ನೀವು ಟೊಮ್ಯಾಟೋ ಸೇವಿಸುತ್ತೀರಾ? 42 ಮಂದಿ ಟೊಮ್ಯಾಟೋ ತಿಂದರೆ ಆಗೋ ಬದಲಾವಣೆ ಕುರಿತು ಅಧ್ಯಯನ ಮಾಡಲು 90 ದಿನ ಸೇವಿಸಿದ್ದಾರೆ. ಪರಿಣಾಮ ನೋಡಿ ಅಚ್ಚರಿಯಾಗಿದೆ. ಇದೀಗ ಈ ವರದಿ ನೋಡಿದರೆ ನಿಮ್ಮ ಡಯೆಟ್ ಮೆನುವಿನಲ್ಲಿ ಟೊಮ್ಯಾಟೋ ಇದ್ದೇ ಇರುತ್ತೆ.
ಟೊಮ್ಯಾಟೋ ಹಣ್ಣು ಭಾರತದಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಬೆಲೆ ಗಗನಕ್ಕೇರಿ ಕೋಲಾಹಲ ಸೃಷ್ಟಿಸುತ್ತೆ. ಇದನ್ನು ಹೊರತುಪಡಿಸಿದರೆ ಟೊಮ್ಯಾಟೋ ಬೆಲೆ ಅಗ್ಗ. ಬಹುತೇಕರ ಮನೆಯಲ್ಲಿ, ಅಡುಗೆಯಲ್ಲಿ ಟೊಮ್ಯಾಟೋ ಇದ್ದೇ ಇರುತ್ತೆ. ಆದರೆ ಪ್ರತಿ ದಿನ ಟೊಮ್ಯಾಟೋ ಸೇವಿಸುತ್ತೀರಾ? ಹೀಗೆ ಸೇವಿಸಿದರೆ ಏನಾಗುತ್ತೆ? ಈ ಕುರಿತು ಸಂಶೋಧಕರ ತಂಡ ಅಧ್ಯಯನ ಆರಂಭಿಸಿದೆ. 90 ದಿನಗಳ ಕಾಲ 42 ಮಂದಿ ಪ್ರತಿ ದಿನ ಟೊಮ್ಯಾಟೋ ಸೇವಿಸಿದ್ದಾರೆ. ಫಲಿತಾಂಶ ನಿಜಕ್ಕೂ ಅಚ್ಚರಿ ನೀಡಿದೆ.
ಚುರುಕಾಗುತ್ತೆ ಮೆದುಳು
40 ರಿಂದ 50 ವರ್ಷದ ವ್ಯಕ್ತಿಗಳು 90 ದಿನಗಳ ಕಾಲ ಸತತವಾಗಿ ಟೊಮ್ಯಾಟೋ ತಿಂದಿದ್ದಾರೆ. ಟೊಮ್ಯಾಟೋ ತಿನ್ನುವುದರಿಂದ ಮೆದುಳಿನಲ್ಲಿ ಯಾವ ಪರಿಣಾಮ ಬೀರುತ್ತೆ, ಆಗೋ ಬದಲಾವಣೆ ಏನು ಅನ್ನೋದು ಪರೀಕ್ಷೆ ನಡೆಸಲು ಈ ಪ್ರಯತ್ನ ಮಾಡಲಾಗಿತ್ತು. ಈ ಪರೀಕ್ಷೆಗೆ 47 ಮಂದಿ ಆಯ್ಕೆ ಮಾಡಲಾಗಿತ್ತು. ಆದರೆ 90 ದಿನ ಸತತವಾಗಿ ಟೊಮ್ಯಾಟೋ ತಿಂದಿದ್ದು 42 ಮಂದಿ ಮಾತ್ರ.ಹೀಗಾಗಿ 42 ಮಂದಿಯ ಮೆದುಳು ಚುರುಕಾಗಿತ್ತು. ಗಮನ ಕೇಂದ್ರೀಕರಿಸಲು ಸಾಧ್ಯವಾಗಿತ್ತು. ಮೆದಳು ಕಾರ್ಯನಿರ್ವಹಿಸುವ ಸ್ಪೀಡ್ ಹೆಚ್ಚಾಗಿತ್ತು. ಇನ್ನು ಸಣ್ಣ ಪ್ರಮಾಣದಲ್ಲಿ ಜ್ಞಾಪಕ ಶಕ್ತಿ ಕೂಡ ಹೆಚ್ಚಾಗಿತ್ತು.
ಮೆದುಳು ಸಕ್ರೀಯ
ವರ್ಷಗಳ ಹಿಂದಿನ ಘಟನೆ, ಹೆಸರು ಸೇರಿದಂತೆ ಎಲ್ಲವನ್ನೂ ನೆನಪು ಮಾಡಿಕೊಳ್ಳುವ ಶಕ್ತಿಯೂ ಹೆಚ್ಚಾಗಿತ್ತು. ಟೊಮ್ಯಾಟೋ ಪೇಸ್ಟ್ ಮಾಡಿ ತಿಂದ 42 ಮಂದಿ ಯಾವುದೇ ವಿಷಯದಲ್ಲಿ ಏಕಾಗ್ರತೆ ಹೆಚ್ಚಾಗಿರುವುದನ್ನು ಗಮನಿಸಿದ್ದಾರೆ. ಟೊಮ್ಯಾಟೋದಲ್ಲಿರುವ ಲೈಕೋಪಿನ್ ಅಂಶ ದೇಹದಲ್ಲಿನ ರಕ್ತ ಹಾಗೂ ಮೆದುಳಿನ ಚಲನೆಯನ್ನು ಸಕ್ರೀಯಗೊಳಿಸುತ್ತದೆ. ಜೊತೆಗೆ ಊತ, ನೋವು, ಹಾನಿಕಾರಕ ಅಣುಗಳ ವಿರುದ್ಧ ಕಾರ್ಯನಿರ್ವಹಿಸುತ್ತದೆ. ಇದರಿಂದ ಮೆದುಳಿನ ಶಕ್ತಿ, ಕಾರ್ಯನಿರ್ವಹಣೆ, ನೆನಪಿನ ಶಕ್ತಿ ವೃದ್ಧಿಸುವಂತೆ ಮಾಡುತ್ತದೆ. ಟೊಮ್ಯಾಟೋ ಸೇವನೆ ಮೆದುಳಿನಲ್ಲಿ ಉತ್ತಮ ಪರಿಣಾಮ ಬೀರಬಲ್ಲದು ಅನ್ನೋದು ಅದ್ಯಯನದಿಂದ ಬಯಲಾಗಿದೆ.
ಕೇವಲ ಮೆದುಳು ಮಾತ್ರವಲ್ಲ, ಇತರ ಆರೋಗ್ಯದ ದೃಷ್ಟಿಯಿಂದಲೂ ಟೊಮ್ಯಾಟೋ ಸೇವನೆ ಉತ್ತಮ. ವಿಟಮಿನ್ ಸಿ, ವಿಟಮಿನ್ ಕೆ, ಪೊಟಾಶಿಯಂ ಸೇರಿದಂತೆ ಹಲವು ಪೌಷ್ಛಿಕಾಂಶಗಳಿವೆ. ಇದರಿಂದ ದೇಹದ ಆರೋಗ್ಯಕ್ಕೂ ಉತ್ತಮವಾಗಿದೆ. ರಕ್ತದೊತ್ತಡ ನಿಯಂತ್ರಿಸುತ್ತದೆ, ಹೃದಯದ ಆರೋಗ್ಯ ಕಾಪಾಡುತ್ತದೆ, ದೇಹದಲ್ಲಿ ಇಮ್ಯೂನಿಟಿ ಪವರ್ ಬೂಸ್ಟ್ ಮಾಡಲಿದೆ ಅನ್ನೋದು ಅಧ್ಯಯನದಿಂದ ಬಯಲಾಗಿದೆ. ಈ ಅಧ್ಯಯನ ವರದಿ ಪ್ರತಿಯೊಬ್ಬರ ಫುಡ್ ಮೆನುವಿನಲ್ಲಿ ಟೊಮ್ಯಾಟೋ ಇರುವಂತೆ ಮಾಡಲಿದೆ.

