ನ್ಯೂಯಾರ್ಕ್(ಸೆ.28): ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ತಮ್ಮ ಇಡೀ ಭಾಷಣದಲ್ಲಿ ಭಾರತದ ವಿರುದ್ಧ ಕಿಡಿಕಾರಿದ್ದಾರೆ.

ಈ ಮಧ್ಯೆ ತಮ್ಮ ಭಾಷಣದಲ್ಲಿ ಭಾರತದ ಪ್ರಧಾನಿ ಮೋದಿ ಅವರನ್ನು ಭಾರತದ ಅಧ್ಯಕ್ಷ ಎಂದು ಕರೆಯುವ ಮೂಲಕ ನಗೆಪಾಟಲಿಗೆ ಈಡಾಗಿದ್ದಾರೆ.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಇಮ್ರಾನ್ ಖಾನ್, ಶಾಂತಿಗಾಗಿ ನಾವು ಭಾರತದತ್ತ ಕೈಚಾಚುತ್ತಿದ್ದರೆ ಅಧ್ಯಕ್ಷ ಮೋದಿ ಪಾಕ್ ವಿರುದ್ಧ ವಿಷ ಕಾರುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೇ ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ RSS ಕುರಿತು ಮಾತನಾಡುವಾಗ ವೀರ್ ಸಾವರ್ಕರ್ ಅವರನ್ನು ಸರ್ವಾರ್ಕರ್ ಎಂದು ಕರೆದ್ದಾರೆ.