ನೇಮಕಾತಿ ಸಂಸ್ಥೆಯಾದ ರೈಟ್‌ಫಿಟ್‌ನ ಸಂಸ್ಥಾಪಕ ಸುಮಿತ್ ಸಿಂಗ್, ಕೇವಲ 2 ವರ್ಷಗಳ ಅನುಭವವಿರುವ ಅಭ್ಯರ್ಥಿಯೊಬ್ಬರು ತಿಂಗಳಿಗೆ 13 ಲಕ್ಷ ರೂ. ಸಂಬಳದ ವರ್ಕ್ ಫ್ರಮ್ ಹೋಮ್ ಉದ್ಯೋಗವನ್ನು ಪಡೆದಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇವಲ ಎರಡು ವರ್ಷದ ಉದ್ಯೋಗ ಅನುಭವಕ್ಕೆ 13 ಲಕ್ಷದ ವೇತನ

ಇಂದಿನ ಎಐ ಯುಗದಲ್ಲಿ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಕಡಿಮೆಯೋ ಹೆಚ್ಚೊ ಒಂದು ಸ್ಥಿರ ವೇತನ ಬರುವ ಕೆಲಸವೊಂದಿದ್ದರೆ ಅದುವೇ ದೊಡ್ಡದು ಅಂದುಕೊಳ್ಳೋರೆ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ನೇಮಕಾತಿ ಸಂಸ್ಥೆಯೊಂದು ಕೇವಲ 2 ವರ್ಷದ ಕೆಲಸದ ಅನುಭವ ಇರುವ ಉದ್ಯೋಗಿಯೊಬ್ಬ ತಿಂಗಳಿಗೆ 13 ಲಕ್ಷ ವೇತನದ ಮನೆಯಿಂದಲೇ ಮಾಡುವ (work from home) ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದು,ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ರೈಟ್‌ಫಿಟ್(Rightfit)ಎಂಬ ನೇಮಕಾತಿ ಸಂಸ್ಥೆಯ ಸಂಸ್ಥಾಪಕರಾದ ಸುಮಿತ್ ಸಿಂಗ್ ಎಂಬುವವರು ಈ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಅವರ ಪೋಸ್ಟ್ ವೈರಲ್ ಆಗಿದೆ.

ಭಾರತದಲ್ಲಿ ಟೆಕ್ ಕಂಪನಿಗಳಲ್ಲಿ ಸಿಗುವ ವೇತನದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸುತ್ತಾ ಈ ವಿಚಾರ ತಿಳಸಿದ್ದಾರೆ. ಅವರ ಹೇಳಿಕೆಗೆ ಮೆಚ್ಚುಗೆಯ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ತಂತ್ರಜ್ಞರಾಗಿದ್ದರೆ, ಮೂರರಿಂದ ನಾಲ್ಕು ವರ್ಷಗಳ ಅನುಭವದ ನಂತರ ತಿಂಗಳಿಗೆ ₹ 5 ಲಕ್ಷ ಗಳಿಸುವುದು ಸುಲಭ ಎಂದು ಸೌರಭ್ ಎಂಬ X ಬಳಕೆದಾರರು ಹೇಳಿಕೊಂಡಾಗ ಸಂಭಾಷಣೆ ಪ್ರಾರಂಭವಾಯಿತು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಫಾಲ್ ಎಐ ಎಂಬ ಸಂಸ್ಥೆಯ ಉದ್ಯೋಗಿಯೊಬ್ಬರು, ತಿಂಗಳಿಗೆ ₹ 9 ಲಕ್ಷ ಸಂಪಾದಿಸುವುದು ಸಹ ಸಾಧ್ಯ, ಆದರೆ ಅದು ಉದ್ಯೋಗಿಗೆ ನಿದ್ರೆ ಬರದಂತೆ ಮಾಡಬಹುದು ಎಂದು ಹೇಳಿದರು. ಈ ಹಂತದಲ್ಲಿ ರೈಟ್‌ಫಿಟ್‌ನ ಸಂಸ್ಥಾಪಕ ಸುಮಿತ್ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ. ಕಳೆದ ವರ್ಷ, ಕೇವಲ ಎರಡು ವರ್ಷಗಳ ಅನುಭವ ಹೊಂದಿರುವ ಒಬ್ಬ ಅಭ್ಯರ್ಥಿಯು ರೈಟ್‌ಫಿಟ್ ಮೂಲಕ ತಿಂಗಳಿಗೆ ₹ 13 ಲಕ್ಷ ಸಂಬಳದ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಹಿರಂಗಪಡಿಸಿದರು. ಈ ರೈಟ್‌ಫಿಟ್ ಸಂಸ್ಥೆಯು ಕೆಲಸದ ಸಾಕ್ಷಿಗಳ ಆಧಾರದ ಮೇಲೆ ಉದ್ಯೋಗದಾತರಿಗೆ ಒಳ್ಳೆಯ ಪ್ರತಿಭೆಗಳೊಂದಿಗೆ ಸಂಪರ್ಕ ಕಲಿಸಲು ಅವಕಾಶ ನೀಡುತ್ತದೆ.

ಇದನ್ನೂ ಓದಿ: ಹೆಣ್ಣು ಮಾಯೆ ಹುಷಾರು: ಗರ್ಲ್‌ಫ್ರೆಂಡ್ ನೀಡಿದ ಸುಳಿವಿನಿಂದಲೇ ಮೆಕ್ಸಿಕೋದ ಡ್ರಗ್ ಲಾರ್ಡ್ ಹತ್ಯೆ

ತಿಂಗಳಿಗೆ ₹ 13 ಲಕ್ಷ (ಅಥವಾ ವರ್ಷಕ್ಕೆ ₹ 1.5 ಕೋಟಿ) ಸಂಬಳವು ತಮ್ಮ ನೇಮಕಾತಿ ವೇದಿಕೆಯ ಮೂಲಕ ಯಾರಾದರೂ ಪಡೆದ ಅತ್ಯಧಿಕ ಸಂಬಳವಾಗಿದೆ ಎಂದು ಸಿಂಗ್ ಹೇಳಿದರು. ಎರಡು ವರ್ಷ ಅನುಭವ ಹೊಂದಿರುವ ವ್ಯಕ್ತಿಯೊಬ್ಬರು ಕಳೆದ ವರ್ಷ ತಿಂಗಳಿಗೆ ₹13 ಲಕ್ಷದ ವರ್ಕ್‌ ಫ್ರಮ್ ಹೋಮ್‌ ಕೆಲಸವನ್ನು ಪಡೆದರು. ಅದು ನಾವು ಇಲ್ಲಿಯವರೆಗೆ ಮಾಡಿರುವ ಅತ್ಯಧಿಕ ವೇತನದ ಉದ್ಯೋಗವಕಾಶವಾಗಿದೆ ಎಂದು ಸಿಂಗ್ ಹೇಳಿದರು. ಈ ವರ್ಷ, ಇದನ್ನು ದ್ವಿಗುಣಗೊಳಿಸುವುದು ಮತ್ತು ಅದ್ಭುತ ಕೆಲಸದ ಸಾಕ್ಷಿ ಹೊಂದಿರುವ ಅಭ್ಯರ್ಥಿಗಳಿಗೆ ಇನ್ನೂ ಉತ್ತಮ ಉದ್ಯೋಗಗಳು ಸಿಗುವಂತೆ ಮಾಡುವುದು ಯೋಜನೆಯಾಗಿದೆ ಎಂದು ಬೆಂಗಳೂರು ಮೂಲದ ಉದ್ಯೋಗ ರೈಟ್‌ಲಿಫ್ಟ್‌ ಸಂಸ್ಥೆಯ ಸಂಸ್ಥಾಪಕ ಸುಮಿತ್ ಹೇಳಿದರು.

ಇವರ ಮಾತು ಕೇಳಿ ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಅನೇಕರು ಆ ಅಭ್ಯರ್ಥಿಯ ಪೋರ್ಟ್‌ಫೋಲಿಯೊವನ್ನು ನಾನು ತಿಳಿದುಕೊಳ್ಳಲು ಬಯಸುತ್ತೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಸಾಕ್ಷಿ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಸೈಟ್‌ನಲ್ಲಿ ನಾವು ಸಂಸ್ಥಾಪಕರು + ತಂಡದ ಸದಸ್ಯರಿಂದ ಪ್ರಶಂಸಾಪತ್ರಗಳನ್ನು ಪ್ರದರ್ಶಿಸುವ ಪುಟವನ್ನು ಹೊಂದಿದ್ದೇವೆ, ನೀವು ಅದನ್ನು ಪರಿಶೀಲಿಸಬಹುದು ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: 7 ಲಕ್ಷ ಸಾಲ ಮಾಡಿ ಏರ್ ಆಂಬುಲೆನ್ಸ್ ಬುಕ್ : ಒಬ್ಬನನ್ನು ಉಳಿಸಲು ಹೋಗಿ ಸತ್ತಿದ್ದು ಏಳು ಜನ