ರೂಮ್‌ಮೇಟ್ ಬೇಕಾಗಿದ್ದಾರೆ ಎಂದು ಬರೆಯಲಾಗಿದೆ. ಈ ಭಿತ್ತಿಪತ್ರ ನೋಡಿದ ಜನರು ಅಚ್ಚರಿಗೊಂಡು ನಕ್ಕಿದ್ದಾರೆ.
ವೈರಲ್ ಪೋಸ್ಟರ್‌ನಲ್ಲಿ ಏನಿದೆ?
Fully Furnished ಆಗಿರೋ 1BHK ಮನೆಗೆ ಒಬ್ಬರು ಅಥವಾ ಇಬ್ಬರು ಪುರುಷ ರೂಮ್‌ಮೇಟ್ಸ್ ಬೇಕಾಗಿದ್ದಾರೆ.
ಸ್ಥಳ: ವೈಟ್‌ಫೀಲ್ಡ್
ಮಲಯಾಳಿಗಳಿಗೆ ಆದ್ಯತೆ ಎಂಬ ಬರಹವುಳ್ಳ ಪೋಸ್ಟರ್ ಅಂಟಿಸಿ ಮೊಬೈಲ್ ನಂಬರ್ ಸಹ ಹಾಕಲಾಗಿದೆ.
ಪೋಸ್ಟ್‌ಗೆ ಬಂದಿರೋ ಕಮೆಂಟ್ ಏನು?
ವೈಟ್‌ಫೀಲ್ಡ್ ಭಾಗದಲ್ಲಿ ಬಾಡಿಗೆ ಅಧಿಕವಾಗಿರುತ್ತದೆ. ಈ ಕಾರಣದಿಂದ ರೂಮ್‌ಮೇಟ್ ಜೊತೆಯಲ್ಲಿದ್ರೆ ಬಾಡಿಗೆ ಕಡಿಮೆಯಾಗುತ್ತೆ ಎಂಬ ಉದ್ದೇಶದಿಂದ ಪೋಸ್ಟರ್ ಅಂಟಿಸಿರುತ್ತಾರೆ. 1 BHK ಮನೆಯಲ್ಲಿ ಇಬ್ಬರಿಂದ ಮೂರು ಜನರು ಆರಾಮಾದಿಂದ ವಾಸಿಸಬಹುದು. ಶೇರಿಂಗ್ ಮಾಡೋದರಿಂದ ಬಾಡಿಗೆ ಸೇರಿದಂತೆ ಇನ್ನಿತರ ಖರ್ಚುಗಳು ಕಡಿಮೆಯಾಗುತ್ತವೆ ಎಂದು ಬರೆದಿದ್ದಾರೆ. ಇದಕ್ಕೆ ಅಪಾರ್ಥ ಕಲ್ಪಿಸೋದ ಬೇಡ ಎಂದು ಸಲಹೆ ನೀಡಿದ್ದಾರೆ.
ಮಲಯಾಳಿಗಳಿಗೆ ಆದ್ಯತೆ
ಮತ್ತೊಂದು ಈ ಪೋಸ್ಟ್‌ನಲ್ಲಿ ಮಲಯಾಳಿಗಳಿಗೆ ಆದ್ಯತೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗಾಗಿ ಈ ಪೋಸ್ಟರ್ ಅಂಟಿಸಿರೋದು ಮಲಯಾಳಿಗಳೇ ಎಂಬುವುದು ಖಚಿತವಾಗುತ್ತದೆ. ಸದ್ಯ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಕೆಲವರು ಬೆಂಗಳೂರು ಮಹಾನಗರ ಎಲ್ಲಾಅದ್ಭುತಗಳಿಗೆ ಸಾಕ್ಷಿಯಾಗಲಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

