ಪ್ರಧಾನಿ ಮೀದಿ ಏಳು ದಿನಗಳ ಅಮೆರಿಕ ಪ್ರವಾಸ ಅಂತ್ಯ| ಅಮೆರಿಕ ಪ್ರವಾಸ ಐತಿಹಾಸಿಕ ಎಂದ ಪ್ರಧಾನಿ ಮೋದಿ| ಯಶಸ್ವಿ ಅಮೆರಿಕ ಪ್ರವಾಸಕ್ಕೆ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ಭಾರತ| ಕಾಶ್ಮೀರ ವಿಚಾರವಾಗಿ ವಿಶ್ವ ಸಮುದಾಯದ ಬೆಂಬಲ ಗಿಟ್ಟಿಸುವಲ್ಲಿ ಮೋದಿ ಯಶಸ್ವಿ| ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಅದ್ಭುತ ಭಾಷಣ| ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಗೊಳಿಸಿದ ಪ್ರಧಾನಿ| ಪಾಕಿಸ್ತಾನಕ್ಕೆ ಜಾಗತಿಕ ವೇದಿಕೆಯಲ್ಲಿ ಮತ್ತೆ ಮುಖಭಂಗ| ಚೀನಾ ವಿಶ್ವಸಂಸ್ಥೆ ಭಾಷಣಕ್ಕೆ ಎದಿರೇಟು ನೀಡಿದ ಭಾರತ| ಅಮೆರಿಕ ಪ್ರವಾಸದಲ್ಲಿ ಮೋದಿ-ಟ್ರಂಪ್ ಗೆಳೆತನ ಅನಾವರಣ| ಹೌಡಿ ಮೋದಿ ಕಾರ್ಯಕ್ರಮಕ್ಕೆ ತಲೆಬಾಗಿದ ವಿಶ್ವ| ವಿಶ್ವ ಸಂಸ್ಥೆಯಲ್ಲಿ ಇಮ್ರಾನ್ ಖಾನ್ ಭಾಷಣ ಯಾರೂ ಕೇಳಿಸಿಕೊಳ್ಳಲಿಲ್ಲ| ಕಾಶ್ಮೀರ ವಿಚಾರ ಭಾರತದ ಆಂತರಿಕ ವಿಚಾರ ಎಂದ ವಿಶ್ವಸಂಸ್ಥೆ| ವಿಶ್ವಕ್ಕೆ ನವಭಾರತದ ಪರಿಚಯ ಮಾಡಿಕೊಟ್ಟು ಸ್ವದೇಶಕ್ಕೆ ಬಂದಿಳಿದ ಪ್ರಧಾನಿ ಮೋದಿ|

ನವದೆಹಲಿ(ಸೆ.29): ಪ್ರಧಾನಿ ಮೋದಿ ತಮ್ಮ ಏಳು ದಿನಗಳ ಯಶಸ್ವಿ ಅಮೆರಿಕ ಪ್ರವಾಸವನ್ನು ಮುಗಿಸಿ ಸ್ವದೇಶಕ್ಕೆ ಮರಳಿದ್ದಾರೆ. ಈ ಬಾರಿಯ ಅಮೆರಿಕ ಪ್ರವಾಸವನ್ನು ಸ್ವತಃ ಪ್ರಧಾನಿಯೇ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.

ವಿಶ್ವದ ಮುಂದೆ ನವ ಭಾರತದ ಯೋಚನಾ ಲಹರಿ, ನವ ಭಾರತದ ಶಕ್ತಿಯ ಪ್ರದರ್ಶನ ಮೋದಿ ಸರ್ಕಾರದ ವಿದೇಶಿ ನೀತಿಯ ಪ್ರಮುಖ ಅಂಗ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

2014-19ರ ತಮ್ಮ ಮೊದಲ ಅವಧಿಯಲ್ಲಿ ಸಾಕಷ್ಟು ವಿದೇಶ ಪ್ರವಾಸ ಮಾಡಿರುವ ಪ್ರಧಾನಿ ಮೋದಿ, ವಿಶ್ವ ಸಮುದಾಯದ ಮುಂದೆ ಅತ್ಯಂತ ಯಶಸ್ವಿಯಾಗಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಬದಲಾದ ಭಾರತದ ಚಹರೆಯನ್ನು ವಿಶ್ವ ವೇದಿಕೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಮೋದಿ ಪ್ರಸ್ತುತಪಡಿಸಿದ್ದಾರೆ.

ಭಾರತದ ತಾಕತ್ತಿನ ಪ್ರದರ್ಶನ ಮೋದಿ ಅವರ ಕಾರ್ಯವೈಖರಿಯ ಪ್ರಧಾನ ಅಂಗ. ಅದರಂತೆ ಭಾರತದಲ್ಲಿ ಏನೆಲ್ಲಾ ಅವಕಾಶಗಳಿವೆ ಎಂಬುದನ್ನು ವಿಶ್ವಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಪ್ರಧಾನಿ ಸದಾ ಮುಂದು.

ಅದರಂತೆ 2019ರ ತಮ್ಮ ಎರಡನೇ ಅವಧಿಯಲ್ಲೂ ಪ್ರಧಾನಿ ಮೋದಿ ತಮ್ಮ ವಿದೇಶಿ ದಂಡಯಾತ್ರೆಗಳನ್ನು ಮುಂದುವರೆಸಿದ್ದಾರೆ. ಈ ಬಾರಿ ಅತ್ಯಂತ ಕ್ಷಿಷ್ಟಕರ ಪರಿಸ್ಥಿತಿಯಲ್ಲಿ ಮೋದಿ ಅಮೆರಿಕ ಪ್ರವಾಸವನ್ನು ಕೈಗೊಂಡಿದ್ದಾರೆ.

ಪ್ರಧಾನಿ ಮೋದಿಗೆ ಭವ್ಯ ಸ್ವಾಗತ:

ತಮ್ಮ ಏಳು ದಿನಗಳ ಅಮೆರಿಕ ಪ್ರವಾಸ ಪ್ರಾರಂಭಿಸಿದ ಪ್ರಧಾನಿ ಮೋದಿ, ಸೆ.22ರಂದು ಅಮೆರಿಕಕ್ಕೆ ಬಂದಿಳಿದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಅಮೆರಿಕ ಭವ್ಯ ಸ್ವಾಗತ ನೀಡಿತು. ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಅಮೆರಿಕದ ಹಿರಿಯ ಅಧಿಕಾರಿಗಳು ಬಂದು ಸಾಲಾಗಿ ನಿಂತಿದ್ದರು.

ಅದರೆ ಅದೇ ದಿನ ಅಮೆರಿಕಕ್ಕೆ ಬಂದಿಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸ್ವಾಗತಿಸಲು ಪಾಕ್ ರಾಯಭಾರಿ ಕಚೇರಿಯ ಅಧಿಕಾರಿಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಈ ಪ್ರಹಸನದಿಂದ ವಿಶ್ವ ಸಮುದಾಯದ ದೃಷ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಯಿತು. 

ಹೌಡಿ ಮೋದಿಯ ಮೋಡಿ:

ಇನ್ನು ಸೆ.23ರಂದು ಹೂಸ್ಟನ್’ನಲ್ಲಿ ಪ್ರಧಾನಿ ಮೋದಿ ಭಾರತೀಯ ಸಂಜಾತರನ್ನು ಉದ್ದೇಶಿಸಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರೊಂದಿಗೆ ವೇದಿಕೆಯೇರಿ ಭಾರತ-ಅಮರಿಕ ನಡುವಿನ ಗಾಢ ಸಂಬಂಧವನ್ನು ಇಡೀ ವಿಶ್ವಕ್ಕೆ ಮನದಟ್ಟು ಮಾಡಿಕೊಟ್ಟರು.

ಅಮೆರಿಕಕ್ಕೆ ಭಾರತದ ಗೆಳತನದ ಅವಶ್ಯಕತೆ ಮತ್ತು ಅನಿವಾರ್ಯತೆ ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಅನಾವರಣಗೊಂಡಿತು. ಈ ಮೊದಲು ಅಫ್ಘಾನಿಸ್ತಾನದ ಯುದ್ಧದಿಂದಾಗಿ ಹಾಗೂ ಚೀನಾ ಕಡೆ ವಾಲುವ ಭಯದಿಂದಾಗಿ ಪಾಕಿಸ್ತಾನವನ್ನು ಮುದ್ದು ಮಾಡುತ್ತಿದ್ದ ಅಮೆರಿಕ, ಇನ್ನು ಈ ಮುದ್ದು ಸಧ್ಯವಿಲ್ಲ ಎಂಬ ಖಡಕ್ ಸಂದೇಶ ಕುಡ ಗುಪ್ತವಾಗಿಯೇ ರವಾನೆಯಾಯಿತು.

ಟ್ರಂಪ್-ಮೋದಿ ಗೆಳೆತನದ ಅನಾವರಣ:

ಈ ಬಾರಿಯ ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ವಿಶೇಷತೆ ಎಂದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಪ್ರಧಾನಿ ಮೋದಿ ಅವರ ನಡುವಿನ ಗಾಢ ಸ್ನೇಹದ ಅನಾವರಣ. ಮೋದಿ ಅವರ ಪ್ರತಿಯೊಂದು ನಿರ್ಧಾರವನ್ನೂ ಒಪ್ಪಿಕೊಳ್ಳುವ ಟ್ರಂಪ್ ನಡೆಯನ್ನು ಇಡೀ ವಿಶ್ವ ನೋಡಿತು. ಅದರಲ್ಲೂ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವುದಾಗಿ ಹೇಳುತ್ತಿದ್ದ ಟ್ರಂಪ್, ಏಕಾಏಕಿಯಾಗಿ ಭಾರತದ ಒಪ್ಪಿಗೆ ಇಲ್ಲದೇ ತಾವು ಹೆಜ್ಜೆ ಮುಂದಿಡುವುದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೈ ಹಿಡಿದು ವೇದಿಕೆಯೇರಿದ ಟ್ರಂಪ್, ನಮಗೆ ಭಾರತದ ಮೇಲೆ ನಂಬಿಕೆ ಜಾಸ್ತಿ ಎಂಬ ಸಂದೇಶ ರವಾನಿಸಿದರು.

ಮುಗಿದ ವ್ಯಾಪಾರದ ಮುನಿಸು:

ವ್ಯಾಪಾರ ಸಂಬಂಧದಲ್ಲಿ ಈ ಹಿಂದೆ ಪರಸ್ಪರ ಮುನಿಸಿಕೊಂಡಿದ್ದ ಭಾರತ-ಅಮೆರಿಕ, ಇದೀಗ ಮತ್ತೆ ಹೊಸ ಹುಮ್ಮಸ್ಸಿನಿಂದ ವ್ಯಾಪಾರ ನಡೆಸುವ ನಿರ್ಧಾರಕ್ಕೆ ಬಂದಿದೆ. ಪರಸ್ಪರ ವಿಧಿಸಿದ್ದ ಅಧಿಕ ಸುಂಕ ಹಿಂಪಡೆಯುವಲ್ಲಿ ಎರಡೂ ದೇಶಗಳು ಸಕರಾತ್ಮಕವಾಗಿ ಸ್ಪಂದಿಸಿವೆ. ಅಲ್ಲದೇ ಜಾಗತಿಕ ಸಿಇಒ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದಲ್ಲಿ ಹೂಡಿಕೆಗೆ ಮುಕ್ತ ಆಹ್ವಾನ ನೀಡಿದರು.

ಕಾಶ್ಮೀರ ನಮ್ಮ ಬಂಗಾರ:
ಎರಡನೇ ಬಾರಿ ಅಧಿಕಾರಕ್ಕೆ ಬಂದ ಕೇವಲ 100 ದಿನಗಳೊಳಗಾಗಿ ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಿತು. ವಿಶೇಷ ಸ್ಥಾನಮಾನ ಖಾತ್ರಿಪಡಿಸುವ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆಯಿತು.ಮೋದಿ ಸರ್ಕಾರದ ಈ ನಿರ್ಧಾರ ಇಡಿ ವಿಶ್ವದ ಗಮನ ಸೆಳೆದರೆ, ಕಾಶ್ಮೀರ ವಿವಾದವನ್ನೇ ಬಂಡವಾಳ ಮಾಡಿಕೊಂಡಿರುವ ಪಾಕಿಸ್ತಾನ ಅಕ್ಷರಶಃ ಉಡುಗಿ ಹೋಯಿತು.

ಭಾರತದ ನಿರ್ಧಾರ ಏಕಪಕ್ಷೀಯ ಹಾಗೂ ಅಮಾನವೀಯ ಎಂದುಪಾಕಿಸ್ತಾನಬೊಬ್ಬೆ ಹೊಪಡೆಯಲು ಪ್ರಾರಂಭಿಸಿತು. ಕಾಶ್ಮೀರ ಕಣಿವೆಯಲ್ಲಿ ಭಾರತ ಸರ್ಕಾರ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೋದಲ್ಲಿ ಬಂದಲ್ಲಿ ಅಳಲಾರಂಭಿಸಿದರು.

ಆದರೆ ಇದ್ಯವುದಕ್ಕೂ ಸೊಪ್ಪು ಹಾಕದ ಪ್ರಧಾನಿ ಮೋದಿ, ವಿಶ್ವ ಸಮುದಾಯದ ಮುಂದೆ ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಚಾರ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು. ಅಲ್ಲದೇ ಅಮೆರಿಕ ಪ್ರವಾಸಕ್ಕೂ ಮೊದಲೇ ರಷ್ಯಾ ಸೇರಿದಂತೆ ವಿಶ್ವದ ಹಲವು ಪ್ರಬಲ ರಾಷ್ಟ್ರಗಳು ಕಾಶ್ಮೀರ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತಿದ್ದು, ಮೋದಿ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು. 

ಕಾಶ್ಮೀರ ವಿಷಯ ಪ್ರಸ್ತಾವನೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅತ್ಯಂತ ಪ್ರಶಸ್ತ ಸ್ಥಳ ಎಂದರಿತ ಪಕಿಸ್ತಾನ, ಈ ಬಾರಿ ವಿಶ್ವ ಸಮುದಾಯದ ಗಮನ ಸೆಳೆಯಲು ಶತಾಯಗತಾಯ ಪ್ರಯತ್ನ ಮಾಡಿ ವಿಫಲವಾಯಿತು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅಮೆರಿಕ ವಿದೇಶ ಪ್ರವಾಸ ಕೈಗೊಂಡ ಪ್ರಧಾನಿ ಮೋದಿ. ವಿವಿಧ ಕರ್ಯಕ್ರಮಗಳ ಜೊತೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಅತ್ಯಂತ ಯಶಸ್ವಿಯಾಗಿ ಭಾರತವನ್ನು ಪ್ರತಿನಿಧಿಸಿದರು.

ಇದಕ್ಕೂ ಮೊದಲು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ತಟಸ್ಥವಾಗಿತರುವಂತೆ ನೋಡಿಕೊಂಡ ಪ್ರಧಾನಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಹೆಚ್ಚಿನ ಸ್ನೇಹ ಸಂಪಾದಿಸುವಲ್ಲಿ ಯಶಸ್ವಿಯೂ ಆದರು. 

ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಕ್ಕೆ ಟ್ರಂಪ್ ಅವರಲ್ಲಿ ಈ ಹಿಂದೆ ಮನವಿ ಮಾಡಿದ್ದ ಪಾಕ್ ಪ್ರಧಾನಿ, ಟ್ರಂಪ್ ಬದಲಾದ ನಿಲುವು ಕಂಡು ಅಕ್ಚರಶಃ ಉಡುಗಿ ಹೋದರು.

ಪಾಕಿಸ್ತಾನಕ್ಕೆ ಮುಖಭಂಗ:

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಗಿಟ್ಟಿಸುವ ಭ್ರಮೆಯಲ್ಲಿ ಸೌದಿ ದೊರೆಯ ವಿಶೇಷ ವಿಮಾನದಲ್ಲಿ ಬಂದಿಳಿದಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ವಿಮಾನ ನಿಲ್ದಾಣದಲ್ಲೇ ನಿರಾಶೆಯಾಗಿತ್ತು. ತಮ್ಮನ್ನು ಸ್ವಾಗತಿಸಲು ಅಮೆರಿಕದ ಒಬ್ಬ ಪ್ರತಿನಿಧಿಯೂ ಇಲ್ಲದಿರುವುದನ್ನು ಕಂಡು ತಮ್ಮ ಪ್ರವಾಸದ ಫಲಿತಾಂಶವನ್ನು ಇಮ್ರಾನ್ ಅರಿತರು.

ಅದರೂ ಬಂದಿದ್ದಕ್ಕಾದರೂ ಮಾತನಾಡುವೆ ಎಂದು ಟ್ರಂಪ್ ಮುಂದೆ ಕಾಶ್ಮೀರ ವಿಚಾರ ಪಸ್ತಾಪಿಸಿ ಸುಮ್ನಿರಿ ಎಂದು ಬೈಯಿಸಿಕೊಂಡರು. ಮೋದಿ ಒಪ್ಪಿಗೆ ಇಲ್ಲದೇ ಕಾಶ್ಮೀರ ವಿಚಾರ ಮಾತನಾಡಲಾರೆ ಎಂದು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಇಮ್ರಾನ್ ಖಾನ್ ಎದುರಲ್ಲೇ ಟ್ರಂಪ್ ಘೋಷಿಸಿದರು. 

ಸರಿ ವಿಶ್ವಸಂಸ್ಥೆಯಲ್ಲಾದರೂ ಕಾಶ್ಮೀರ ವಿಚಾರ ಪ್ರಸ್ತಾಪಿಸೋಣ ಎಂದರೆ ಇಮ್ರಾನ್ ಬರುವುದಕ್ಕೂ ಮೊದಲೇ ಕಾಶ್ಮೀರ ಭಾರತದ ಆತಂರಿಕ ವಿಚಾರ ಎಂದು ವಿಶ್ವಸಂಸ್ಥೆ ಮುಖ್ಯಸ್ತ ಅಂಟೊನಿಯೋ ಗುಟಾರೆಸ್ ಕೈ ತೊಳೆದುಕೊಂಡಿದ್ದರು.

ಆದರೂ ತಮ್ಮ ಭಾಷಣದಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ವಿರುದ್ಧ ವಿಷ ಕಾರಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಯಾರೂ ಕೇಳಿಸಿಕೊಳ್ಳದಿದ್ದರೂ ಕಾಶ್ಮೀರ ರಕ್ಷಿಸಲು ಬನ್ನಿ ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದರು.

ಕೊನೆಗೆ ಸೋತು ಸುಣ್ಣವಾಗಿ ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವಲ್ಲಿ ನಾವು ವಿಫಲವಾಗಿದ್ದೇವೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿಯೇ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಚೀನಾ ಮಾತಿಗೂ ಸಪ್ಪು ಹಾಕದ ವಿಶ್ವ ಸಮುದಾಯ:

ಇನ್ನು ಕಾಶ್ಮೀರ ವಿಚಾರವಾಗಿ ಪಾಕ್ ಪರ ಬ್ಯಾಟ್ ಬೀಸಲು ಬಂದ ಚೀನಾಗೂ ವಿಶ್ವಸಂಸ್ಥೆಯಲ್ಲಿ ಮುಖಭಂಗವಾಗಿದೆ. ಕಾಶ್ಮೀರ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದ ಚೀನಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ ಯೋಜನೆ ಯಾವಾಗ ನಿಲ್ಲಿಸುತ್ತೀರಿ ಎಂಬ ಭಾರತದ ಎದಿರೇಟನ್ನು ಸಹಿಸಿಕೊಳ್ಳಬೇಕಾಯಿತು.

ವಿಶ್ವಕ್ಕೆ ಭಾರತವನ್ನು ಪರಿಚಯಿಸಿ ತಾಯ್ನಾಡಿಗೆ ಬಂದ ಮೋದಿ:

ಹೀಗೆ ಸತತ ಏಳು ದಿನಗಳ ಕಾಲ ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಸಮುದಾಯದ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೇ ಅಮೆರಿಕವೂ ಸೇರಿದಂತೆ ಇತರ ದೇಶಗಳೊಂದಿಗೆ ವ್ಯಾಪಾರ ಸಂಬಂಧ ವೃದ್ಧಿಸಿ, ಭಾರತಕ್ಕೆ ಲಾಭಕರವಾದ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಸುಭದ್ರ ಭವಿಷ್ಯಕ್ಕೆ ಮುನ್ನಡಿ ಬರೆದಿದ್ದಾರೆ.