Shikhar Dhawan to Marry Sophie Shine in Feb 2026; Details Inside ಮೂಲಗಳ ಪ್ರಕಾರ, ವಿವಾಹವು ಅದ್ದೂರಿಯಾಗಿ ನಡೆಯಲಿದ್ದು, ದೆಹಲಿ NCR ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
- Home
- News
- India News
- Indian Latest News Live: ಫೆಬ್ರವರಿ ಕೊನೆಯಲ್ಲಿ ಶಿಖರ್ ಧವನ್ 2ನೇ ಮದುವೆ, ಐರ್ಲೆಂಡ್ ಹುಡುಗಿಯ ವರಿಸಲಿರುವ ಕ್ರಿಕೆಟಿಗ
Indian Latest News Live: ಫೆಬ್ರವರಿ ಕೊನೆಯಲ್ಲಿ ಶಿಖರ್ ಧವನ್ 2ನೇ ಮದುವೆ, ಐರ್ಲೆಂಡ್ ಹುಡುಗಿಯ ವರಿಸಲಿರುವ ಕ್ರಿಕೆಟಿಗ

ಮುಂಬೈ: ‘ಡ್ರಗ್ಸ್ ವ್ಯಾಪಾರದ ಆರೋಪದಲ್ಲಿ ವೆನಿಜುವೆಲಾ ಅಧ್ಯಕ್ಷರನ್ನು ಟ್ರಂಪ್ ಹಿಡಿದು ದೇಶಕ್ಕೆ ಕರೆತಂದಂತೆ ಉಗ್ರ ಮಸೂದ್ ಅಜರ್ನನ್ನೂ ಪ್ರಧಾನಿ ಮೋದಿ ಪಾಕ್ನಿಂದ ಹಿಡಿದು ತರಲಿ ಎಂದು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒವೈಸಿ, ‘ಟ್ರಂಪ್ಗೆ ವೆನಿಜುವೆಲಾದ ಅಧ್ಯಕ್ಷ ಮಡುರೋ ಅವರನ್ನು ಅಪಹರಿಸಲು ಸಾಧ್ಯವಾದರೆ ನೀವು ( ಪ್ರಧಾನಿ ಮೋದಿ) ಪಾಕಿಸ್ತಾನಕ್ಕೆ ಹೋಗಿ 26/11 ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ನ್ನು ಭಾರತಕ್ಕೆ ಕರೆ ತರಬಹುದು. ನೀವು ಪಾಕಿಸ್ತಾನಕ್ಕೆ ಹೋಗಿ ಮುಂಬೈ ದಾಳಿ ನಡೆಸಿದ ಕ್ರೂರ ಜನರನ್ನು ಮರಳಿ ಕರೆತರಬಹುದು. ಅದು ಮಸೂದ್ ಅಜರ್ ಆಗಿರಬಹುದು ಅಥವಾ ಎಲ್ಇಟಿಯ ಕ್ರೂರ ರಾಕ್ಷಸರಾಗಿರಬಹುದು’ ಎಂದಿದ್ದಾರೆ.
Indian Latest News Live 5 January 2026ಫೆಬ್ರವರಿ ಕೊನೆಯಲ್ಲಿ ಶಿಖರ್ ಧವನ್ 2ನೇ ಮದುವೆ, ಐರ್ಲೆಂಡ್ ಹುಡುಗಿಯ ವರಿಸಲಿರುವ ಕ್ರಿಕೆಟಿಗ
Indian Latest News Live 5 January 2026ಡ್ರಗ್ಸ್, ತೈಲ ಎಲ್ಲವೂ ಕುಂಟುನೆಪ..ವೆನುಜುವೇಲ ಮೇಲೆ ಅಮೆರಿಕ ದಾಳಿ ಮಾಡಿದ್ದಕ್ಕೆ ಇದೊಂದೇ ಕಾರಣ..
ಅಮೆರಿಕವು ವೆನುಜುವೇಲದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ದಾಳಿಯ ಹಿಂದಿನ ನಿಜವಾದ ಕಾರಣ ಕೇವಲ ತೈಲವಲ್ಲ, ಬದಲಾಗಿ ತನ್ನ 'ಪೆಟ್ರೋಡಾಲರ್' ವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವ ಅಮೆರಿಕದ ತಂತ್ರವಾಗಿದೆ.
Indian Latest News Live 5 January 2026ಕಪ್ಪೆ ಲೋಕದ ರೋಚಕ ರೊಮಾನ್ಸ್ - ಇಷ್ಟವಿಲ್ಲದ ಗಂಡು ಹತ್ರ ಬಂದ್ರೆ ಹೇಗೆ ಚಳ್ಳೆಹಣ್ಣು ತಿನ್ಸತ್ತೆ ನೋಡಿ ಹೆಣ್ ಕಪ್ಪೆ!
ಗಂಡು ಕಪ್ಪೆಗಳು ಸಂಯೋಗಕ್ಕೆ ಬಂದಾಗ, ಇಷ್ಟವಿಲ್ಲದ ಹೆಣ್ಣು ಕಪ್ಪೆಗಳು ಸತ್ತಂತೆ ನಟಿಸಿ ತಪ್ಪಿಸಿಕೊಳ್ಳುತ್ತವೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಂಶೋಧನೆಯಲ್ಲಿ, ಹೆಣ್ಣು ಕಪ್ಪೆಗಳು ನಿಸ್ತೇಜವಾಗಿ ಬಿದ್ದು, ಗಂಡು ಕಪ್ಪೆಗಳು ದೂರ ಹೋದ ನಂತರ ಮತ್ತೆ ಚಲಿಸುತ್ತವೆ ಎಂಬುದು ತಿಳಿದುಬಂದಿದೆ.
Indian Latest News Live 5 January 2026ಅಂದದ ಉಗುರಿಗೆ ಮರುಳಾದ ಮಹಿಳೆಗೆ ಚರ್ಮದ ಕ್ಯಾನ್ಸರ್! ಬೆಚ್ಚಿಬೀಳಿಸ್ತಿದೆ ಈ ಘಟನೆ- ಮಹಿಳೆಯರೇ ಹುಷಾರ್
ಕೃತಕ ಉಗುರುಗಳ ಬಳಕೆಯಿಂದ 35 ವರ್ಷದ ಮಹಿಳೆಯೊಬ್ಬರಲ್ಲಿ ಅಪರೂಪದ ಚರ್ಮದ ಕ್ಯಾನ್ಸರ್ (ಸುಬುಂಗುವಲ್ ಮೆಲನೋಮಾ) ಪತ್ತೆಯಾಗಿದೆ. ಅಕ್ರಿಲಿಕ್ ಉಗುರುಗಳನ್ನು ಅಂಟಿಸಲು ಬಳಸುವ ಯುವಿ ದೀಪಗಳು ಮತ್ತು ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
Indian Latest News Live 5 January 2026ವಿವಾಹಿತೆಗೆ ಅಕ್ರಮ ಸಂಬಂಧದಿಂದ ಮಗುವಾದ್ರೆ ಅಪ್ಪ ಯಾರು? ಸುಪ್ರೀಂಕೋರ್ಟ್‌ನಿಂದ ಕುತೂಹಲದ ತೀರ್ಪು
ವಿವಾಹಿತ ಮಹಿಳೆಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದರೆ, ಆ ಮಗುವಿನ ಕಾನೂನುಬದ್ಧ ತಂದೆ ಆಕೆಯ ಪತಿಯೇ ಆಗಿರುತ್ತಾನೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 112ರ ಅಡಿಯಲ್ಲಿ, ಮಗುವಿನ ಘನತೆಯನ್ನು ಕಾಪಾಡಲು ಕೋರ್ಟ್ ಹೇಳಿದ್ದೇನು?
Indian Latest News Live 5 January 2026ಬಾಂಗ್ಲಾದೇಶದಲ್ಲಿ ಸಾರ್ವಜನಿಕವಾಗಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಕೊ*ಲೆ, 3 ವಾರದಲ್ಲಿ ಐದನೇ ಘಟನೆ!
5th Hindu Killed in 3 Weeks: Rana Pratap Shot Dead in Bangladesh ಮೃತರನ್ನು ಕೇಶಬಪುರದ ಅರುವಾ ಗ್ರಾಮದ ತುಷಾರ ಕಾಂತಿ ಬೈರಾಗಿ ಅವರ ಪುತ್ರ ರಾಣಾ ಪ್ರತಾಪ್ (45) ಎಂದು ಗುರುತಿಸಲಾಗಿದೆ.
Indian Latest News Live 5 January 2026ನನಗೆ 6 ಮಕ್ಕಳು, ನಿನ್ನನ್ನು ತಡೆದವರು ಯಾರು? ಬಿಜೆಪಿ ನಾಯಕಿ ನವನೀತ್ ರಾಣಾಗೆ ತಿರುಗೇಟು ನೀಡಿದ ಓವೈಸಿ
ಬಿಜೆಪಿ ನಾಯಕಿ ನವನೀತ್ ರಾಣಾ ಅವರ 'ಹಿಂದೂಗಳು ನಾಲ್ಕು ಮಕ್ಕಳನ್ನು ಹೊಂದಬೇಕು' ಎಂಬ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ತಮಗೆ ಆರು ಮಕ್ಕಳಿದ್ದು, ನಾಲ್ಕು ಮಕ್ಕಳನ್ನು ಹೊಂದಲು ಯಾರು ತಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
Indian Latest News Live 5 January 2026ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್‌ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್
ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್‌ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್ ನೀಡಲಾಗಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರನಿಗೂ ಸಮನ್ಸ್ ನೀಡಲಾಗಿದೆ.
Indian Latest News Live 5 January 2026ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್
ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್ ಆಗಿದೆ. 2000 ಸಿನಿಮಾ ಅರ್ಜಿಗಳ ಪೈಕಿ ಗರಿಷ್ಠ 250 ಸಿನಿಮಾ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಭಾರತದ ಸಿನಿಮಾ ಕೂಡ ಸೇರಿಕೊಂಡಿದೆ.
Indian Latest News Live 5 January 2026Breaking - ಅಮೆರಿಕ ಉಪಾಧ್ಯಕ್ಷ JD Vance ಮನೆ ಮೇಲೆ ಗುಂಡಿನ ದಾಳಿ, ಒಬ್ಬನ ಬಂಧನ
Indian Latest News Live 5 January 2026ಚಾಟ್ ಜಿಪಿಟಿ ಸಲಹೆ ಪಡೆದು 3 ತಿಂಗಳಲ್ಲಿ 27 ಕೇಜಿ ತೂಕ ಇಳಿಸಿದ ಯುವಕ
ಹಸನ್ ಎಂಬ ವ್ಯಕ್ತಿ ಯಾವುದೇ ಜಿಮ್ ಅಥವಾ ತಜ್ಞರ ಸಹಾಯವಿಲ್ಲದೆ, ಕೇವಲ ಚಾಟ್ ಜಿಪಿಟಿ ಬಳಸಿ 3 ತಿಂಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ಅವರು ತಮ್ಮ ಡಯಟ್ ಪ್ಲಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
Indian Latest News Live 5 January 2026ಭಾರತ-ನ್ಯೂಜಿಲೆಂಡ್ ನಡುವಿನ ಮ್ಯಾಚ್ ಫ್ರೀ ಆಗಿ ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಡೀಟೈಲ್ಸ್
India vs New Zealand ODI Streaming: ಭಾರತ-ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ ಜನವರಿ 11ರಿಂದ ಆರಂಭವಾಗಲಿದೆ. ಬನ್ನಿ ನಾವಿಂದು ಎಲ್ಲಿ ಉಚಿತವಾಗಿ ಈ ಪಂದ್ಯವನ್ನು ವೀಕ್ಷಿಸಬಹುದು ಎನ್ನುವುದನ್ನು ತಿಳಿಯೋಣ.
Indian Latest News Live 5 January 202610 ದಿನಗಳ ಹಿಂದೆ ಮದುವೆ, ಹನಿಮೂನ್‌ಗೆ ಹೋಗೋವಾಗಲೇ ವಿಮಾನ ನಿಲ್ದಾಣದಲ್ಲೇ ಬಿಗ್‌ಬಾಸ್ ಸ್ಪರ್ಧಿ ಅರೆಸ್ಟ್!
ಸ್ಪ್ಲಿಟ್ಸ್‌ವಿಲ್ಲಾ 13ರ ವಿಜೇತ ಜೇ ದುಧಾನೆ ಅವರನ್ನು ₹5 ಕೋಟಿ ವಂಚನೆ ಆರೋಪದ ಮೇಲೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಹನಿಮೂನ್‌ಗೆ ತೆರಳುತ್ತಿದ್ದ ವೇಳೆ, ನಕಲಿ ದಾಖಲೆ ನೀಡಿ ಅಂಗಡಿಗಳನ್ನು ಮಾರಾಟ ಮಾಡಿದ ಪ್ರಕರಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ
Indian Latest News Live 5 January 2026ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ
ಸದ್ದಿಲ್ಲದೆ ಎಂಗೇಜ್‌ಮೆಂಟ್ ಮುಗಿಸಿ ಅಚ್ಚರಿಕೊಟ್ಟ ಬಿಗ್ ಬಾಸ್ ಮಾಜಿ ಸ್ಪರ್ಧಿ, ಗೆಳೆಯ ಮಂಡಿಯೂರಿ ಮಾಡಿದ ಪ್ರಪೋಸಲ್‌ಗೆ ಕಣ್ಮುಚ್ಚಿ ಯೆಎಸ್ ಎಂದ ಈಕೆ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಂತಸವನ್ನು ಮಾಜಿ ಸ್ಪರ್ಧಿ ಹಂಚಿಕೊಂಡಿದ್ದಾಳೆ.
Indian Latest News Live 5 January 2026ಇಂಟರ್‌ನ್ಯಾಷನಲ್ ಲೀವ್ ಇನ್ ರಿಲೇಷನ್‌ಶಿಪ್ - ಸೌತ್ ಕೊರಿಯನ್ ಬಾಯ್‌ಫ್ರೆಂಡ್ ಎದೆಬಗೆದ ಮಣಿಪುರದ ಪ್ರೇಯಸಿ
ಗ್ರೇಟರ್ ನೋಯ್ಡಾದಲ್ಲಿ, ತನ್ನ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ದಕ್ಷಿಣ ಕೊರಿಯಾದ ಪ್ರಜೆಯನ್ನು ಮಣಿಪುರದ ಯುವತಿಯೊಬ್ಬಳು ಹತ್ಯೆ ಮಾಡಿದ್ದಾಳೆ.
Indian Latest News Live 5 January 2026ಗಾಯಕಿ ಚಿತ್ರಾ ಅಯ್ಯರ್‌ಗೆ ಸರಣಿ ಆಘಾತ - ತಂದೆಯ ಸಾವಾಗಿ ತಿಂಗಳು ಕಳೆಯುವ ಮೊದಲೇ ಸೋದರಿಯೂ ಸಾವು
ಖ್ಯಾತ ಗಾಯಕಿ ಚಿತ್ರಾ ಅಯ್ಯರ್ ಅವರ ಸೋದರಿ, 52 ವರ್ಷದ ಶಾರದಾ ಅಯ್ಯರ್, ಒಮನ್‌ನ ಜೆಬೆಲ್ ಶಾಮ್ಸ್ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡುವಾಗ ಸಂಭವಿಸಿದ ದುರಂತದಲ್ಲಿ ನಿಧನರಾಗಿದ್ದಾರೆ. ತಂದೆಯ ಮರಣದ ಒಂದು ತಿಂಗಳೊಳಗೆ ನಡೆದ ಈ ಘಟನೆಯು ಕುಟುಂಬಕ್ಕೆ ಆಘಾತ ತಂದಿದೆ.
Indian Latest News Live 5 January 2026ಶಾಂತಗೊಂಡಿದ್ದ ಮಣಿಪುರದಲ್ಲಿ ಮೂರು ಐಇಡಿ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ
ಶಾಂತಗೊಂಡಿದ್ದ ಮಣಿಪುರದಲ್ಲಿ ಮೂರು ಐಇಡಿ ಬಾಂಬ್ ಸ್ಫೋಟ, ಇಬ್ಬರಿಗೆ ಗಾಯ, ಬೆಳಗಿನ ಜಾವ 2 ಸ್ಫೋಟ ಸಂಭವಿಸಿದರೆ, ಎರಡೂವರೆ ಗಂಟೆ ಬಳಿಕ ಮತ್ತೊಂದು ಐಇಡಿ ಸ್ಫೋಟಗೊಂಡಿದೆ. ಮಣಿಪುರದಲ್ಲಿ ಮತ್ತೆ ಆತಂಕ ಮನೆ ಮಾಡಿದೆ.
Indian Latest News Live 5 January 2026ಈತ ಭಾರತ ಏಕದಿನ ತಂಡದಲ್ಲಿ ಯಾಕಿದ್ದಾನೆ? ಗಾಯಕ್ವಾಡ್ ಬದಲಿಗೆ ಈ ಆಟಗಾರನಿಗೆ ಸ್ಥಾನ ನೀಡಿದ್ದಕ್ಕೆ ಕಿಡಿಕಾರಿದ ಮಾಜಿ ಕ್ರಿಕೆಟರ್!
ಚೆನ್ನೈ: ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗಿದ್ದು, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕೆಲವೊಂದು ಅಚ್ಚರಿ ತೀರ್ಮಾನ ತೆಗೆದುಕೊಂಡಿದೆ. ಈ ಪೈಕಿ ಋತುರಾಜ್ ಗಾಯಕ್ವಾಡ್ ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಆಕ್ರೋಶ ಹೊರಹಾಕಿದ್ದಾರೆ.
Indian Latest News Live 5 January 2026ಪಾಕಿಸ್ತಾನದ ರಾಜತಾಂತ್ರಿಕ ಗ್ಯಾಂಬ್ಲಿಂಗ್, ಅಮೆರಿಕ ಜೊತೆಗಿನ ಸ್ನೇಹದಿಂದ ಪ್ರಾದೇಶಿಕ ರಾಜಕಾರಣದ ಮೇಲಿನ ಪರಿಣಾಮ
ಪಾಕಿಸ್ತಾನದ ರಾಜತಾಂತ್ರಿಕ ಗ್ಯಾಂಬ್ಲಿಂಗ್, ಅಮೆರಿಕ ಜೊತೆಗಿನ ಸ್ನೇಹದಿಂದ ಪ್ರಾದೇಶಿಕ ರಾಜಕಾರಣದ ಮೇಲಿನ ಪರಿಣಾಮ ಏನು? ಇಸ್ಲಾಮಾಬಾದ್‌ನ ಹೊಸ ವಿದೇಶಾಂಗ ನೀತಿಯಿಂದ ನೆರೆಹೊರೆಯ ರಾಷ್ಟ್ರಗಳಲ್ಲಿ ಆತಂಕ?
Indian Latest News Live 5 January 2026ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀದ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ಉತ್ತರ
ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀದ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ವಿಶ್ವವೇ ಮೆಚ್ಚುವ ಉತ್ತರ ನೀಡಿದೆ. ವೆನಿಜುವೆಲಾಗೆ ನುಗ್ಗಿ ಅಧ್ಯಕ್ಷರ ಬಂಧಿಸಿದ ನಡೆ ಉಲ್ಲೇಖಿಸಿ ಅಸಾದುದ್ದೀನ್ ಓವೈಸಿ ಮಹತ್ವದ ಪ್ರಶ್ನೆ ಎತ್ತಿದ್ದಾರೆ.