ಇರಾನ್‌ನಲ್ಲಿ ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ವರ್ಕೌಟ್ ಪ್ರದರ್ಶನ ನೀಡಿದ ಟೆಕ್ವಾಂಡೋ ಅಥ್ಲೀಟ್ ಹನಿಹ್ ಶರಿಯಾತಿ ರೌಡ್‌ಪೋಷ್ಟಿ ಅವರನ್ನು ಭದ್ರತಾ ಪಡೆಗಳು ಬಂಧಿಸಿವೆ. ಬಂಧನದ ನಂತರ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ಇದುವರೆಗೂ ಅವರ ಸುಳಿವಿಲ್ಲ.

ಹಿಜಾಬ್ ಧರಿಸದೇ ವರ್ಕೌಟ್ ಮಾಡಿದ ಟೆಕ್ವಾಂಡೋ ಅಥ್ಲೀಟ್ ನಿಗೂಢ ಕಣ್ಮರೆ

ಹಿಜಾಬ್ ಧರಿಸದೇ ವರ್ಕೌಟ್ ಮಾಡಿದ್ದಕ್ಕಾಗಿ ಟೆಕ್ವಾಂಡೋ ಅಥ್ಲೀಟ್ ಕೋಚ್‌ ಒಬ್ಬರನ್ನು ಇರಾನ್‌ನ ಅಧಿಕಾರಿಗಳು ಬಂಧಿಸಿದ್ದಾರೆ. ಇರಾನ್‌ನಲ್ಲಿ ಹಿಜಾಬ್ ಇಲ್ಲದೇ ಮಹಿಳೆಯರು ಹೊರಗೆ ಬರುವಂತಿಲ್ಲ. ಮಹಿಳೆಯರ ಸ್ವಾಂತಂತ್ರ್ಯದ ಮೇಲೆ ಹಲವು ಶರತ್ತುಗಳನ್ನು ಹೇರಿರುವ ಇರಾನ್ ಈಗ ಟೇಕ್ವಾಂಡೋ ಕ್ರೀಡಾಪಟು ಮತ್ತು ಜಿಮ್ನಾಸ್ಟಿಕ್ಸ್ ತರಬೇತುದಾರೆ ಹನಿಹ್ ಶರಿಯಾತಿ ರೌಡ್‌ಪೋಷ್ಟಿ ಎಂಬುವರನ್ನು ಬಂಧಿಸಿದೆ.

ಬಂಧಿಸಿ ಅಜ್ಞಾತ ಸ್ತಳಕ್ಕೆ ಕರೆದೊಯ್ದ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಭದ್ರತಾ ಪಡೆ

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಭದ್ರತಾ ಪಡೆಗಳು ಟೆಹ್ರಾನ್‌ನಲ್ಲಿ ವಾಸಿಸುವ ಹನಿಹ್ ಶರಿಯಾತಿ ರೌಡ್‌ಪೋಷ್ಟಿ ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿವೆ ಎಂದು ವರದಿಯಾಗಿದೆ. ಕಡ್ಡಾಯವಾಗಿ ಹಿಜಾಬ್ ಧರಿಸದೆ ಸಾರ್ವಜನಿಕವಾಗಿ ಪ್ರದರ್ಶನಗಳನ್ನು ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಹೆಂಗಾವ್ ಮಾನವ ಹಕ್ಕುಗಳ ಸಂಸ್ಥೆಗೆ ದೊರೆತ ಮಾಹಿತಿಯ ಪ್ರಕಾರ, ಹನಿಹ್ ಶರಿಯಾತಿ ರೌಡ್‌ಪೋಷ್ಠಿಯನ್ನು ನವೆಂಬರ್ 9, 2025 ರ ಭಾನುವಾರ ಸಂಜೆ ಗುಪ್ತಚರ ಸಚಿವಾಲಯದ ಏಜೆಂಟರು ಟೆಹ್ರಾನ್‌ನಲ್ಲಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕ ಪ್ರದರ್ಶನದ ಸಮಯದಲ್ಲಿ ಸಾರ್ವಜನಿಕ ವಸ್ತ್ರ ಸಂಹಿತೆಗಳನ್ನು ಪಾಲಿಸದ ಕಾರಣ ಆಕೆಯನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಆಕೆಯ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಅವರ ಕುಟುಂಬಕ್ಕೆ ಹತ್ತಿರವಿರುವ ಮೂಲವೊಂದು ವರದಿ ಮಾಡಿದೆ. 

ರಕ್ಷಿಸುವಂತೆ ಕುಟುಂಬಕ್ಕೆ ಕರೆ: ಬಂಧನದ ನಂತರ ಇಲ್ಲಿವರೆಗೂ ಆಕೆಯ ಸುಳಿವಿಲ್ಲ

ಬಂಧನದ ನಂತರ, ಹನಿಹ್ ಶರಿಯಾತಿ ರೌಡ್ಪೋಶ್ತಿ ತಮ್ಮ ಕುಟುಂಬಕ್ಕೆ ಫೋನ್ ಕರೆ ಮಾಡಿ, ಅವರ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಜೊತೆಗೆ ತನ್ನ ರಕ್ಷಣೆ ಮಾಡುವಂತೆ ಸಹಾಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅಂದಿನಿಂದ ಇಲ್ಲಿಯರವರೆಗೆ ಆಕೆಯ ಇರುವಿಕೆ ಅಥವಾ ಸ್ಥಿತಿಯ ಬಗ್ಗೆ ಅವರ ಕುಟುಂಬಕ್ಕೆ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿದು ಬಂದಿದೆ.

ಆಕೆಯ ಸಾಮಾಜಿಕ ಜಾಲತಾಣವೂ ಬ್ಲಾಕ್:

ಅವರ ಬಂಧನದ ನಂತರ, ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ಇರಾನಿನ ಭದ್ರತಾ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿವೆ. ಸುಮಾರು 160,000 ಅನುಯಾಯಿಗಳನ್ನು ಹೊಂದಿದ್ದ ಅವರ ಇನ್‌ಸ್ಟಾಗ್ರಾಮ್ ಪುಟವನ್ನು ಬ್ಲಾಕ್ ಮಾಡಲಾಗಿದೆ ಮತ್ತು ಆಕೆಯ ಪ್ರೊಫೈಲ್ ಹುಡುಕಿದವರಿಗೆ ಈಗ ಇರಾನ್‌ನ ಸೈಬರ್ ಪೊಲೀಸ್ ಲಾಂಛನ ಕಾಣಿಸುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಎಐ ಪಾರ್ಟನರ್‌ಗಾಗಿ 3 ವರ್ಷದ ಎಂಗೇಜ್‌ಮೆಂಟ್ ಮುರಿದ ಯುವತಿ

ಇದನ್ನೂ ಓದಿ: ಐಎಎಸ್ ಮಾಡುವುದಕ್ಕಾಗಿ ಮನೆ ಬಿಟ್ಟು ಹೋದ ಕ್ಲಾಸ್ ಟಾಪರ್: ತಂದೆಯಿಂದ ಹೇಬಿಯಸ್ ಕಾರ್ಪಸ್ ಅರ್ಜಿ