ಟ್ರಂಪ್’ಗೆ ಹೌಡಿ ಮೋದಿ ಫೋಟೋ ಉಡುಗೊರೆ ನೀಡಿದ ಪ್ರಧಾನಿ ಮೋದಿ| ಮೋದಿ-ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ಸಂದರ್ಭ| ಉಭಯ ನಾಯಕರು ಕೈ ಹಿಡಿದು ವೇದಿಕೆಯೇರಿದ ಫೋಟೋ ಉಡುಗೊರೆ| ಮೋದಿ ನೀಡಿದ ಉಡುಗರೆಗೆ ಧನ್ಯವಾದ ಅರ್ಪಿಸಿದ ಅಮೆರಿಕ ಅಧ್ಯಕ್ಷ|

ನ್ಯೂಯಾರ್ಕ್(ಸೆ.25):ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಇತ್ತೀಚಿಗೆ ಹೂಸ್ಟನ್’ನಲ್ಲಿ ನಡೆದಿದ್ದ ಹೌಡಿ ಮೋದಿ ಕಾರ್ಯಕ್ರಮದ ಸಂದರ್ಭದಲ್ಲಿ ಕ್ಲಿಕ್ಕಿಸಿದ್ದ ಉಭಯ ನಾಯಕರ ಫೋಟೋವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು.

Scroll to load tweet…

ಹೌಡಿ ಮೋದಿ ಕಾರ್ಯಕ್ರಮದಲ್ಲಿ ಜಂಟಿಯಾಗಿ ವೇದಿಕೆ ಮೇಲೆರಿದ್ದ ಟ್ರಂಪ್ ಹಾಗೂ ಮೋದಿ, ಪರಸ್ಪರ ಕೈ ಹಿಡಿದು ತಮ್ಮ ಗಾಢ ಸ್ನೇಹವನ್ನು ತೋರಿದ್ದರು.

ಈ ವೇಳೆ ಕ್ಲಿಕ್ಕಿಸಿದ್ದ ಫೋಟೋವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದು, ಈ ಫೋಟೋ ತಮ್ಮ ಜೀವನದ ಉತ್ತಮಕ ನೆನಪುಗಳಲ್ಲಿ ಒಂದು ಎಂದು ಟ್ರಂಪ್ ಸಂತಸ ವ್ಯಕ್ತಪಡಿಸಿದ್ದಾರೆ.