ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್, ನೋಟಿಸ್ ರದ್ದು ಮಾಡಲಾಗಿದೆ. ಹೊಂಬಾಳೆ ವಿಚಾರ ತನಿಖೆ ನಡೆಸಿದ್ದ ಐಟಿ ಇಲಾಖೆ, ನಟ ಯಶ್ ಮನೆ ಸೇರಿದಂತೆ ಹೆಲೆವೆಡೆ ಶೋಧ ಕಾರ್ಯ ನಡೆಸಿತ್ತು. ಏನಿದು ಪ್ರಕರಣ?
ಬೆಂಗಳೂರು (ಡಿ.06) ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಮೀಪಿಸುತ್ತಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದೆ. ಕೆಜಿಎಫ್ ಬಳಿಕ ನಟ ಯಶ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟಾಕ್ಸಿಕ್ ಬಿಡುಗಡೆ ಸಮೀಪಿಸುತ್ತಿದ್ದಂತೆ ನಟ ಯಶ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಆದಾಯ ತೆರಿಗೆ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. 2013-14 ರಿಂದ 2018-19 ಅವಧಿಗೆ ಆದಾಯ ತೆರಿಗೆ ಇಲಾಖೆ ನಟ ಯಶ್‌ಗೆ ನೀಡಿದ್ದ ನೋಟಿಸ್ ರದ್ದು ಮಾಡಲಾಗಿದೆ. ನ್ಯಾ.ಎಸ್ ಆರ್ ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.
ಯಶ್‌ಗೆ ನೋಟಿಸ್ ನೀಡಿದ್ದ ಆದಾಯ ತೆರಿಗೆ ಇಲಾಖೆ
ಹೊಂಬಾಳೆ ಕನ್ಸ್‌ಟ್ರಕ್ಷನ್ ಸಂಬಂಧ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಿತ್ತು. ಈ ವೇಳೆ ಹೊಂಬಾಳೆ ಸಂಬಂಧಿಸಿದ ಹಲವು ಕಚೇರಿಗಳು, ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಪರಿಶೀಲನೆ ನಡೆಸಿತ್ತು. ಹೊಂಬಾಳೆ ಜೊತೆ ನಟ ಯಶ್ ಕೆಜಿಎಫ್ ಸಿನಿಮಾ ಮಾಡಿದ್ದರು. ಇದು 1000 ಕೋಟಿ ರೂಪಾಯಿಗೆ ಕಲೆಕ್ಷನ್ ಮಾಡಿತ್ತು. ಈ ಸಂಪರ್ಕದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆ ನಟ ಯಶ್ ಮನೆ ಸೇರಿದಂತೆ ಹಲವೆಡೆ ಶೋಧ ಕಾರ್ಯ ನಡೆಸಿತ್ತು. ಆದರೆ ಶೋಧನೆ ನಡೆಸಿದ ಬಳಿಕವೂ ಆದಾಯ ತೆರಿಗೆ ಇಲಾಖೆ 153ಸಿ ಅಡಿಯಲ್ಲಿ ನಟ ಯಶ್‌ಗೆ ನೋಟಿಸ್ ನೀಡಿತ್ತು.
ಏನಿದು ಪ್ರಕರಣ?
ಹೊಂಬಾಳೆ ಕನ್ಸ್‌ಟ್ರಕ್ಷನ್ ತನಿಖೆ ವೇಳೆ ಐಟಿ ಇಲಾಖೆ ಅಧಿಕಾರಿಗಳು ನಟ ಯಶ್ ವಾಸಿಸಿದ್ದ ಹೊಸಕೆರೆಹಳ್ಳಿ ಮನೆ, ತಾಜ್ ವೆಸ್ಟ್ ಎಂಡ್ ನ ರೂಮ್ ಶೋಧಿಸಿತ್ತು. ಶೋಧನೆ ವೇಳೆ ದಾಖಲೆ ಸಂಗ್ರಹಿಸಿ ಮಹಜರ್ ಮಾಡಲಾಗಿದೆ. ಎಲ್ಲಾ ಕಡೆ ಶೋಧ ನಡೆಸಿ ಪರಿಶೀಲನೆ ವೇಳೆ ಪತ್ತೆಯಾದ ವಸ್ತುಗಳು ಸೇರಿದಂತೆ ಇತರ ಮಾಹಿತಿಗಳನ್ನು ಐಟಿ ಇಲಾಖೆ ಮಹರ್ ಮಾಡಿತ್ತು. ಹೊಂಬಾಳೆ ಕನ್ಸ್ ಟ್ರಕ್ಷನ್ ನ ವಿಜಯ್ ಕುಮಾರ್ ವಿರುದ್ಧ ಶೋದನೆ ವಾರೆಂಟ್ ಪಡೆದ ಐಟಿ ಅಧಿಕಾರಿಗಳು, ಹೊಂಬಾಳೆಗೆ ಸಂಬಂಧಪಟ್ಟಂತೆ ಮಾತ್ರ ಯಶ್ ನಿವಾಸದಲ್ಲಿ ಶೋಧನೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಆದಾಯ ತೆರಿಗೆ ಇಲಾಖೆ 2021 ರಲ್ಲಿ 6 ವರ್ಷಗಳಿಗೆ ಸಂಬಂಧಿಸಿದಂತೆ ನಟ ಯಶ್‌ಗೆ ತೆರಿಗೆ ನೋಟಿಸ್ ಜಾರಿಗೊಳಿಸಿತ್ತು. ಐಟಿ ಇಲಾಖೆ 153ಸಿ ಅಡಿಯಲ್ಲಿ ನೀಡುವ ನೋಟಿಸ್ ಪ್ರಕರಣ ಸಂಬಂಧ ಶೋಧನೆ ನಡೆಸದ ವ್ಯಕ್ತಿಗೆ ನೀಡುವ ನೋಟಿಸ್ ಆಗಿದೆ. ಆದರೆ ನಟ ಯಶ್ ಸೇರಿದ ಮನೆ ಸೇರಿದಂತೆ ಹಲವೆಡೆ ಐಟಿ ಇಲಾಖೆ ಶೋಧನೆ ನಡೆಸಿತ್ತು. ಹೀಗಾಗಿ ಈ ನೋಟಿಸ್ ಪ್ರಶ್ನಿಸಿ ನಟ ಯಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ನೋಟಿಸ್ ಪ್ರಶ್ನಿಸಿ 2021 ರಲ್ಲಿ ನಟ ಯಶ್ ಹೈಕೋರ್ಟ್ ಗೆ ಅರ್ಜಿ
ಶೋಧನೆ ನಡೆಸದ ವ್ಯಕ್ತಿಗೆ ಸಂಬಂಧಿಸಿದ 153ಸಿ ನೋಟಿಸ್‌ನ್ನು ಯಶ್‌ಗೆ ನೀಡಲಾಗಿದೆ. ತಮ್ಮ ನಿವಾಸ ಶೋಧಿಸಿದ್ದರೂ 153 ಸಿ ಅಡಿ ನೋಟಿಸ್ ಕಾನೂನು ಬಾಹಿರ ವೆಂದು ಯಶ್ ಪರ ವಕೀಲರ ವಾದ ಮಂಡಿಸಿದ್ದರು. ಶೋಧನೆ ವೇಳೆ ದಾಖಲೆ ಸಂಗ್ರಹಿಸಿ ಮಹಜರ್ ಮಾಡಲಾಗಿದೆ.
ನೋಟಿಸ್ ರದ್ದುಗೊಳಿಸಿದ ಹೈಕೋರ್ಟ್
ನಟ ಯಶ್ ಹಾಗೂ ಐಟಿ ಇಲಾಖೆ ವಾದ ಆಲಿಸಿದ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಶೋಧ ಕಾರ್ಯ ನಡೆಸಿ ಮಹಜರ್ ಮಾಡಲಾಗಿದೆ. ಬಳಿಕ 153ಸಿ ಅಡಿಯಲ್ಲಿ ಶೋಧನೆಗೆ ಒಳಗಾಗದ ವ್ಯಕ್ತಿ ಎಂದು ನೋಟಿಸ್ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತ್ತು. ಬಳಿಕ ಯಶ್‌ಗೆ ಐಟಿ ಇಲಾಖೆ ನೀಡಿದ್ದ ನೋಟಿಸ್ ರದ್ದುಪಡಿಸಿದೆ.


