Asianet Suvarna News Asianet Suvarna News

ಕಾಶ್ಮೀರ ಮನವರಿಕೆಯಲ್ಲಿ ನಾವು ವಿಫಲ: ಇಮ್ರಾನ್ ಆತ್ಮಸಾಕ್ಷಿಗೆ ಸೆಲ್ಯೂಟ್!

ವಿಶ್ವ ವೇದಿಕೆಯಲ್ಲಿ ಭಾರತದ ಗೆಲುವು ಒಪ್ಪಿದ ಇಮ್ರಾನ್ ಖಾನ್| ಕಾಶ್ಮೀರ ಮನವರಿಕೆಯಲ್ಲಿ ನಾವು ವಿಫಲರಾಗಿದ್ದೇವೆ ಎಂದ ಪಾಕ್ ಪ್ರಧಾನಿ| ‘ಕಾಶ್ಮೀರ ವಿಚಾರವಾಗಿ ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲ’| ಪಾಕ್ ನಿಲವು  ಅರಿಯಲು ವಿಶ್ವ ಸಮುದಾಯಕ್ಕೆ ಮನಸ್ಸಿಲ್ಲ ಎಂದ ಖಾನ್| ಮೋದಿ ಕಟ್ಟಿ ಹಾಕಲು ವಿಶ್ವ ಸಮುದಾಯ ವಿಫಲ ಎಂದು ಹರಿಹಾಯ್ದ ಇಮ್ರಾನ್|

Pakistan PM Imran Khan Admits Pak Has Failed Over Kashmir
Author
Bengaluru, First Published Sep 25, 2019, 3:08 PM IST

ವಾಷಿಂಗ್ಟನ್(ಸೆ.25): ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಶ್ಮೀರ ವಿಚಾರವಾಗಿ ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿರುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಘೋಷಿಸಿದ್ದಾರೆ.

ಈ ಕುರಿತು ಖುದ್ದು ಮಾತನಾಡಿರುವ  ಇಮ್ರಾನ್ ಖಾನ್, ಕಾಶ್ಮೀರ ವಿಚಾರವಾಗಿ ನಮ್ಮ ನಿಲುವನ್ನು ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತದ ಪ್ರಧಾನಿ ಅಮೆರಿಕಕ್ಕೆ ಬಂದು ವಿಶ್ವಸಂಸ್ಥೆಯಲ್ಲಿ ತಮ್ಮ ದೇಶವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದು, ಅದಕ್ಕೆ ತದ್ವಿರುದ್ಧವಾಗಿ ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ಅಮಾನವೀಯ ಕೃತ್ಯಗಳ ಕುರಿತು ಮನ ವರಿಕೆ ಮಾಡಿಕೊಡುವಲ್ಲಿ ನಾವು ಎಡವಿದೆವು ಎಂದು ಇಮ್ರಾನ್ ಖೇದ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಕಟ್ಟಿ ಹಾಕಲು ವಿಶ್ವ ಸಮುದಾಯ ನಿರಾಸಕ್ತಿ ತೋರಿದ್ದು, ಈ ಬೆಳವಣಿಗೆಯಿಂದ ತಾವು ನೊಂದಿರುವುದಾಗಿ ಇಮ್ರಾನ್ ನುಡಿದಿದ್ದಾರೆ.

Follow Us:
Download App:
  • android
  • ios