ಕೆಂಪುಕೋಟೆ ಸ್ಫೋಟ ಪ್ರಕರಣದ ಆರೋಪಿ ಡಾಕ್ಟರ್ ಮುಸಾಫಿರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್‌ಗಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂಟರ್‌ಪೋಲ್‌ಗೆ ಮನವಿ ಮಾಡಿದ್ದಾರೆ. ಡಾ. ಮುಸಾಫರ್ ಈ ಹಿಂದೆ ಬಂಧಿತನಾಗಿದ್ದ ಆದಿಲ್‌ನ ಸಹೋದರ.
- Home
- News
- India News
- India News Live: ದೆಹಲಿ ಸ್ಫೋಟ ಪ್ರಕರಣ - ಉಗ್ರ ಮುಸಾಫಿರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್; ಇಂಟರ್‌ಪೋಲ್‌ಗೆ ಮನವಿ
India News Live: ದೆಹಲಿ ಸ್ಫೋಟ ಪ್ರಕರಣ - ಉಗ್ರ ಮುಸಾಫಿರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್; ಇಂಟರ್‌ಪೋಲ್‌ಗೆ ಮನವಿ

ನವದೆಹಲಿ: ಅಕ್ಟೋಬರ್ ತಿಂಗಳಿನಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರ ದಾಖಲೆಯ ಶೇ.0.25ಕ್ಕೆ ಕುಸಿತ ಕಂಡಿದೆ. ಇದು 2014ರ ಬಳಿಕದ ಅತಿ ಕನಿಷ್ಠ ಪ್ರಮಾಣವಾಗಿದೆ. ದೇಶಾದ್ಯಂತ ಹಣದುಬ್ಬರ ಭಾರೀ ಕುಸಿತ ಕಂಡಿದ್ದರೂ ಅಕ್ಟೋಬರ್ನಲ್ಲಿ ಕರ್ನಾಟಕದಲ್ಲಿ ಶೇ.2.34ರಷ್ಟು ಹಣದುಬ್ಬರ ದಾಖಲಾಗಿದ್ದು, ಇದು ದೇಶದಲ್ಲೇ 3ನೇ ಅತಿ ಗರಿಷ್ಠ ಪ್ರಮಾಣವಾಗಿದೆ. ಜಿಎಸ್ಟಿ ದರದಲ್ಲಿ ಭಾರೀ ಕಡಿತ, ತರಕಾರಿ, ಹಣ್ಣು ಮತ್ತಿತರ ವಸ್ತುಗಳ ದರ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರ ಶೇ.0.25ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿತ ಚಿಲ್ಲರೆ ಹಣದುಬ್ಬರವು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 1.44ರಷ್ಟು ಮತ್ತು ಅಕ್ಟೋಬರ್ ತಿಂಗಳಲ್ಲಿ 6.21ರಷ್ಟಿತ್ತು.
India News Liveದೆಹಲಿ ಸ್ಫೋಟ ಪ್ರಕರಣ - ಉಗ್ರ ಮುಸಾಫಿರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್; ಇಂಟರ್‌ಪೋಲ್‌ಗೆ ಮನವಿ
India News Liveದೆಹಲಿ ಕೆಂಪು ಕೋಟೆ ಬಳಿ ಸ್ಫೋಟ - ಭಯೋತ್ಪಾದಕರಿಗೆ ಅಮಿತ್ ಶಾ ಕೊಟ್ಟ ಎಚ್ಚರಿಕೆ ಏನು?
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಹೇಡಿತನದ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ನೀಡುವುದಾಗಿ ಮತ್ತು ಮುಂದೆ ಇಂತಹ ಕೃತ್ಯಕ್ಕೆ ಯಾರೂ ಧೈರ್ಯ ಮಾಡದಂತೆ ಪಾಠ ಕಲಿಸುವುದಾಗಿ ಖಡಕ್ ಎಚ್ಚರಿಕೆ
India News Liveಬಾಂಗ್ಲಾದೇಶದಲ್ಲಿ ಕುಳಿತು ಭಾರತದ ದಾಳಿಗೆ ಉಗ್ರ ಹಫೀಜ್ ಸಯೀದ್ ಸಂಚು! ಇಂಟೆಲ್ ಕೊಟ್ಟ ಎಚ್ಚರಿಕೆ ಏನು?
ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಸಂಘಟನೆಯು ಬಾಂಗ್ಲಾದೇಶವನ್ನು ಹೊಸ ನೆಲೆಯಾಗಿ ಬಳಸಿ ಭಾರತದ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ. ಪಾಕಿಸ್ತಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಎಲ್‌ಇಟಿ ಕಮಾಂಡರ್ ಈ ಸಂಚನ್ನು ಬಹಿರಂಗವಾಗಿದೆ.
India News Liveಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 15ಕ್ಕೂ ಹೆಚ್ಚು ವಾಹನದ ಮೇಲೆ ಹರಿದ ಟ್ರಕ್, ಐದು ಸಾವು
ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 15ಕ್ಕೂ ಹೆಚ್ಚು ವಾಹನದ ಮೇಲೆ ಹರಿದ ಟ್ರಕ್, ಐದು ಸಾವು ಹಲವರು ಗಂಭೀರ. ಎರಡು ಟ್ರಕ್ ನಡುವೆ ಕಾರು ಅಪ್ಪಚ್ಚಿಯಾಗಿದೆ. ಟ್ರಕ್‌ಗೆ ಬೆಂಕಿ ಹೊತ್ತಿಕೊಂಡು ಉರಿದು ಭಸ್ಮವಾಗಿದೆ.
India News LiveIPL 2026 - ಧೋನಿಯ 'ಫೇವರಿಟ್' ಆಲ್ರೌಂಡರ್ ತನ್ನ ಬುಟ್ಟಿಗೆ ಹಾಕಿಕೊಂಡ ಮುಂಬೈ ಇಂಡಿಯನ್ಸ್!
ಅಚ್ಚರಿಯ ರೀತಿಯಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮಹೇಂದ್ರ ಸಿಂಗ್ ಧೋನಿ ಅವರ ಫೇವರೇಟ್ ಆಲ್ರೌಂಡರ್ ಅವರನ್ನು ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯಿಂದ ಟ್ರೇಡ್ ಮಾಡಿಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India News Liveಮತ್ತೆ ಕಪ್ ಗೆಲ್ಲಲು ರೆಡಿಯಾದ ಆರ್‌ಸಿಬಿ! ಹರಾಜಿಗೂ ಮುನ್ನ ಬೆಂಗಳೂರು ತಂಡದಲ್ಲಿರುತ್ತಾರೆ ಈ ಆಟಗಾರರು!
ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಮ್ಮ ಟ್ರೋಫಿಯನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಅದಕ್ಕೆ ತಕ್ಕಂತೆ ಮಿನಿ ಹರಾಜಿಗೂ ಮುನ್ನ ಪಕ್ಕಾ ಪ್ಲಾನ್‌ನೊಂದಿಗೆ ತಯಾರಿ ನಡೆಸುತ್ತಿದೆ.
India News Liveಐಪಿಎಲ್ ಮಿನಿ ಹರಾಜು ಮುಗಿಯುತ್ತಿದ್ದಂತೆಯೇ ಈ ಮೂರು ತಂಡಕ್ಕೆ ಹೊಸ ನಾಯಕರ ನೇಮಕ! ಈ ಪಟ್ಟಿಯಲ್ಲಿದೆ 3 ಬಾರಿಯ ಚಾಂಪಿಯನ್
2026ರ ಐಪಿಎಲ್ ಟೂರ್ನಿಗೆ ಸಿದ್ಧತೆಗಳು ನಡೆಯುತ್ತಿದ್ದು, ಮೂರು ಪ್ರಮುಖ ತಂಡಗಳು ತಮ್ಮ ನಾಯಕರನ್ನು ಬದಲಾಯಿಸುವ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ ತೊರೆಯುವ ಸಾಧ್ಯತೆಯಿದ್ದು, ರವೀಂದ್ರ ಜಡೇಜಾ ನಾಯಕರಾಗಬಹುದು.
India News Liveರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಶಾಲಾ ಶಿಕ್ಷಕ ಸಂಶುಲ್ ಹಸನ್ ಸಸ್ಪೆಂಡ್ ಮಾಡಿದ ಯೋಗಿ ಸರ್ಕಾರ
ರಾಷ್ಟ್ರಗೀತೆ ನಿರಾಕರಿಸಿದ ಪ್ರಾಥಮಿಕ ಶಾಲಾ ಶಿಕ್ಷಕ ಸಂಶುಲ್ ಹಸನ್ ಸಸ್ಪೆಂಡ್ ಮಾಡಿದ ಯೋಗಿ ಸರ್ಕಾರ , ಬೆಳಗ್ಗಿನ ಪ್ರಾರ್ಥನೆ ವೇಳೆ ರಾಷ್ಟ್ರಗೀತಿ ಹಾಡಲು ಶಿಕ್ಷಕ ನಿರಾಕರಿಸಿದ್ದು ಮಾತ್ರವಲ್ಲ, ಅಗೌರವ ತೋರಿದ್ದಾರೆ. ತಕ್ಷಣವೇ ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ.
India News Liveಹಿಜಾಬ್ ಇಲ್ಲದೇ ವರ್ಕೌಟ್ - ಇರಾನಿನ ಅಥ್ಲೀಟ್ ನಿಗೂಢವಾಗಿ ಕಣ್ಮರೆ
ಇರಾನ್‌ನಲ್ಲಿ ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ವರ್ಕೌಟ್ ಪ್ರದರ್ಶನ ನೀಡಿದ ಟೆಕ್ವಾಂಡೋ ಅಥ್ಲೀಟ್ ಹನಿಹ್ ಶರಿಯಾತಿ ರೌಡ್‌ಪೋಷ್ಟಿ ಅವರನ್ನು ಭದ್ರತಾ ಪಡೆಗಳು ಬಂಧಿಸಿವೆ. ಬಂಧನದ ನಂತರ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಇದುವರೆಗೂ ಅವರ ಸುಳಿವಿಲ್ಲ.
India News LiveBihar Election 2025 - ಮತ ಎಣಿಕೆಗೂ ಮುನ್ನ ಇವಿಎಂ ಸ್ಟ್ರಾಂಗ್ ರೂಂ ಕೀ ಯಾರ ಬಳಿ ಇರುತ್ತೆ? ಭದ್ರತೆ ಹೇಗಿರುತ್ತೆ ಗೊತ್ತಾ?
India News Liveಐಪಿಎಲ್ 2026 ಮಿನಿ ಹರಾಜಿಗೂ ಮೊದಲೇ ಹೊಸ ಜಾಲ ಹೆಣೆದ ಕೆಕೆಆರ್; ಅಸೀಸ್ ದಿಗ್ಗಜ ಕ್ರಿಕೆಟಿಗನ ಹೆಗಲೇರಿದ ಮಹತ್ವದ ಜವಾಬ್ದಾರಿ!
2026ರ ಐಪಿಎಲ್ ಸೀಸನ್‌ಗೂ ಮುನ್ನ, ಕೋಲ್ಕತಾ ನೈಟ್ ರೈಡರ್ಸ್ ತಂಡವು ಆಸ್ಟ್ರೇಲಿಯಾದ ದಿಗ್ಗಜ ಆಲ್ರೌಂಡರ್ ಶೇನ್ ವಾಟ್ಸನ್ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ವಾಟ್ಸನ್, ಇದೀಗ ಅಭಿಷೇಕ್ ನಾಯರ್ ನೇತೃತ್ವದ ಕೆಕೆಆರ್ ಕೋಚಿಂಗ್ ಬಳಗವನ್ನು ಸೇರಿಕೊಂಡಿದ್ದಾರೆ.
India News Liveಮೂರು ವರ್ಷದ ವಿವಾಹ ನಿಶ್ಚಿತಾರ್ಥ ಮುರಿದು ತಾನೇ ಸೃಷ್ಟಿಸಿದ ಎಐ ವ್ಯಕ್ತಿ ಜೊತೆ ಮದುವೆಯಾದ ಯುವತಿ
Japanese woman's AI wedding : ಜಪಾನ್‌ನ ಯುವತಿಯೊಬ್ಬಳು ತನ್ನ ನಿಜವಾದ ನಿಶ್ಚಿತಾರ್ಥವನ್ನು ಮುರಿದುಕೊಂಡು, ತಾನೇ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಿದ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಈ ವಿಚಿತ್ರ ವಿವಾಹದ ವೀಡಿಯೋ ವೈರಲ್ ಆಗಿದ್ದು ತಂತ್ರಜ್ಞಾನದ ಪ್ರಭಾವದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
India News Liveಐದು ಮಕ್ಕಳನ್ನು ದತ್ತು ಪಡೆದ ರೋಹಿತ್ ಶರ್ಮಾ ಬಾಲ್ಯದ ಕೋಚ್! ಇವರ ಗುರಿ ಫಿಕ್ಸ್
ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ದಿನೇಶ್ ಲಾಡ್, ಕ್ರಿಕೆಟ್ ಆಚೆಗೆ ಹೊಸ ಮಿಷನ್‌ನಲ್ಲಿದ್ದಾರೆ. ಅವರೀಗ ಐದು ಮಕ್ಕಳನ್ನು ದತ್ತುಪಡೆದು ಭವಿಷ್ಯದ ಸ್ಟಾರ್ ಮಾಡುವ ಟಾರ್ಗೆಟ್ ಹಾಕಿಕೊಂಡಿದ್ದಾರೆ.
India News Liveರಾಜಸ್ಥಾನ ರಾಯಲ್ಸ್ ಸೇರುವ ಮುನ್ನವೇ ಫ್ರಾಂಚೈಸಿ ಬಳಿ ಹೊಸ ಡಿಮ್ಯಾಂಡ್ ಇಟ್ಟ ರವೀಂದ್ರ ಜಡೇಜಾ!
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಆಟಗಾರರ ರೀಟೈನ್ಷನ್‌ಗೆ ನವೆಂಬರ್ 15 ಕೊನೆಯ ದಿನವಾಗಿದೆ. ಇದರ ಬೆನ್ನಲ್ಲೇ ಟ್ರೇಡ್ ವಿಂಡೋ ಮೂಲಕ ಜಡೇಜಾರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಮುಂದಾಗಿರುವ ರಾಜಸ್ಥಾನ ರಾಯಲ್ಸ್‌ಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಜಡ್ಡು ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ.
India News LiveBomb Blast - ಡಿ. 6ರಂದು ಸರಣಿ ಸ್ಫೋಟದ ಪ್ಲ್ಯಾನ್! ಉಗ್ರರು ತರಾತುರಿ ಮಾಡಿದ್ಯಾಕೆ? ಸ್ಫೋಟಕ ಮಾಹಿತಿ ಬಯಲು
India News Liveಮನೆ ಖರೀದಿದಾರರಿಗೆ ವಂಚನೆ - 12,000 ಕೋಟಿ ಅಕ್ರಮ ಹಣ ವರ್ಗಾವಣೆ - ಬಿಲ್ಡರ್ ಜೈಪಿ ಇನ್ಪ್ರಾಟೆಕ್ ನಿರ್ದೇಶಕನ ಬಂಧನ
Manoj Gaur arrest Jaypee Infratech: 12,000 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಮತ್ತು ಮನೆ ಖರೀದಿದಾರರಿಗೆ ವಂಚಿಸಿದ ಪ್ರಕರಣದಲ್ಲಿ ಜೇಪೀ ಇನ್ಫ್ರಾಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಗೌರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
India News Liveಕಿವೀಸ್‌ನಿಂದ ಪಾಠ - ಹರಿಣಗಳ ಬೇಟೆಗೆ ಟೀಂ ಇಂಡಿಯಾ ಮಾಸ್ಟರ್ ಪ್ಲಾನ್!
ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಸ್ಪಿನ್ ಪಿಚ್ ತಂತ್ರ ವಿಫಲವಾದ ಹಿನ್ನೆಲೆಯಲ್ಲಿ, ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಸ್ಪರ್ಧಾತ್ಮಕ ಪಿಚ್‌ಗಳನ್ನು ಸಿದ್ಧಪಡಿಸಲು ಮುಂದಾಗಿದೆ. ದಕ್ಷಿಣ ಆಫ್ರಿಕಾದ ಬಲಿಷ್ಠ ಸ್ಪಿನ್ ದಾಳಿಯನ್ನು ಎದುರಿಸಲು ಭಾರತ ಹೊಸ ಯೋಜನೆ ರೂಪಿಸಿದೆ.
India News Liveಚಲಿಸುತ್ತಿದ್ದ ಪಿಕಪ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರೀಡರ್ - ಪಿಕಪ್ ನಜ್ಜುಗುಜ್ಜು, ಚಾಲಕ ಸಾವು
Kerala flyover girder collaps: ನಿರ್ಮಾಣ ಹಂತದ ಮೇಲ್ಸೇತುವೆಯೊಂದರ ಗ್ರಿಡರ್( ಸಿಮೆಂಟ್ ಕಂಬ) ಕೆಳಗೆ ರಸ್ತೆಯಲ್ಲಿ ಚಲಿಸುತ್ತಿದ್ದ ಪಿಕಪ್ ವಾಹನವೊಂದರ ಮೇಲೆ ಬಿದ್ದ ಪರಿಣಾಮ ಪಿಕಪ್ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಮೆಂಟ್ ಪಿಲ್ಲರ್ ಬಿದ್ದ ಏಟಿಗೆ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.
India News Liveಆರು ವರ್ಷಗಳ ಬಳಿಕ ಈಡನ್ ಗಾರ್ಡನ್ಸ್‌ನಲ್ಲಿ ಟೆಸ್ಟ್ ಕಲರವ; ಹರಿಣಗಳಿಗೆ ಟೀಂ ಇಂಡಿಯಾ ಚಾಲೆಂಜ್
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ಗಿಲ್ ನಾಯಕತ್ವದ ಭಾರತ ತಂಡವು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನದ ಗುರಿ ಹೊಂದಿದ್ದರೆ, ದಕ್ಷಿಣ ಆಫ್ರಿಕಾ ಭಾರತದ ನೆಲದಲ್ಲಿ ಮೊದಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.
India News Liveಡಾ ಉಮರೇ ದೆಹಲಿ ಬಾಂಬರ್ ಡಿಎನ್‌ಎ ಪರೀಕ್ಷೆಯಿಂದ ಸಾಬೀತು - ಅಯೋಧ್ಯೆಯೂ ಆಗಿತ್ತು ಟಾರ್ಗೆಟ್
ದೆಹಲಿ ಕಾರು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಡಾಕ್ಟರ್ ಉಮರ್ ನಬಿಯ ಗುರುತನ್ನು ಡಿಎನ್ಎ ಪರೀಕ್ಷೆ ಖಚಿತಪಡಿಸಿದೆ. ಈ ವೈಟ್ ಕಾಲರ್ ಭಯೋತ್ಪಾದಕ ಘಟಕವು ಅಯೋಧ್ಯೆ ಸೇರಿದಂತೆ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂಬುದು ತನಿಖೆಯಿಂದ ಸಾಬೀತಾಗಿದೆ.