
ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
ರೇಣುಕಾಸ್ವಾಮಿ ಮರ್ಡರ್ ಕೇಸ್ನಿಧಾನ ಗತಿಯಲ್ಲಿ ಸಾಗ್ತಾ ಇದ್ದು, ತಾನು ಹೊರಗೆ ಬರೋದು ಯಾವಾಗ ಅಂತ ದರ್ಶನ್‌ಗೆ ಚಿಂತೆ ಕಾಡ್ತಾ ಇದೆ. ಅಷ್ಟೇ ಅಲ್ಲ ಕುಲಕರ್ಣಿ ರೀತಿ ಕಠಿಣ ಶಿಕ್ಷೆಯಾದ್ರೆ ಏನ್ ಗತಿ ಅನ್ನೋ ಭಯವೂ ಕಾಡ್ತಾ ಇದೆ.
ಇತ್ತೀಚಿಗೆ ಶಾಸಕ ವಿನಯ್ ಕುಲಕರ್ಣಿಗೆ ಕೊಲೆ ಕೇಸ್ನಲ್ಲಿ ಜೀವಾವಧಿ ಶಿಕ್ಷೆಯಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಕಳಿಸಲಾಗಿದೆ. ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್ ನಲ್ಲಿ ಕುಲಕರ್ಣಿ ಅಂಡ್ ಗ್ಯಾಂಗ್ನ ಇರಿಸಲಾಗಿದ್ದು, ಇದರ ಪಕ್ಕದಲ್ಲೇ ದರ್ಶನ್ ಸೆಲ್ ಕೂಡ ಇದೆ. ಅಚ್ಚರಿ ಅಂದ್ರೆ ವಿನಯ್ ಕುಲಕರ್ಣಿ ಪಾಲಿಗೆ ದರ್ಶನ್ ಅತ್ಯಾಪ್ತ ಆಗಿದ್ದವರು. ಒಬ್ಬರು ಅಪರಾಧಿ ಆದ್ರೆ ಇನ್ನೊಬ್ರು ಆರೋಪಿಯಾಗಿ ಜೈಲ್ನಲ್ಲಿ ಮುಖಾಮುಖಿ ಆಗಿದ್ದಾರೆ.
ಕ್ವಾರಂಟೈನ್ ಸೆಲ್ನಲ್ಲಿ ಕುಲಕರ್ಣಿ.. ಪಕ್ಕದಲ್ಲಿ ದರ್ಶನ್; ಜೈಲಿನಲ್ಲಿ ಮುಖಾಮುಖಿ ಆದ ದರ್ಶನ್ & ಕುಲಕರ್ಣಿ..!
ಇತ್ತೀಚಿಗೆ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ ಘೋಷಣೆ ಆಗಿತ್ತು. ಕುಲಕರ್ಣಿ ಮತ್ತು ಇತರ 16 ಜನ ಅಪರಾಧಿಗಳನ್ನ ಪರಪ್ಪನ ಅಗ್ರಗಾರಕ್ಕೆ ತರಲಾಗಿದೆ. ದರ್ಶನ್ ಇರುವ ಸೆಲ್ ಪಕ್ಕದ ಕ್ವಾರಂಟೈನ್ ಸೆಲ್ನಲ್ಲಿ ಅವರನ್ನ ಇರಿಸಲಾಗಿದೆ.
ದರ್ಶನ್ ಮತ್ತು ಕುಲಕರ್ಣಿ ಆಪ್ತರಾಗಿದ್ದವರು. ದರ್ಶನ್ ರೀತಿಯೇ ವಿನಯ್ ಕುಲಕರ್ಣಿ ಕೂಡ ಫಾರ್ಮ್ ಹೌಸ್ ಮಾಡಿ, ಹಲವು ಪ್ರಾಣಿಗಳನ್ನ ಸಾಕಿಕೊಂಡಿದ್ರು. ಕುಲಕರ್ಣಿ ಫಾರ್ಮ್ಗೆ ಹಿಂದೊಮ್ಮೆ ದರ್ಶನ್ ವಿಸಿಟ್ ಮಾಡಿದ್ರು. ಆಗ ಖುದ್ದು ಕುಲಕರ್ಣಿ ನಾನು ದರ್ಶನ್ ಸ್ಹೇಹಿತರು ಅಂತ ಹೇಳಿಕೊಂಡಿದ್ರು.
ಈಗ ನೋಡಿದ್ರೆ ಈ ಸ್ನೇಹಿತರು ಜೈಲಿನಲ್ಲಿ ಮುಖಾಮುಖಿ ಆಗೋ ಸ್ಥಿತಿ ಬಂದುಬಿಟ್ಟಿದೆ. ಒಬ್ರು ಅಪರಾಧಿಯಾದ್ರೆ, ಇನ್ನೊಬ್ರು ಆರೋಪಿ. ದೋಸ್ತಿಗಳು ಜೈಲಿನಲ್ಲಿ ಅಕ್ಕ ಪಕ್ಕದ ಸೆಲ್ನಲ್ಲಿ ಕಳೆಯುವ ಸ್ಥಿತಿ ಬಂದಿದೆ.
ಕುಲಕರ್ಣಿಗೆ ಶಿಕ್ಷೆ.. ದರ್ಶನ್‌ಗೆ ಹೆಚ್ಚಾಯ್ತು ಢವ ಢವ..!
ಹೌದು ವಿನಯ್ ಕುಲಕರ್ಣಿ, ಆಡಳಿತ ಪಕ್ಷದಲ್ಲಿ ಶಾಸಕರಾಗಿದ್ದು ಕೂಡ ಕಾನೂನಿನ ಎದುರು ತಪ್ಪಿಸಿಕೊಳ್ಳೋದಕ್ಕೆ ಆಗಲಿಲ್ಲ. ಯೊಗೇಶ್ ಗೌಡ ಕೊಲೆ ಆರೋಪದಲ್ಲಿ ವಿನಯ್ ಌಂಡ್ ಗ್ಯಾಂಗ್ಗೆ ಜೀವಾವಧಿ ಶಿಕ್ಷೆಯನ್ನ ಜನಪ್ರತಿನಿಧಿಗಳ ನ್ಯಾಯಾಲಯ ಘೋಷಣೆ ಮಾಡಿದೆ.
ಕುಲಕರ್ಣಿಯಂತೆ ದರ್ಶನ್ ಮೇಲೂ ಕೊಲೆ ಆರೋಪ ಇದೆ. ಸೇಮ್ ಯೋಗೇಶ್ ಗೌಡ ಕೇಸ್ನಲ್ಲಿ ಆದಂತೆ ರೇಣುಕಾಸ್ವಾಮಿ ಕೊಲೆ ಬಳಿಕ , ಬೇರೆಯವರನ್ನ ಠಾಣೆಗೆ ಸರೆಂಡರ್ ಮಾಡಿಸಲಾಗಿತ್ತು. ಆದ್ರೆ ಪೊಲೀಸರು ಅದರ ಹಿಂದಿನ ಸೂತ್ರಧಾರಿಗಳನ್ನ ಹಿಡಿದು ಜೈಲಿಗಟ್ಟಿದ್ರು.
ಜೈಲು ಸೇರಿ 5 ತಿಂಗಳಲ್ಲಿ ದರ್ಶನ್‌ಗೆ ಹೈಕೋರ್ಟ್ ಬೇಲ್ ಕೊಟ್ಟಿತ್ತು. ಆದ್ರೆ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅಪೀಲ್ ಮಾಡಿ, ಬೇಲ್ನ ರದ್ದು ಮಾಡಿಸ್ತು. ಇದೀಗ 7 ತಿಂಗಳಿಂದ ದರ್ಶನ್ ಪರಪ್ಪನ ಅಗ್ರಹಾರ ವಾಸಿ ಆಗಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಿಧಾನ ಗತಿಯಲ್ಲಿ ಸಾಗ್ತಾ ಇದ್ದು, ತಾನು ಹೊರಗೆ ಬರೋದು ಯಾವಾಗ ಅಂತ ದರ್ಶನ್‌ಗೆ ಚಿಂತೆ ಕಾಡ್ತಾ ಇದೆ. ಅಷ್ಟೇ ಅಲ್ಲ ಕುಲಕರ್ಣಿ ರೀತಿ ಕಠಿಣ ಶಿಕ್ಷೆಯಾದ್ರೆ ಏನ್ ಗತಿ ಅನ್ನೋ ಭಯವೂ ಕಾಡ್ತಾ ಇದೆ. ಒಟ್ನಲ್ಲಿ ಪಕ್ಕದ ಸೆಲ್ನಲ್ಲಿರೋ ಪಕ್ಕಾ ಸ್ನೇಹಿತನಿಂದ ದರ್ಶನ್ ಆತಂಕ ಹೆಚ್ಚಾಗಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...