7ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪ್ರಕಟವಾಗಿದೆ. ಶಾರುಖ್ ಖಾನ್ ಹಾಗೂ ವಿಕ್ರಾಂತ್ ಮೆಸ್ಸಿಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಒಲಿದು ಬಂದಿದ್ದರೆ, ಅತ್ಯುತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಪಾಲಾಗಿದೆ. ಯಾವ ಸಿನಿಮಾಗಳಿಗೆ ಸಿಕ್ಕಿದೆ ಪ್ರಶಸ್ತಿ ಇಲ್ಲಿದೆ ಲಿಸ್ಟ್.

ನವದೆಹಲಿ (ಆ.01) 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಜವಾನ್ ಸಿನಿಮಾದಲ್ಲಿ ಅಭಿನಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ 12th ಫೈಲ್ ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸಿ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ಸಿ ಪಡೆದುಕೊಂಡಿದ್ದಾರೆ. ಈ ಬಾರಿ ಇಬ್ಬರು ನಟರು ಅತ್ಯುತ್ತಮ ಪ್ರಶಸ್ತಿ ಹಂಚಿಕೊಂಡಿದ್ದಾರೆ. ಇನ್ನು Mrs ಚಟರ್ಜಿ ವರ್ಸ್ ನಾರ್ವೆ ಸಿನಿಮಾದಲ್ಲಿನ ಅಭಿನಯಕ್ಕೆ ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ವಿಶೇಷ ಅಂದರೆ ಕಂದೀಲು ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಗೆದ್ದುಕೊಂಡಿದೆ.

71ನೇ ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಲಿಸ್ಟ್

ಅತ್ಯುತ್ತಮ ಕನ್ನಡ ಸಿನಿಮಾ: ಕಂದೀಲು

ಅತ್ಯುತ್ತಮ ಹಿಂದಿ ಸಿನಿಮಾ: ಕಥಲ್

ಅತ್ಯುತ್ತಮ ತೆಲುಗು ಸಿನಿಮಾ: ಭಾಗ್ಯಶ್ರಿ ಕೇಸರಿ

ಉತ್ಯುತ್ತಮ ತಮಿಳು ಸಿನಿಮಾ: ಪಾರ್ಕಿಂಗ್

ಅತ್ಯುತ್ತಮ ಪಂಜಾಬಿ ಸಿನಿಮಾ:ಗುಡ್ಡೆ ಗುಡ್ಡೆ ಚಾ

ಅತ್ಯುತ್ತಮ ಮರಾಠಿ ಸಿನಿಮಾ: ಶ್ಯಾಮ್ಚಿ ಆಯಿಬೆಸ್ಟ್

ಅತ್ಯುತ್ತಮ ಮಲೆಯಾಳಂ ಸಿನಿಮಾ: ಉಲ್ಲೋಝೋಕುಬೆಸ್ಟ್

ಅತ್ಯುತ್ತಮ ಬಂಗಾಳಿ ಸಿನಿಮಾ: ಡೀಪ್ ಫ್ರಿಡ್ಜ್

ಉತ್ತಮ ಆ್ಯಕ್ಷನ್ ಡೈರೆಕ್ಷನ್ : ಹುನು ಮಾನ್ (ತೆಲುಗು)

ಉತ್ತಮ ಕೊರಿಯೋಗ್ರಾಫಿ: ರಾಕಿ ಔರ್ ರಾನಿ ಕಾ ಪ್ರೇಮ್ ಕಹಾನಿ

ಉತ್ತಮ ಲಿರಿಕ್ಸ್ : ಬಲಗಾಮ್

ಉತ್ತಮ ಮ್ಯೂಸಿಕ್ ಡೈರೆಕ್ಷನ್ : ಜಿವಿ ಪ್ರಕಾಶ್ ವಾಥಿ (ತಮಿಳು), ಹರ್ಷವರ್ಧನ್ ರಾಮೇಶ್ವರ್ (ಆ್ಯನಿಮಲ್)

ಉತ್ತಮ ಮೇಕ್ ಅಪ್ ಕಾಸ್ಟೂಮ್ ಡಿಸೈನರ್ : ಶ್ರೀಕಾಂತ್ ದೇಸಾಯಿ ( ಸ್ಯಾಮ್ ಬಹದ್ದೂರ್)

ಉತ್ತಮ ಪ್ರೊಡಕ್ಷನ್ ಡಿಸೈನರ್: ಎವ್ರಿ ಒನ್ ಈಸ್ ಹಿರೋ (ಮಲೆಯಾಳಂ)

ಉತ್ತಮ ಸಿನಿಮಾಟೋಗ್ರಫಿ: ಪ್ರಶಾಂತ್ ಮೋಹಪಾತ್ರ ( ಕೇರಳ ಸ್ಟೋರಿ (ಹಿಂದಿ)

ಉತ್ತಮ ಹಿನ್ನಲೆ ಗಾಯಕ: ರೋಹಿತ್ ( ಬೇಬಿ )

ಉತ್ತಮ ಹಿನ್ನಲೆ ಗಾಯಕಿ: ಶಿಲ್ಪಾ ರಾವ್ ( ಜವಾನ್)

ಉತ್ತಮ ಪೋಷಕ ಕಲಾವಿದ: ಪೂಕಳಂ

ಉತ್ತಮ ಡಾಕ್ಯುಮೆಂಟರಿ ಸಿನಿಮಾ: ಗಾಡ್ ವಲ್ಚರ್ ಆ್ಯಂಡ್ ಹ್ಯೂಮನ್

ಬೆಸ್ಟ್ ಆರ್ಟ್-ಕಲ್ಚರ್ ಸಿನಿಮಾ: ಟೈಮ್‌ಲೆಸ್ (ತಮಿಳು)

ಉತ್ತಮ ಪದಾರ್ಪಣಾ ಸಿನಿಮಾ: ದಿ ಸ್ಪಿರಿಟ್ ಡ್ರೀಮ್ಸ್ ಆಫ್ಸ್ ಚೆರ್ವಾ

ಬೆಸ್ಟ್ ನಾನ್ ಫಿಕ್ಷನ್ ಸಿನಿಮಾ : ಫ್ಲವರಿಂಗ್ ಮ್ಯಾನ್

ಬೆಸ್ಟ್ ಸೌಂಡ್ ಡಿಸೈನ್ : ಸಚಿನ್ ಸುಧಾಕರನ್, ಹರಿಹರನ್ (ಆ್ಯನಿಮಲ್)

ಬೆಸ್ಟ್ ಸ್ಕ್ರೀನ್‌ಪ್ಲೇ : ಸಾಯಿ ರಾಜೇಶ್ (ಬೇಬಿ ) ರಾಮ್‌ಕುಮಾರ್ ಬಾಲಕೃಷ್ಣ (ಪಾರ್ಕಿಂಗ್)

ಬೆಸ್ಟ್ ಡೈಲಾಗ್ : ದೀಪಕ್ ಕಿಂಗ್ರಾಣಿ (ಸಿರ್ಫ್ ಎಕ್ ಬಂಧಾ ಕಾಫಿ ಹೇ)