ನವದೆಹಲಿ(ಸೆ.28): ಸತತ 7 ದಿನಗಳ ಅಮೆರಿಕ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ನವದೆಹಲಿ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಸುಮಾರು 50 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಅಮೆರಿಕ ಪ್ರವಾಸವನ್ನು ಅತ್ಯಂತ ಯಶಸ್ವಿ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಹೌಡಿ ಮೋದಿ ಕಾರ್ಯಕ್ರಮ ಆಯೋಜನೆಗಾಗಿ ಅಮೆರಿಕದಲ್ಲಿರುವ ಭಾರತೀಯ ಸಂಜಾತರಿಗೆ ಧನ್ಯವಾದ ಸಲ್ಲಿಸಿದರು.

ವಿಶ್ವ ಸಮುದಾಯ ಭಾರತದ ಕುರಿತು ತನ್ನ ಅಭಿಪ್ರಾಯ ಬದಲಿಸಿದ್ದು, ಭಾರತದ ಧ್ವನಿಗೆ ಇದೀಗ ಹೆಚ್ಚಿನ ಮಹತ್ವ ಬಂದಿದೆ ಎಂದು ಮೋದಿ ಈ ವೇಳೆ ಹೇಳಿದರು.

ವಿಶ್ವದ ಮುಂದೆ ಭಾರತದ ಎದೆಯುಬ್ಬಿಸಿ ನಿಲ್ಲಲು, ಎರಡನೇ ಬಾರಿ ಸದೃಢ ಸರ್ಕಾರ ರಚಿಸಿದ 130 ಕೋಟಿ ಭಾರತೀಯರು ಕಾರಣ ಎಂದು ಪ್ರಧಾನಿ ಧನ್ಯವಾದ ಸಲ್ಲಿಸಿದರು. 

ಇದಕ್ಕೂ ಮೊದಲು ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ, ಸುಮಾರು ಅರ್ಧ ಕಿ.ಮೀ. ರೋಡ್ ಶೋ ನಡೆಸಿದರು.