ಜಾಗತಿಕ ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರಾಗಿರುವ ಭಾರತೀಯರ ಸಾಲಿಗೆ ಮತ್ತೊಬ್ಬ ಸಾಧಕ ಸೇರಿಕೊಂಡಿದ್ದಾರೆ. ಏರ್ ನ್ಯೂಜಿಲೆಂಡ್ ಏರ್‌ಲೈನ್ಸ್ ಸಂಸ್ಥೆಯ ಸಿಇಒ ಆಗಿ ಭಾರತೀಯ ಮೂಲದ ನಿಖಿಲ್ ರವಿಶಂಕರ್ ನೇಮಕಗೊಂಡಿದ್ದಾರೆ.
ನವದೆಹಲಿ (ಆ.01) ಹಲವು ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಾಗಿ ಭಾರತೀಯರು ಸೇವೆ ಸಲ್ಲಿಸುತ್ತಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೇರಿದಂತೆ ಹಲವು ಭಾರತೀಯರು ಪ್ರಮುಖ ಸಂಸ್ಥೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಸಾಲಿಗೆ ಮತ್ತೊಬ್ಬ ಭಾರತೀಯ ಮೂಲದ ಸಾಧಕ ಸೇರಿಕೊಂಡಿದ್ದಾರೆ. ನ್ಯೂಜಿಲೆಂಡ್‌ನ ಪ್ರತಿಷ್ಠಿತ ಏರ್‌ಲೈನ್ಸ್ ಏರ್ ಇಂಡಿಯಾ ಸಂಸ್ಥೆಯ ಸಿಇಒ ಆಗಿ ಭಾರತೀಯ ಮೂಲದ ನಿಖಿಲ್ ರವಿಶಂಕರ್ ನೇಮಕಗೊಂಡಿದ್ದಾರೆ. ಕಳೆದ 5 ವರ್ಷಗಳಿಂದ ಏರ್ ನ್ಯೂಜಿಲೆಂಡ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಿಖಿಲ್ ರವಿಶಂಕರ್ ಅಕ್ಟೋಬರ್ 20, 2025ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ನಿಖಿಲ್ ರವಿಶಂಕರ್ 5 ವರ್ಷದ ಜರ್ನಿ
ಏರ್ ನ್ಯೂಜಿಲೆಂಡ್ ಸಂಸ್ಥೆಯಲ್ಲಿ ಸದ್ಯ ಡಿಜಿಟಲ್ ಆಫೀಸರ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ನಿಖಿಲ್ ರವಿಶಂಕರ್ ಕಳೆದ 5 ವರ್ಷದಲ್ಲಿ ಸಂಸ್ಥೆಯ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆ್ಯಕ್ಸೆಂಚರ್ ಕಂಪನಿಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2021ರಲ್ಲಿ ಏರ್ ನ್ಯೂಜಿಲೆಂಡ್ ಸಂಸ್ಥೆಗೆ ಸೇರಿಕೊಂಡರು. ಇದಕ್ಕೂ ಮೊದಲು ವೆಕ್ಟರ್ ನ್ಯೂಜಿಲೆಂಡ್ ಕಂಪನಿಯಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ ಸೈನ್ಸ್ , ಕಂಪ್ಯೂಟರ್ ಸೈನ್ಸ್ ಹಾಗೂ ಬ್ಯಾಚುಲರ್ಸ್ ಆಫ್ ಕಾಮರ್ಸ್ ಪದವಿ ಪಡೆದಿದ್ದಾರೆ.
ಸಿಇಒ ಆಯ್ಕೆ ಬೆನ್ನಲ್ಲೇ ಮೊದಲ ಪ್ರತಿಕ್ರಿಯೆ
ಇಷ್ಟು ದೊಡ್ಡ ಜವಾಬ್ದಾರಿ ನೀಡಿರುವುದಕ್ಕೆ ಅತೀವ ಸಂತೋಷ ವ್ಯಕ್ತಪಡಿಸಿರುವ ನಿಖಿಲ್ ರವಿಶಂಕರ್, ಸಂಸ್ಥೆಯ ಏಳಿಗೆಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ವಿಶ್ವದ ಅತ್ಯುತ್ತಮ ಏರ್‌ಲೈನ್ಸ್‌ಗಳಲ್ಲಿ ಒಂದಾಗಿರುವ ಏರ್ ನ್ಯೂಜಿಲೆಂಡ್ ಪ್ರಯಾಣಿಕರಿಗೆ, ಕ್ಯಾರಿಯರ್ ಸರ್ವೀಸ್‌ನಲ್ಲಿ ಮತ್ತಷ್ಟು ಉತ್ತಮ ಸೇವೆ ನೀಡಲಿದೆ ಎಂದಿದ್ದಾರೆ.
ಪ್ರತಿ ದಿನ 400 ವಿಮಾನ ಹಾರಾಟ
ಏರ್ ನ್ಯೂಜಿಲೆಂಡ್ ವಿಶ್ವದ ಅತೀ ದೊಡ್ಡ ಏರ್‌ಲೈನ್ಸ್‌ಗಳಲ್ಲಿ ಒಂದು. ಪ್ರತಿ ದಿನ 400ಕ್ಕೂ ಹೆಚ್ಚು ವಿಮಾನಗಳು ದೇಶ ಹಾಗೂ ವಿದೇಶಗಳಿಗೆ ಸೇವೆ ನೀಡುತ್ತಿದೆ. 49ಕ್ಕೂ ಹೆಚ್ಚು ನಗರಗಳಿಗೆ ಸೇವೆ ನೀಡುತ್ತಿದೆ. ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಏರ್ ನ್ಯೂಜಿಲೆಂಡ್ ಹಾಗೂ ಏರ್ ಇಂಡಿಯಾ ಉಭಯ ದೇಶಘಳಿಗೆ ಡೈರೆಕ್ಟ್ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ.
