- Home
- Karnataka Districts
- Bengaluru Urban
- ಬೆಂಗಳೂರು-ತಿರುವನಂತಪುರಂ ನಡುವೆ ವಿಶೇಷ ರೈಲುಗಳು ಘೋಷಣೆ; ವೇಳಾಪಟ್ಟಿ ಇಲ್ಲಿದೆ
ಬೆಂಗಳೂರು-ತಿರುವನಂತಪುರಂ ನಡುವೆ ವಿಶೇಷ ರೈಲುಗಳು ಘೋಷಣೆ; ವೇಳಾಪಟ್ಟಿ ಇಲ್ಲಿದೆ
Onam Special Train Bookings: ಬೆಂಗಳೂರು ಮತ್ತು ತಿರುವನಂತಪುರಂ ನಡುವೆ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ವಾರದ ಮತ್ತು ಬುಧವಾರದಂದು ಸಂಚರಿಸಲಿರುವ ಈ ರೈಲುಗಳು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಹಬ್ಬದ ಸಮಯದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಸಚಿವಾಲಯವು ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಎಸ್‌ಎಂವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ ವಾರದ ಎಕ್ಸ್‌ಪ್ರೆಸ್ ವಿಶೇಷ ರೈಲು (06523) 2025 ಆಗಸ್ಟ್ 11, 18, 25, ಸೆಪ್ಟೆಂಬರ್ 1, 8, 15 ದಿನಾಂಕಗಳಲ್ಲಿ (ಸೋಮವಾರ) ರಾತ್ರಿ 7:25 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 1:15 ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.
ತಿರುಗಿ ತಿರುವನಂತಪುರಂ ನಾರ್ತ್ - ಎಸ್ಎಂವಿಟಿ ಬೆಂಗಳೂರು ವಾರದ ಎಕ್ಸ್‌ಪ್ರೆಸ್ ವಿಶೇಷ ರೈಲು (06524) ತಿರುವನಂತಪುರಂನಿಂದ 2025 ಆಗಸ್ಟ್ 12, 19, 26, ಸೆಪ್ಟೆಂಬರ್ 2, 9, 16 ದಿನಾಂಕಗಳಲ್ಲಿ ಮಧ್ಯಾಹ್ನ 3:15 ಕ್ಕೆ ಹೊರಟು ಮರುದಿನ ಬೆಳಗ್ಗೆ 08:30 ಕ್ಕೆ ಬೆಂಗಳೂರು ಎಸ್ಎಂವಿಟಿ ತಲುಪಲಿದೆ.
ಎಸ್ಎಂವಿಟಿ ಬೆಂಗಳೂರು - ತಿರುವನಂತಪುರಂ ನಾರ್ತ್ ವಾರದ ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06547) 2025 ಆಗಸ್ಟ್ 13, 27, ಸೆಪ್ಟೆಂಬರ್ 3 ದಿನಾಂಕಗಳಲ್ಲಿ (ಬುಧವಾರ) ಸಂಜೆ 7:25 ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 1:15 ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.
ತಿರುವನಂತಪುರಂ ನಾರ್ತ್ - ಎಸ್ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (ಸಂಖ್ಯೆ 06548) ಗುರುವಾರಗಳಲ್ಲಿ, 2025 ಆಗಸ್ಟ್ 14, 28, ಸೆಪ್ಟೆಂಬರ್ 4 ದಿನಾಂಕಗಳಲ್ಲಿ ಮಧ್ಯಾಹ್ನ 3:15 ಕ್ಕೆ ತಿರುವನಂತಪುರಂನಿಂದ ಹೊರಟು ಮರುದಿನ ಬೆಳಿಗ್ಗೆ 08:30 ಕ್ಕೆ ಬೆಂಗಳೂರು ಎಸ್ಎಂವಿಟಿ ತಲುಪಲಿದೆ.
ಕೃಷ್ಣರಾಜಪುರ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಪೋಡನೂರ್, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ಚಂಗನಾಶ್ಶೇರಿ, ತಿರುವಲ್ಲ, ಚೆಂಗಣ್ಣೂರ್, ಮಾವೇಲಿಕರ, ಕಾಯಂಕುಲಂ, ಕೊಲ್ಲಂ, ವರ್ಕಲ ಮುಂತಾದ ನಿಲ್ದಾಣಗಳಲ್ಲಿ ಈ ರೈಲುಗಳು ನಿಲ್ಲುತ್ತವೆ. ರೈಲುಗಳ ಮುಂಗಡ ಬುಕಿಂಗ್ 2025 ಆಗಸ್ಟ್ 02 ರಂದು ಬೆಳಗ್ಗೆ 08:00 ಗಂಟೆಯಿಂದ ಪ್ರಾರಂಭವಾಗುತ್ತದೆ.

