ಕೇರಳ ನರ್ಸ್ ನಿಮಿಷ ಪ್ರಿಯಾಗೆ ಯೆಮೆನ್ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಹಲವರ ಸಂಧಾನದಿಂದ ರದ್ದಾಗಿದೆ ಅನ್ನೋ ಸುದ್ದಿ, ವಿಡಿಯೋ ಹರಿದಾಡಿತ್ತು. ಆದರೆ ಈ ಪ್ರಕರಣ ಕುರಿತು ಇದೀಗ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. 

ನವದೆಹಲಿ (ಆ.01) ಕೇರಳ ನರ್ಸ್ ನಿಮಿಷ ಪ್ರಿಯಾಗಾಗಿ ಇಡೀ ದೇಶವೇ ಪ್ರಾರ್ಥಿಸಿದೆ. ಕೊಲೆ ಪ್ರಕರಣ ಸಂಬಂಧ ಯೆಮನ್ ಕೋರ್ಟ್ ನಿಮಿಷ ಪ್ರಿಯಾಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಜುಲೈ 16ರಂದ ನಿಮಿಷ ಪ್ರಿಯಾಗೆ ಗಲ್ಲು ಶಿಕ್ಷೆ ಜಾರಿಗೊಳಿಸಲು ಸೂಚಿಸಿತ್ತು. ಆದರೆ ಕೇಂದ್ರ ಸರ್ರಕಾರ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿತ್ತು. ಇತ್ತ ಹಲವು ಸಂಘಟನೆಗಳು, ಸಮುದಾಯದ ನಾಯಕರು ಮಾತುಕತೆಗೆ ಮುಂದಾಗಿದ್ದರು. ಕೊನೆಗೆ ಜುಲೈ 16ರ ಗಲ್ಲು ಶಿಕ್ಷೆ ಮುಂದೂಡಲಾಗಿತ್ತು. ಇದರ ಬೆನ್ನಲ್ಲೇ ಕೆಲ ಸಮುದಾಯದ ನಾಯಕರು ನಿಮಿಷ ಪ್ರಿಯಾ ಗಲ್ಲು ಶಿಕ್ಷೆ ರದ್ದಾಗಿದೆ. ಆಕೆ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದರು. ಆದರೆ ಇದೀಗ ಕೇಂದ್ರ ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಕೇಂದ್ರ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ಯಮೆನ್ ಗಲ್ಲು ಶಿಕ್ಷೆಯನ್ನು ಮುಂದೂಡಿದೆ, ಆದರೆ ರದ್ದುಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ತಪ್ಪು ಮಾಹಿತಿ ಹರದಂತೆ ಸೂಚಿಸಿದ ವಿದೇಶಾಂಗ ಇಲಾಖೆ

ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ ವಿದೇಶಾಂಗ ಇಲಾಖೆ ವಕ್ತಾರ ರಂಧೀರ್ ಜೈಸ್ವಾಲ್, ತಪ್ಪು ಮಾಹಿತಿ ಹರಡಬೇಡಿ. ಯೆಮೆನ್ ಅಧಿಕಾರಿಗಳ ಜೊತೆ, ಯಮೆನ್‌ಗೆ ಆತ್ಮೀಯ ದೇಶಗಳ ಜೊತೆ ಭಾರತ ನಿರಂತರ ಮಾತುಕತೆ ನಡೆಸುತ್ತಿದೆ. ನಿಮಿಷ ಪ್ರಿಯಾಗೆ ಕಾನೂನಾತ್ಮಕ ನೆರವನ್ನು ಭಾರತ ಸರ್ಕಾರ ನೀಡುತ್ತಿದೆ. ಸದ್ಯ ಯೆಮನ್ ದೇಶ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಆದರೆ ಶಿಕ್ಷೆ ರದ್ದಾಗಿಲ್ಲ ಎಂದು ರಂಧೀರ್ ಜೈಸ್ವಾಲ್ ಹೇಳಿದ್ದಾರೆ.

ಶಿಕ್ಷೆ ರದ್ದುಗೊಳಿಸಿರುವ ಮಾಹಿತಿ ತಪ್ಪು ಎಂದು ಸ್ಪಷ್ಟಪಡಿಸಿದ ಇಲಾಖೆ

ಇತ್ತೀಚೆಗೆ ಗ್ಲೋಬಲ್ ಫೀಸ ಫೌಂಡೇಶನ್ ಮುಖ್ಯಸ್ಥ ಡಾ.ಪೌಲ್ ವಿಡಿಯೋ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದರು. ನಿಮಿಷ ಪ್ರಿಯಾ ಕುಟುಂಬದ ಪರವಾಗಿ, ಭಾರತದ ಪರವಾಗಿ ತಾನು ಯೆಮೆನ್ ದೇಶದ ಅಧಿಕಾರಿಗಳು, ನಾಯಕರ ಜೊತೆ ಮಾತನಾಡಿದ್ದೇನೆ. ಯೆಮೆನ್ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹಿಂಪಡೆದಿದೆ. ನಿಮಿಷ ಪ್ರಿಯಾ ಬಿಡುಗಡೆಯಾಗಲಿದ್ದಾರೆ ಎಂದು ಕೆಎಲ್ ಪೌಲ್ ವಿಡಿಯೋ ಮೂಲಕ ಹೇಳಿದ್ದರು. ಆದರೆ ಇದು ತಪ್ಪು ಮಾಹಿತಿ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ತಪ್ಪು ಮಾಹಿತಿ ಹರದಂಡೆ ವಿದೇಶಾಂಗ ಇಲಾಖೆ ಸೂಚಿಸಿದೆ.

Scroll to load tweet…

2017ರ ಕೊಲೆ ಪ್ರಕರಣದಿಂದ ನಿಮಿಷ ಪ್ರಿಯಾಗೆ ಗಲ್ಲು ಶಿಕ್ಷೆ

2017ರಲ್ಲಿ ಯೆಮೆನ್ ದೇಶದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ನಿಮಿಷ ಪ್ರಿಯಾ, ತನ್ನ ಕ್ಲಿನಿ‌ಕ್‌ಗೆ ಸ್ಥಳೀಯ ತಲಾಲ್ ಅಬ್ಡೋ ಮೆಹದಿ ನೆರವು ಪಡೆದಿದ್ದರು. ಯೆಮೆನ್‌ನಲ್ಲಿ ವಿದೇಶಿಗರು ಯಾವುದೇ ಉದ್ಯಮ, ಸಂಸ್ಥೆ ಸ್ಥಾಪಿಸಲು ಸ್ಥಳೀಯರ ಸ್ಪಾನ್ಸರ್‌ಶಿಪ್ ಅಗತ್ಯ. ಹೀಗೆ ತಲಾಲ್ ಅಬ್ದೋ ಮೆಹದಿ ನೆರವಿನ ಮೂಲಕ ಕ್ಲಿನಿಕ್ ಆರಂಭಿಸಿದ್ದರು. 2023ರಲ್ಲಿ ಯೆಮೆನ್ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ಎತ್ತಿ ಹಿಡಿದಿತ್ತು. ಇದರ ಪ್ರಕಾರ ಜುಲೈ 16ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ ಭಾರತ ಸರ್ಕಾರದ ಸತತ ಪ್ರಯತ್ನಗಳ ಫಲವಾಗಿ ತಾತ್ಕಾಲಿಕವಾಗಿ ಶಿಕ್ಷೆ ಮುಂದೂಡಲಾಗಿತ್ತು.

2011ರಲ್ಲಿ ನಿಮಿಷ ಪ್ರಿಯಾ ಯೆಮೆನ್‌ಗೆ ತೆರಳಿದ್ದರು. ಯೆಮೆನ್‌ನಲ್ಲಿ ನರ್ಸ್ ಆಗಿ ಕೆಲಸ ಆರಂಭಿಸಿದ ನಿಮಿಷ ಪ್ರಿಯಾ 2015ರಲ್ಲಿ ಸ್ವಂತ ಕ್ಲಿನಿಕ್ ಆರಂಭಿಸಿದ್ದಳು. ಇದಕ್ಕಾಗಿ ಸ್ಥಳೀಯ ತಲಾಲ್ ಅಬ್ದೋ ಮೆಹದಿ ನೆರವು ಪಡೆದುಕೊಂಡಿದ್ದರು. ಆದರೆ ತಲಾಲ್ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದ. ನಿಮಿಷ ಪ್ರಿಯಾಳ ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆ ಕೈವಶ ಮಾಡಿದ ತಲಾಲ್, ನಿಮಿಷ ಪ್ರಿಯಾಳನ್ನು ಬಂಧಿಯಾಗಿಸಿದ್ದ. ಆತನಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಲು ಮುಂದಾದ ನಿಮಿಷ ಪ್ರಿಯಾ ತಲಾಲ್‌ಹೆ ಸೆಡೆಶನ್ ನೀಡಿದ್ದಳು. ಆದರೆ ಡೋಸ್ ಹೆಚ್ಚಾದ ಕಾರಣ ತಲಾಲ್ ಮೃತಪಟ್ಟಿದ್ದ. ಗಾಬರಿಗೊಂಡ ನಿಮಿಷ ಪ್ರಿಯಾ ಮತ್ತೊಬ್ಬ ಗೆಳೆಯ ಸಹಾಯದಲ್ಲಿ ತಲಾಲ್ ಮೃತದೇಹ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ಹಾಕಲಾಗಿತ್ತು. ಹೀಗಾಗಿ ಈ ಪ್ರಕರಣ ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು ಸಾಬೀತಾಗಿತ್ತು.