ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪದ ತನಿಖೆಗೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ದಾಖಲೆಗಳನ್ನು ಸಂಗ್ರಹಿಸಿದೆ. ಜುಲೈ 31 ರಂದು 6 ನೇ ಸ್ಥಳದಲ್ಲಿ ಕಳೇಬರ ಪತ್ತೆಯಾಗಿದ್ದು, 7 ಮತ್ತು 8 ನೇ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.  

ಬೆಳ್ತಂಗಡಿ: ಅನಾಮಿಕ ದೂರುದಾರ ಹೇಳಿರುವನೇತ್ರಾವತಿ ಸ್ನಾನಘಟ್ಟದ ಬಳಿ ನೂರಾರು ಶವಗಳನ್ನು ಹೂತು ಹಾಕಿರುವ ಪ್ರಕರಣ ಸಂಬಂಧ ತನಿಖೆಯ ಭಾಗವಾಗಿ, ವಿಶೇಷ ತನಿಖಾ ತಂಡ (SIT) ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ದಾಖಲೆಗಳನ್ನು ಪಡೆದುಕೊಂಡಿದೆ. ಆಗಸ್ಟ್ 1ರಂದು ಸಂಜೆ, ಎಸ್‌ಐಟಿ ಅಧಿಕಾರಿಗಳ ತಂಡ ಧರ್ಮಸ್ಥಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, 1995ರಿಂದ 2014ರವರೆಗೆ ಸತತ ವರ್ಷಗಳ ಯುಡಿಆರ್ (Unlawful Death Register) ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ದಾಖಲಾತಿಗಳನ್ನು ಎಸ್‌ಐಟಿ ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ನೇತೃತ್ವದ ತಂಡ ಪರಿಶೀಲಿಸುತ್ತಿದ್ದು, ಈ ಪ್ರಕರಣದ ಹಿನ್ನೆಲೆ, ಸಂಭಾವ್ಯ ಆರೋಪಿಗಳು ಹಾಗೂ ಹೂತು ಹಾಕಲಾಗಿರುವ ಶವಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ. ಈ ತನಿಖೆಯು ಗಂಭೀರ ತಿರುವು ಪಡೆದುಕೊಂಡಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಜುಲೈ 31ರಂದು 6 ಪಾಯಿಂಟ್‌ ವರೆಗೆ ಶೋಧ ನಡೆಸಿದ್ದ ಎಸ್‌ಐಟಿ ತಂಡಕ್ಕೆ, ಅನಾಮಿಕ ಗುರುತಿಸಿದ 6ನೇ ಸ್ಥಳದಲ್ಲಿ ಕಳೇಬರಹ ಸಿಕ್ಕಿತ್ತು. ಆ 1 ರಂದು ಪಾಯಿಂಟ್ ನಂಬರ್ 7 ಮತ್ತು 8 ರಲ್ಲಿ ಶೋಧ ಕಾರ್ಯ ನಡೆಸಿದ ತಂಡಕ್ಕೆ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಎಸ್‌ಐಟಿ ಕಾರ್ಯಚಟುವಟಿಕೆ ಮುಂದುವರಿದಿದ್ದು, ಸ್ಪಾಟ್ ನಂಬರ್ 9ರಿಂದ ನಾಳೆ ಉತ್ಖನನ ಕಾರ್ಯ ನಡೆಯಲಿದೆ. ಒಟ್ಟು 13 ಪಾಯಿಂಟ್‌ಗಳನ್ನು ಅನಾಮಿಕ ಗುರುತಿಸಿದ್ದು ಇನ್ನು ಬಾಕಿ ಉಳಿದಿರುವ ಐದು ಸ್ಥಳಗಳಲ್ಲಿ ಉತ್ಖನನ ಕಾರ್ಯ ಜುಲೈ2ರಿಂದ ನಡೆಯಲಿದೆ.

ಸ್ಪಾಟ್ ನಂಬರ್ 7 ಮತ್ತು ಸ್ಪಾಟ್ ನಂಬರ್ 8ರಲ್ಲಿ ಅಗೆಯಲು ಇಂದು ಸಣ್ಣ ಹಿಟಾಚಿ ಯಂತ್ರ ಆಗಮಿಸಿತ್ತು, ಹಸಿರು ಪರದೆ ಮೂಲಕ ಸ್ಥಳವನ್ನು ಇಡೀ ಸ್ಥಳವನ್ನು ಮುಚ್ಚಿದ ಎಸ್‌ಐಟಿ ಸದಸ್ಯರು ಮಾಧ್ಯಮಗಳು ಮತ್ತು ಸಾರ್ವಜನಿಕರ ಕಣ್ಣಿಂದ ಎಲ್ಲವನ್ನೂ ಕಾಣದಂತೆ ಅಡಗಿಸಿಟ್ಟರು. ಹಿಟಾಚಿ ಯಂತ್ರದ ಸಹಾಯದಿಂದ ಪೊದೆಗಳನ್ನು ಬೆಳದ ಕಾಡನ್ನು ತೆರವುಗೊಳಿಸಿದ ಬಳಿಕ ಮಣ್ಣು ತೆಗೆದು ಅಗೆಯುವ ಕಾರ್ಯ ಆರಂಭವಾಯ್ತು. ಮೊದಲಿಗೆ ಹಿಟಾಚಿ ಯಂತ್ರದ ಮೂಲಕ ಮಣ್ಣು ತೆಗೆದು, ನಂತರ ಕಾರ್ಮಿಕರನ್ನು ಬಳಸಿ ಉತ್ಖನನ ನಡೆ ಮಾಡಲಾಯ್ತು.

ಅಂತಿಮವಾಗಿ, ಪಾಯಿಂಟ್ ನಂಬರ್ 7 ಮತ್ತು 8ರಲ್ಲಿ ಯಾವುದೇ ಶವದ ಕುರುಕುಗಳು ಸಿಗಲಿಲ್ಲ ಎಂಬುದು ಸ್ಪಷ್ಟವಾಗಿದೆ. ಅಧಿಕಾರಿಗಳು ಒಟ್ಟು ಐದು ಅಡಿ ಆಳದವರೆಗೆ ಉತ್ಖನನ ಕಾರ್ಯ ನಡೆಸಿದ ನಂತರ, ತೆಗೆದ ಮಣ್ಣನ್ನು ಮತ್ತೆ ಅದೇ ಗುಂಡಿಗೆ ತುಂಬಿದ್ದಾರೆ. ಆಗಸ್ಟ್ 2ರಿಂದ 9ನೇ ಪಾಯಿಂಟ್‌ ನಿಂದ ಕಾರ್ಯಾಚರಣೆ ಆರಂಭವಾಗಲಿದ್ದು, ದೂರುದಾರ ಇದೇ ಪಾಯಿಂಟ್‌ನಿಂದ ಕಳೇಬರಹ ಸಿಕ್ಕೇ ಸಿಗುತ್ತದೆ ಎಂಬ ಭಾರೀ ವಿಶ್ವಾಸದಲ್ಲಿದ್ದಾನೆ.