ಭಾರತದ ಒಪ್ಪಿಗೆ ಇಲ್ಲದೇ ಮಧ್ಯಸ್ಥಿಕೆ ಇಲ್ಲ: ಇಮ್ರಾನ್ ಮುಸಿಡಿಗಿಷ್ಟು ಎಂದ ಟ್ರಂಪ್!
ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ಪ್ರಸ್ತಾವನೆ| ಮೋದಿ ಒಪ್ಪದಿದ್ದರೆ ನಾನು ಮಾತೋಡಲ್ಲ ಎಂದ ಡೋನಾಲ್ಡ್ ಟ್ರಂಪ್| ತುಂಬಿದ ಸುದ್ದಿಗೋಷ್ಠಿಯಲ್ಲಿ ಪಾಕ್ ಪ್ರಧಾನಿಗೆ ಅವಮಾನ ಮಾಡಿದ ಅಮೆರಿಕ ಅಧ್ಯಕ್ಷ| ಟ್ರಂಪ್ ಉತ್ತರ ಕೇಳಿ ಕಕ್ಕಾಬಿಕ್ಕಿಯಾಧ ಇಮ್ರಾನ್ ಖಾನ್| ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಗೆ ಆಗ್ರಹಿಸಿದ್ದ ಇಮ್ರಾನ್ ಖಾನ್|
ನ್ಯೂಯಾರ್ಕ್(ಸೆ.24): ಕಾಶ್ಮೀರ ವಿಚಾರವಾಗಿ ಭಾರತ-ಪಾಕಿಸ್ತಾನ ಮಧ್ಯೆ ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇದೀಗ ತಮ್ಮ ಮಾತಿನ ವರಸೆ ಬದಲಿಸಿದ್ದಾರೆ.
ಭಾರತದ ಒಪ್ಪಿಗೆ ಇಲ್ಲದೇ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆಗೆ ತಾವು ಸಿದ್ಧರಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಪಸ್ಥಿತಿಯಲ್ಲೇ ಟ್ರಂಪ್ ಘೋಷಿಸಿದ್ದಾರೆ.
ಕಿಕ್ಕಿರಿದು ತುಂಬಿದ್ದ ಅಮೆರಿಕ-ಪಾಕಿಸ್ತಾನ ಜಂಟಿ ಸುದ್ದಿಗೋಷ್ಠಿಯಲ್ಲಿ, ಭಾರತದ ಒಪ್ಪಿಗೆ ಇಲ್ಲದೇ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಟ್ರಂಪ್ ಘೋಷಿಸಿದರು.
ಇದರಿಂದ ಇಮ್ರಾನ್ ಖಾನ್ ಅವರಿಗೆ ಜಾಗತಿಕ ಮಟ್ಟದಲ್ಲಿ ಮತ್ತೆ ಮುಖಭಂಗವಾಗಿದ್ದು, ಟ್ರಂಪ್ ಹೇಳಿಕೆಯಿಂದ ಕಕ್ಕಾಬಿಕ್ಕಿಯಾಗಿಯಾದರು. ಈ ಹಿಂದೆ ಇಮ್ರಾನ್ ಖಾನ್ ಕಾಶ್ಮೀರ ವಿಷಯವಾಗಿ ಮಧ್ಯಸ್ಥಿಕೆ ವಹಿಸುವಂತೆ ಟ್ರಂಪ್ ಅವರನ್ನು ಕೇಳಿಕೊಂಡಿದ್ದರು
ಆದರೆ ಭಾರತದ ಒಪ್ಪಿಗೆ ಇಲ್ಲದೇ ತಾವು ಈ ವಿಷಯದಲ್ಲಿ ಮುಂದಡಿ ಇಡುವುದಿಲ್ಲ ಎಂದು ಡೋನಾಲ್ಡ್ ಟ್ರಂಪ್ ಪತ್ರಿಕಾಗೋಷ್ಠಿಯಲ್ಲೇ ಸ್ಪಷ್ಟಪಡಿಸಿದ್ದರಿಂದ ಇಮ್ರಾನ್ ಖಾನ್ ಭಾರೀ ಮುಖಭಂಗಕ್ಕೀಡಾದರು.
ಆದರೆ ಜಮ್ಮು ಮತ್ತು ಕಾಶ್ಮೀರ ಭಾರತ-ಪಾಕಿಸ್ತಾನ ನಡುವಿನ ವಿಷಯವಾಗಿದ್ದು, ಇದರಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.