ರಾಜಸ್ಥಾನ ರಾಯಲ್ಸ್ ಸೇರುವ ಮುನ್ನವೇ ಫ್ರಾಂಚೈಸಿ ಬಳಿ ಹೊಸ ಡಿಮ್ಯಾಂಡ್ ಇಟ್ಟ ರವೀಂದ್ರ ಜಡೇಜಾ!
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಆಟಗಾರರ ರೀಟೈನ್ಷನ್‌ಗೆ ನವೆಂಬರ್ 15 ಕೊನೆಯ ದಿನವಾಗಿದೆ. ಇದರ ಬೆನ್ನಲ್ಲೇ ಟ್ರೇಡ್ ವಿಂಡೋ ಮೂಲಕ ಜಡೇಜಾರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಮುಂದಾಗಿರುವ ರಾಜಸ್ಥಾನ ರಾಯಲ್ಸ್‌ಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಜಡ್ಡು ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ.

ಸಂಜು ಚೆನ್ನೈ ಪಾಲಾಗೋದು ಫಿಕ್ಸ್?
ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕರೆತರುವುದು ಫಿಕ್ಸ್ ಆಗಿದ್ದು, ಅವರ ಬದಲಿಗೆ ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರ್ರನ್ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಲು ಸಿಎಸ್‌ಕೆ ಫ್ರಾಂಚೈಸಿ ಮುಂದಾಗಿದೆ. ಇದರ ಅಧಿಕೃತ ಘೋಷಣೆ ಬಾಕಿ ಉಳಿದಿದೆ ಎಂದು ವರದಿಯಾಗಿದೆ.
ಜಡ್ಡು ರಾಜಸ್ಥಾನ ರಾಯಲ್ಸ್ ತೆಕ್ಕೆಗೆ?
ಇನ್ನು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಮೂಲಕವೇ ತನ್ನ ಅಭಿಯಾನ ಆರಂಭಿಸಿದ್ದ ರವೀಂದ್ರ ಜಡೇಜಾ, ಇದೀಗ ಮತ್ತೊಮ್ಮೆ ರಾಯಲ್ಸ್ ತೆಕ್ಕೆಗೆ ಜಾರುವುದು ಬಹುತೇಕ ಖಚಿತ ಎನಿಸಿಕೊಂಡಿದೆ.
ಜಡೇಜಾ ಹೊಸ ಡಿಮ್ಯಾಂಡ್
ಹೀಗಿರುವಾಗಲೇ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಳ್ಳುವ ಮುನ್ನವೇ ಫ್ರಾಂಚೈಸಿ ಬಳಿ ಬೌಲಿಂಗ್ ಆಲ್ರೌಂಡರ್ ಜಡ್ಡು ಹೊಸತೊಂದು ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಜಡ್ಡು ನಾಯಕತ್ವದ ಬೇಡಿಕೆ
ತಾವು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬರಬೇಕಿದ್ರೆ ತಮಗೆ ತಂಡದ ನಾಯಕತ್ವ ಬೇಕು ಎಂದು ರಾಯಲ್ಸ್ ಫ್ರಾಂಚೈಸಿ ಬಳಿ ರವೀಂದ್ರ ಜಡೇಜಾ ಹೊಸದೊಂದು ಡಿಮ್ಯಾಂಡ್ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಸಂಜುಗೆ ಸಿಗುತ್ತಾ ಸಿಎಸ್‌ಕೆ ಕ್ಯಾಪ್ಟನ್ ಪಟ್ಟ?
ಸಂಜು ಸ್ಯಾಮ್ಸನ್ ಕಳೆದೊಂದು ದಶಕದಿಂದಲೂ ರಾಜಸ್ಥಾನ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ರಾಯಲ್ಸ್ ಪರ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್(4027 ರನ್) ಎನ್ನುವ ದಾಖಲೆ ಹೊಂದಿದ್ದ ಸಂಜು, ಇದೀಗ ಸಿಎಸ್‌ಕೆ ತೆಕ್ಕೆಗೆ ಜಾರಲು ರೆಡಿಯಾಗಿದ್ದು, ತಂಡದ ಕ್ಯಾಪ್ಟನ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
254 ಐಪಿಎಲ್ ಪಂದ್ಯ ಆಡಿರುವ ಜಡ್ಡು
ಇನ್ನು ರವೀಂದ್ರ ಜಡೇಜಾ 2012ರಿಂದಲೂ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದು, ಒಟ್ಟು 254 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರವೇ ಜಡ್ಡು 143 ವಿಕೆಟ್ ಕಬಳಿಸಿದ್ದಾರೆ.