ನವದೆಹಲಿ(ಸೆ.25): ಪ್ರಧಾನಿ ನರೇಂದ್ರ ಮೋದಿ ‘ಫಾದರ್ ಆಫ್ ಇಂಡಿಯಾ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸ್ವಾಗತಿಸಿದ್ದಾರೆ.

ಆದರೆ ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಎಂದು ಒಪ್ಪದವರು ಭಾರತೀಯರೇ ಅಲ್ಲ ಎನ್ನುವ ಮೂಲಕ ಜಿತೇಂದ್ರ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಮೋದಿ ನವ ಭಾರತದ ಪಿತಾಮಹಾ ಎಂದು ಕರೆದಿರುವ ಜಿತೇಂದ್ರ, ಅವರನ್ನು ಒಪ್ಪದವರು ಭಾರತೀಯರಲ್ಲ ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಇದೇ ಮೊದಲ ಬಾರಿಗೆ ವಿದೇಶಿ ನಾಯಕರೊಬ್ಬರು  ಭಾರತದ ಪ್ರಧಾನಿ ಕುರಿತು ಇಂತಹ ಹೇಳಿಕೆ ನೀಡಿದ್ದು, ಇದನ್ನು ಒಪ್ಪದವರು ಭಾರತೀಯರಾಗದಿರಲು ಹೇಗೆ ಸಾಧ್ಯ ಎಂದು ಜಿತೇಂದ್ರ ಪ್ರಶ್ನಿಸಿದ್ದಾರೆ.