ನೀವೆಲ್ಲಾ ಭಾರತಕ್ಕೆ ಬಂದ್ರೆ 4D ತೋರಿಸ್ತಿನಿ: ಪ್ರಧಾನಿ ಮೋದಿ!
ಭಾರತಕ್ಕೆ ಬಂದರೆ 4D ತೋರಿಸುವ ಭರವಸೆ ನೀಡಿದ ಪ್ರಧಾನಿ| ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂ ಉದ್ದೇಶಿಸಿ ಮೋದಿ ಭಾಷಣ| 4F ಕುರಿತು ಜಾಗತಿಕ ಹೂಡಿಕೆದಾರರಿಗೆ ವಿವರಣೆ ನೀಡಿದ ಪ್ರಧಾನಿ ಮೋದಿ| ಭಾರತ ಹೂಡಿಕೆದಾರರ ಸ್ವರ್ಗವಾಗಿ ಮಾರ್ಪಡುತ್ತಿದೆ ಎಂದ ಪ್ರಧಾನಿ|
ನ್ಯೂಯಾರ್ಕ್(ಸೆ.25): ಭಾರತ ಹೂಡಿಕೆದಾರರ ಸ್ವರ್ಗವಾಗಿ ಮಾರ್ಪಡುತ್ತಿದ್ದು, ನಮ್ಮ ಸರ್ಕಾರ 4D ಗಳ ಸೂತ್ರದ ಮೇಲೆ ಹೂಡಿಕೆದಾರರನ್ನು ಆಕರ್ಷಿಸಲು ಸಜ್ಜಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬ್ಲೂಮ್‌ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಹೂಡಿಕೆದಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಡೆಮೋಕ್ರಸಿ(ಪ್ರಜಾಪ್ರಭುತ್ವ), ಡೆಮೋಗ್ರಫಿ(ಜನಸಂಖ್ಯೆ), ಡಿಮ್ಯಾಂಡ್(ಬೇಡಿಕೆ) ಹಾಗೂ ಡಿಸೀಸಿವನೆಸ್ (ನಿರ್ಣಾಯಕತ್ವ)ದ ಆಗರ ಎಂದು ಹೇಳಿದರು.
ಭಾರತದ ಆಧುನಿಕ ಮೂಲಸೌಕರ್ಯಗಳಿಗಾಗಿ ಸುಮಾರು 1.3 ಟ್ರಿಲಿಯನ್ ಡಾಲರ್ ಖರ್ಚು ಮಾಡಲು ಸರ್ಕಾರ ಸಿದ್ಧವಿದ್ದು, ದೇಶದ ಸಾಮಾಜಿಕ ಮೂಲಸೌಕರ್ಯಕ್ಕಾಗಿ ಲಕ್ಷ ಕೋಟಿ ರೂ. ವ್ಯಯಿಸಲಿದ್ದೇವೆ ಎಂದು ಮೋದಿ ಮಾಹಿತಿ ನೀಡಿದರು.
ಭಾರತದಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನಿ ಹೂಡಿಕೆದಾರರಿಗೆ ಕರೆ ನೀಡಿದರು.