Asianet Suvarna News Asianet Suvarna News

ಭಾರತದೊಂದಿಗೆ ವ್ಯಾಪಾರ: ಟ್ರಂಪ್ ಏಕಾಏಕಿ ಹೊಸ ಅವತಾರ!

ಡೋನಾಲ್ಡ್ ಟ್ರಂಪ್-ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ| ಉತ್ತಮ ವ್ಯಾಪಾರ ಸಂಬಂಧಕ್ಕೆ ಮುನ್ನುಡಿ ಬರೆದ ನಾಯಕರು| ಸುಂಕ ಏರಿಕೆ ಯುದ್ಧ ನಿಲ್ಲಿಸಲು ಉಭಯ ನಾಯಕರ ತಾತ್ವಿಕ ಒಪ್ಪಿಗೆ| ಶೀಘ್ರದಲ್ಲೇ ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದ ಎಂದ ಟ್ರಂಪ್| ಟ್ರಂಪ್ ಕುಟುಂಬವನ್ನು ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ|

Donald Trump Says Trade Deals Between India-US Soon
Author
Bengaluru, First Published Sep 25, 2019, 1:35 PM IST

ನ್ಯೂಯಾರ್ಕ್(ಸೆ.25): ಪರಸ್ಪರ ಸುಂಕ ಏರಿಕೆ ಯುದ್ಧದಲ್ಲಿ ನಿರತರಾಗಿದ್ದ ಅಮೆರಿಕ-ಭಾರತ, ಇದೀಗ ಉತ್ತಮ ವ್ಯಾಪಾರ ಸಂಬಂಧ ಹೊಂದುವತ್ತ ಹೆಜ್ಜೆ ಹಾಕಿವೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವಿನ ದ್ವಿಪಕ್ಷೀಯ ಮತುಕತೆ ವೇಳೆ,  ಉತ್ತಮ ವ್ಯಾಪಾರ ಸಂಬಂಧವನ್ನು ವೃದ್ಧಿಸುವ ಕುರಿತು ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಟ್ರಂಪ್, ಶೀಘ್ರದಲ್ಲೇ ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿರುವುದಾಗಿ ಘೋಷಿಸಿದರು. ಭಾರತ ಉತ್ತಮ ವ್ಯಾಪಾರ ಸ್ನೇಹಿ ರಾಷ್ಟ್ರವಾಗಿದ್ದು, ಮೋದಿ ಅವರೊಂದಿಗಿನ ಮಾತುಕತೆ ಫಲಪ್ರದ ಎಂದು ಟ್ರಂಪ್ ಈ ವೇಳೆ ಅಭಿಪ್ರಾಯಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಟ್ರಂಪ್ ಭಾರತದ ಪರಮಾಪ್ತ ಸ್ನೇಹಿತರಾಗಿದ್ದು, ಕುಟುಂಬ ಸಮೇತರಾಗಿ ಭಾರತಕ್ಕೆ ಮತ್ತೊಮ್ಮೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.
 

Follow Us:
Download App:
  • android
  • ios