ಜಾಂಡೀಸ್‌ನಿಂದ ಬಳಲುತ್ತಿರುವ ನಟ ಸಂತೋಷ್ ಬಾಲರಾಜ್ ಅವರ ಆರೋಗ್ಯ ತೀರಾ ಗಂಭೀರವಾಗಿದ್ದು, ಕೋಮಾಕ್ಕೆ ಜಾರಿದ್ದಾರೆ. ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರಿಯಾ 2, ಕೆಂಪ, ಗಣಪ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
- Home
- News
- State
- Karnatata Latest News Live: ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸ್ಯಾಂಡಲ್‌ವುಡ್ ಯುವ ನಟ 'ಗಣಪ' ಸಂತೋಷ್ ಬಾಲರಾಜ್!
Karnatata Latest News Live: ಸಾವು ಬದುಕಿನ ನಡುವೆ ಹೋರಾಡುತ್ತಿರುವ ಸ್ಯಾಂಡಲ್‌ವುಡ್ ಯುವ ನಟ 'ಗಣಪ' ಸಂತೋಷ್ ಬಾಲರಾಜ್!

ಕೊಪ್ಪಳ ನಗರದ ಕೆಆರ್ಐಡಿಎಲ್(ಕರ್ನಾಟಕ ಗ್ರಾಮೀಣ ಮೂಲಸೌ ಕಠ್ಯ ಅಭಿವೃದ್ಧಿನಿಗಮ) ನಲ್ಲಿ ಕೆಲ ವರ್ಷ ಹೊರ ಗುತ್ತಿಗೆ ಕಚೇರಿ ಸಹಾಯಕನಾಗಿದ್ದವನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆತನ ಬಳಿ ಇದ್ದ ಬರೋಬ್ಬರಿ ಆಸ್ತಿ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕಳಕಪ್ಪನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, 24 ಮನೆ, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ 100 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ದಾಖಲೆ ಪತ್ತೆಯಾಗಿದೆ.
Karnatata Latest News Liveಸಾವು ಬದುಕಿನ ನಡುವೆ ಹೋರಾಡುತ್ತಿರುವ ಸ್ಯಾಂಡಲ್‌ವುಡ್ ಯುವ ನಟ 'ಗಣಪ' ಸಂತೋಷ್ ಬಾಲರಾಜ್!
Karnatata Latest News Liveಕರ್ನಾಟಕ ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆದ ಸರ್ಕಾರ! ನಾಳೆ ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರವು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ವಿವಿಧ ಬಸ್ ಮಾಲೀಕರ ಸಂಘಗಳ ಪ್ರತಿನಿಧಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಿದೆ.
Karnatata Latest News Liveಗೃಹಲಕ್ಷ್ಮೀ ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಆರ್ಥಿಕ ಅಭಿವೃದ್ಧಿಯನ್ನು ವ್ಯವಸ್ಥಿತಗೊಳಿಸುವ ಸಂಬಂಧ ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
Karnatata Latest News Liveಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ! ಹಾಸ್ಯನಟನ ನಿಜ ಜೀವನದಲ್ಲಿ ನಗುವೇ ಇರಲಿಲ್ಲ!
ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಯಲ್ಲಾಪುರದ ಕಟ್ಟಿಗೆ ಗ್ರಾಮದ ಸಮೀಪದ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ.
Karnatata Latest News Liveಐಟಿ ದಾಳಿ ಸಾಮಾನ್ಯ, ಇದಕ್ಕೂ ಸ್ಮಾರ್ಟ್ ಮೀಟರ್ ಒಪ್ಪಂದಕ್ಕೂ ಸಂಬಂಧವಿಲ್ಲ - ಕೆಜೆ ಜಾರ್ಜ್
Karnatata Latest News Liveಮದುವೆಯಾದ ಯುವತಿಗೆ ಮೆಸೇಜ್ ಮಾಡಿದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ; ಬರ್ತಡೇ ಪಾರ್ಟಿ ದಿನವೇ ಹೆಣಹಾಕಿದ ಗಂಡ!
ಹಾವೇರಿಯಲ್ಲಿ ಮದುವೆಯಾದ ಯುವತಿಗೆ ಮೆಸೇಜ್ ಕಳುಹಿಸಿದ್ದಕ್ಕೆ ಕಾಂಗ್ರೆಸ್ ಮುಖಂಡನನ್ನು ಬರ್ತಡೇ ದಿನದಂದೇ ಕೊಲೆ ಮಾಡಲಾಗಿದೆ. ಮನೋಜ್ ಪ್ರಕಾಶ್ ಉಡಗಣಿ ಎಂಬ ಕಾಂಗ್ರೆಸ್ ಕಾರ್ಯದರ್ಶಿಯನ್ನು ಕಂಠಪೂರ್ತಿ ಮದ್ಯ ಕುಡಿಸಿ ವರದಾ ನದಿಗೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೃತನ ಕುಟುಂಬಸ್ಥರ ಆಕ್ರೋಶ.
Karnatata Latest News Liveಬೇಕಾಬಿಟ್ಟಿ ಥಾರ್ ಚಲಾಯಿಸಿ ಬೈಕ್‌ಗೆ ಗುದ್ದಿದ ರಕ್ಷಕ್ ಬುಲೆಟ್, ಯುವಕನ ಕಾಲು ಮುರಿತ!
Karnatata Latest News Liveಭಾರತೀಯ ಮೂಲದ ನಿಖಿಲ್ ರವಿಶಂಕರ್ ಏರ್ ನ್ಯೂಜಿಲೆಂಡ್ ಸಂಸ್ಥೆಯ ಸಿಇಒ ಆಗಿ ನೇಮಕ
ಜಾಗತಿಕ ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರಾಗಿರುವ ಭಾರತೀಯರ ಸಾಲಿಗೆ ಮತ್ತೊಬ್ಬ ಸಾಧಕ ಸೇರಿಕೊಂಡಿದ್ದಾರೆ. ಏರ್ ನ್ಯೂಜಿಲೆಂಡ್ ಏರ್‌ಲೈನ್ಸ್ ಸಂಸ್ಥೆಯ ಸಿಇಒ ಆಗಿ ಭಾರತೀಯ ಮೂಲದ ನಿಖಿಲ್ ರವಿಶಂಕರ್ ನೇಮಕಗೊಂಡಿದ್ದಾರೆ.
Karnatata Latest News Liveಪ್ರಜ್ವಲ್ ರೇವಣ್ಣ ಅಪರಾಧಿ ತೀರ್ಪಿಗೆ ಮೌನಕ್ಕೆ ಶರಣಾದ ಅಪ್ಪ, ಯಾರ‍್ಯಾರು ಏನು ಹೇಳಿದ್ರು?
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಒಂದು ಪ್ರಕರಣದಲ್ಲಿ ತೀರ್ಪು ಬಂದಿದ್ದು, ಇನ್ನೂ ಮೂರು ಪ್ರಕರಣಗಳು ಬಾಕಿ ಇವೆ. ಡಿಕೆಶಿ, ಅಶ್ವಥ್ ನಾರಾಯಣ್, ಸುಮಲತಾ ಅಂಬರೀಶ್ ಮತ್ತು ರೂಪಾ ಹಾಸನ್ ಪ್ರತಿಕ್ರಿಯಿಸಿದ್ದಾರೆ.
Karnatata Latest News Liveರಸ್ತೆಯಲ್ಲಿ ಸಿಕ್ಕ ₹50,000 ಹಣದ ಬ್ಯಾಗನ್ನು ಕಂಕಳಲ್ಲಿಟ್ಟುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ ಪ್ರಾಮಾಣಿಕ ವ್ಯಕ್ತಿ!
ಚಳ್ಳಕೆರೆಯಲ್ಲಿ ರಂಗನಾಥ್ ಎಂಬುವವರಿಗೆ ರಸ್ತೆಯಲ್ಲಿ ₹50,000 ಹಣದ ಬ್ಯಾಗ್ ಸಿಕ್ಕಿದೆ. ಬ್ಯಾಗ್ ಅನ್ನು ಮನೆಗೆ ತೆಗೆದುಕೊಂಡು ಹೋಗದೆ, ನೇರವಾಗಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ನಂತರ ಹಣ ಕಳೆದುಕೊಂಡ ಗೋವರ್ಧನ್ ಎಂಬುವವರಿಗೆ ಪೊಲೀಸರು ಹಣವನ್ನು ಹಿಂದಿರುಗಿಸಿದ್ದಾರೆ.
Karnatata Latest News Live71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ,ಶಾರುಖ್ ಖಾನ್-ವಿಕ್ರಾಂತ್ ಮಾಸ್ಸೆ ಬೆಸ್ಟ್ ನಟ ಕಿರೀಟ
7ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪ್ರಕಟವಾಗಿದೆ. ಶಾರುಖ್ ಖಾನ್ ಹಾಗೂ ವಿಕ್ರಾಂಸ್ ಮಾಸ್ಸೆಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಒಲಿದು ಬಂದಿದ್ದರೆ, ಅತ್ಯುತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಪಾಲಾಗಿದೆ. ಯಾವ ಸಿನಿಮಾಗಳಿಗೆ ಸಿಕ್ಕಿದೆ ಪ್ರಶಸ್ತಿ ಇಲ್ಲಿದೆ ಲಿಸ್ಟ್.
Karnatata Latest News Liveಧರ್ಮಸ್ಥಳ ಸಮಾಧಿ ಪ್ರಕರಣ, 19 ವರ್ಷಗಳ ಯುಡಿಆರ್ ದಾಖಲೆ ಸಂಗ್ರಹಿಸಿದ ಎಸ್‌ಐಟಿ
ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪದ ತನಿಖೆಗೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ದಾಖಲೆಗಳನ್ನು ಸಂಗ್ರಹಿಸಿದೆ. ಜುಲೈ 31 ರಂದು 6 ನೇ ಸ್ಥಳದಲ್ಲಿ ಕಳೇಬರ ಪತ್ತೆಯಾಗಿದ್ದು, 7 ಮತ್ತು 8 ನೇ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
Karnatata Latest News Liveಬೆಂಗಳೂರು-ತಿರುವನಂತಪುರಂ ನಡುವೆ ವಿಶೇಷ ರೈಲುಗಳು ಘೋಷಣೆ; ವೇಳಾಪಟ್ಟಿ ಇಲ್ಲಿದೆ
Onam Special Train Bookings: ಬೆಂಗಳೂರು ಮತ್ತು ತಿರುವನಂತಪುರಂ ನಡುವೆ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ವಾರದ ಮತ್ತು ಬುಧವಾರದಂದು ಸಂಚರಿಸಲಿರುವ ಈ ರೈಲುಗಳು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Karnatata Latest News Liveಸ್ಯಾಂಡಲ್‌ವುಡ್‌ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ, ಕಂದೀಲು ಸಿನಿಮಾಗೆ ಅವಾರ್ಡ್!
Karnatata Latest News Liveಕೇರಳ ನರ್ಸ್ ನಿಮಿಷ ಪ್ರಿಯಾ ಪ್ರಕರಣಕ್ಕೆ ಟ್ವಿಸ್ಟ್, ಯೆಮೆನ್ ಗಲ್ಲು ಶಿಕ್ಷೆ ರದ್ದಾಗಿಲ್ಲ
ಕೇರಳ ನರ್ಸ್ ನಿಮಿಷ ಪ್ರಿಯಾಗೆ ಯೆಮೆನ್ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಹಲವರ ಸಂಧಾನದಿಂದ ರದ್ದಾಗಿದೆ ಅನ್ನೋ ಸುದ್ದಿ, ವಿಡಿಯೋ ಹರಿದಾಡಿತ್ತು. ಆದರೆ ಈ ಪ್ರಕರಣ ಕುರಿತು ಇದೀಗ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
Karnatata Latest News Liveರಸಗೊಬ್ಬರ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ - ಸಿಎಂ ಸಿದ್ದರಾಮಯ್ಯ
ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿದೆ. ಈ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Karnatata Latest News Liveಬರೋಬ್ಬರಿ 12 ಸಾವಿರ ಉದ್ಯೋಗ ಕಡಿತ, ಟಿಸಿಎಸ್‌ನಿಂದ ಉತ್ತರ ಕೇಳಿ ರಾಜ್ಯ ಕಾರ್ಮಿಕ ಇಲಾಖೆ ನೋಟಿಸ್
ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ರಾಜ್ಯ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದೆ. ಕೈಗಾರಿಕಾ ವಿವಾದ ಕಾಯ್ದೆ ಉಲ್ಲಂಘನೆ ಮತ್ತು ನೌಕರರನ್ನು ರಾಜೀನಾಮೆ ನೀಡಲು ಬಲವಂತಪಡಿಸಿದ ಆರೋಪ ಕೇಳಿಬಂದಿದೆ.
Karnatata Latest News Liveಕಬ್ಬನ್ ಪಾರ್ಕ್‌ನಲ್ಲಿ 18 ವರ್ಷ ಮೇಲ್ಪಟ್ಟವರಿಗೆ 199 ರೂ.ಗೆ ಬ್ಲೈಂಡ್ ಡೇಟಿಂಗ್ ಆಯೋಜನೆ!
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕೇವಲ 199 ರೂ.ಗೆ ಯುವಕ-ಯುವತಿಯರಿಗೆ 'ಬ್ಲೈಂಡ್ ಡೇಟ್' ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಬುಕಿಂಗ್ ಕೂಡ ಆರಂಭವಾಗಿದೆ. ಇದಕ್ಕೆ ಸ್ಥಳೀಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತೋಟಗಾರಿಕಾ ಇಲಾಖೆ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
Karnatata Latest News Liveಅವಳಿ ಮಕ್ಕಳ ನಿರೀಕ್ಷೆಯಲ್ಲಿರುವ ನಟಿ ಭಾವನಾ ರಾಮಣ್ಣ ಸೀಮಂತ ಸಂಭ್ರಮ
Karnatata Latest News Liveಭಕ್ತಾದಿಗಳೇ ಗಮನಿಸಿ.. ಇನ್ಮುಂದೆ ತಿರುಪತಿಯಲ್ಲಿ ರೀಲ್ಸ್ ಮಾಡಿದ್ರೆ ಜೈಲು ಶಿಕ್ಷೆ - ಟಿಟಿಡಿ ಎಚ್ಚರಿಕೆ
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ): ತಿಮ್ಮಪ್ಪನ ಗುಡಿಯ ಹತ್ತಿರ ರೀಲ್ಸ್ ಮಾಡಿದ್ರೆ ಖಂಡಿತಾ ಶಿಕ್ಷೆ ಅನುಭವಿಸಬೇಕಾಗುತ್ತೆ ಅಂತ ಟಿಟಿಡಿ ಎಚ್ಚರಿಕೆ ಕೊಟ್ಟಿದೆ. ಭಕ್ತರ ಭಾವನೆಗಳಿಗೆ ಗೌರವ ಕೊಡಿ ಅಂತ ಮನವಿ ಮಾಡಿದೆ.