‘ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರದಲ್ಲಿ ಅಮೆರಿಕದೊಂದಿಗೆ ಕೈಜೋಡಿಸಿದ್ದು ತಪ್ಪು’| 9/11 ಪೆಂಟಗನ್ ದಾಳಿಯ ಬಳಿಕ ಅಮೆರಿಕದೊಂದಿಗೆ ಹೋರಾಡಿದ್ದು ತಪ್ಪು ಎಂದ ಪಾಕ್ ಪ್ರಧಾನಿ| ಪಾಕ್ ತನ್ನ ಸಾಮರ್ಥ್ಯದ ಅರಿವಿಲ್ಲದೇ ಯುದ್ಧಕ್ಕೆ ಧುಮಿಕಿತು ಎಂದ ಇಮ್ರಾನ್ ಖಾನ್| 

ವಾಷಿಂಗ್ಟನ್(ಸೆ.24): 9/11 ಪೆಂಟಗನ್ ದಾಳಿಯ ಬಳಿಕ ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರದಲ್ಲಿ ಅಮೆರಿಕದೊಂದಿಗೆ ಕೈಜೋಡಿಸಿದ್ದು ಪಾಕಿಸ್ತಾನದ ಐತಿಹಾಸಿಕ ತಪ್ಪು ಎಂದು ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೆರಿಕ ಪ್ರವಾಸದಲ್ಲಿರುವ ಇಮ್ರಾನ್ ಖಾನ್, ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರದಲ್ಲಿ ಆ ದೇಶದೊಂದಿಗೆ ಕೈ ಜೋಡಿಸಿದ್ದು ತಪ್ಪು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಜಾಗತಿಕ ಸಮರಕ್ಕೆ ಅಮೆರಿಕ ಕೊಟ್ಟಾಗ, ಅದರಲ್ಲಿ ಭಾಗಿಯಾಗುವ ಸಾಮರ್ಥ್ಯವಿದೆಯೇ ಇಲ್ಲವೇ ಎಂಬುದನ್ನೂ ಯೋಚಿಸದೇ ಈ ಹಿಂದಿನ ಪಾಕ್ ನಾಯಕರು ಐತಿಹಾಸಿಕ ಪ್ರಮಾದವೆಸಗಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ವಿರುದ್ಧ ಅಮೆರಿಕ ಹೂಡಿದ ಯುದ್ಧದ ವೇಳೆ ಪಾಕ್ ಬಹಳಷ್ಟು ಕಳೆದುಕೊಂಡಿತು ಎಂದಿರುವ ಇಮ್ರಾನ್, ಈ ಹಿಂದಿನ ಸರ್ಕಾರಗಳಿಗೆ ತಮ್ಮ ಸಾಮರ್ಥ್ಯದ ಅರಿವಿರದ ಪರಿಣಾಮ ನಾವು ಇಂದು ಹಲವು ಸಮಸ್ಯೆ ಎದುರಿಸಬೇಕಾಗಿದೆ ಎಂದು ಗುಡುಗಿದ್ದಾರೆ.