ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್‌ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್
ಸೆಲೆಕ್ಷನ್ ಕಮಿಟಿ ಬಳಿಕ ಎಲೆಕ್ಷನ್ ಕಮಿಷನ್‌ನಿಂದಲೂ ಶಮಿಗೆ ಶಾಕ್, SIR ಸಂಬಂಧ ಸಮನ್ಸ್ ನೀಡಲಾಗಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರನಿಗೂ ಸಮನ್ಸ್ ನೀಡಲಾಗಿದೆ.

ಆಯ್ಕೆ ಸಮಿತಿ ಬಳಿಕ ಚನಾವಣಾ ಆಯೋಗದ ಶಾಕ್
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಭಾರತದ ಕಂಡ ಅತ್ಯುತ್ತಮ ಬೌಲರ್ ಪೈಕಿ ಒಬ್ಬರು. ಆದರೆ ಕಳೆದ ಕೆಲ ವರ್ಷಗಳಿಂದ ಮೊಹಮ್ಮದ್ ಶಮಿಯನ್ನು ಆಯ್ಕೆ ಸಮಿತಿ ಕಡೆಗಣಿಸುತ್ತಾ ಬಂದಿದೆ. ಜನವರಿ 11ರಿಂದ ಆರಂಭಗೊಳ್ಳುತ್ತಿರುವ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಗೆ ಶಮಿ ಆಯ್ಕೆಯಾಗಿಲ್ಲ. ಈ ಮೂಲಕ ಶಮಿಗೆ ಮತ್ತೆ ಆಯ್ಕೆ ಸಮಿತಿ ಶಾಕ್ ಕೊಟ್ಟಿದೆ. ಇದರ ಬೆನ್ನಲ್ಲೇ ಎಲೆಕ್ಷನ್ ಕಮಿಷನ್ ಕೂಡ ಶಾಕ್ ನಡಿದೆ.
SIR ಸಂಬಂಧ ಮೊಹಮ್ಮದ್ ಶಮಿಗೆ ಸಮನ್ಸ್
ಮತದರಾರ ಪಟ್ಟಿ ತೀವ್ರ ಪರಿಷ್ಕರಣೆ( SIR) ಸಂಬಂಧ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಾಗೂ ಶಮಿ ಸಹೋದರ ಮೊಹಮ್ಮದ್ ಕೈಫ್‌ಗೆ ಸಮನ್ಸ್ ನೀಡಿದೆ. ಮೊಹಮ್ಮದ್ ಶಮಿ ಭರ್ತಿ ಮಾಡಿರುವ SIR ಫಾರ್ಮ್‌ನಲ್ಲಿ ಕೆಲ ವ್ಯತ್ಯಾಸಗಳಿವೆ. ಇಷ್ಟೇ ಅಲ್ಲ ದಾಖಲೆಗಳು, ಮಾಹಿತಿಗಳು ತಾಳೆಯಾಗುತ್ತಿಲ್ಲ. ಹೀಗಾಗಿ ಎಲೆಕ್ಷನ್ ಕಮಿಷನ್ ಸಮನ್ಸ್ ನೀಡಿದೆ.
ಶಮಿಗೆ ಸಮನ್ಸ್ ನೀಡಲು ಇದೆ ಮುಖ್ಯ ಕಾರಣ
ಮೊಹಮ್ಮದ್ ಶಮಿ ಮತದಾರರ ಚೀಟಿ ಕೋಲ್ಕತಾ ಮುನ್ಸಿಪಲ್ ಕಾರ್ಪೋರೇಶನ್ ವಾರ್ಡ್ ನಂ.93ರಲ್ಲಿದೆ. ಇದು ರಶಬೆಹಾರಿ ವಿಧಾನಸಭಾ ಕ್ಷೇತ್ರದಡಿ ಬರಲಿದೆ. ಆದರೆ ಮೊಹಮ್ಮದ್ ಶಮಿ ಜನನ ಉತ್ತರ ಪ್ರದೇಶದ ಅಮೋರ ಜಿಲ್ಲೆಯಲ್ಲಿ. ಇತ್ತ ಶಮಿ ಭರ್ತಿ ಮಾಡಿರುವ ಅರ್ಜಿಯಲ್ಲಿ ಕೆಲ ವ್ಯತ್ಯಾಸಗಳು ಕಂಡು ಬಂದಿದೆ. ಹೀಗಾಗಿ ಅಧಿಕಾರಿಗಳ ಮುಂದೆ ಹಾಜರಾಗಿ ಮಾಹಿತಿ ನೀಡಲು ಸೂಚಿಸಲಾಗಿದೆ.
ಜನವರಿ 5ಕ್ಕೆ ಡೆಡ್‌ಲೈನ್ ನೀಡಿದ್ದ ಚುನಾವಣಾ ಆಯೋಗ
ಮೊಹಮ್ಮದ್ ಶಮಿಗೆ ಚುನಾವಣಾ ಆಯೋಗ ನೀಡಿದ ಸಮನ್ಸ್‌ನಲ್ಲಿ ಜನವರಿ 5ರೊಳಗೆ ಚುನಾವಣಾ ಆಯೋಗ ಕಚೇರಿಗೆ ಹಾಜರಾಗಲು ಸೂಚಿಸಿತ್ತು. SIR ಕುರಿತು ಅಧಿಕಾರಿಗಳ ವಿಚಾರಣೆಗೆ ಹಾಜರಾಗಲು ಸಮನ್ಸ್‌ನಲ್ಲಿ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೆ ಮೊಹಮ್ಮದ್ ಶಮಿ ಹಾಜರಾಗಲು ಸಾಧ್ಯವಾಗಿಲ್ಲ.
ಚುನಾವಣಾ ಆಯೋಗಕ್ಕೆ ಪತ್ರ ಬರೆದ ಶಮಿ
ಚುನಾವಣಾ ಆಯೋಗ ಸಮನ್ಸ್ ಕುರಿತು ಮೊಹಮ್ಮದ್ ಶಮಿ ಆಯೋಗಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಸಂಬಂಧ ರಾಜ್‌ಕೋಟ್‌ನಲ್ಲಿರುವ ಕಾರಣ ಹಾಜರಾಗಲು ಸಾಧ್ಯವಾಗುತ್ತಿಲ್ಲ. ನೀವು ಸೂಚಿಸಿದ ಸಮಯದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಶಮಿ ಪತ್ರದ ಮೂಲಕ ಹೇಳಿದ್ದಾರೆ.
ದಿನಾಂಕ ಮೂಂದೂಡಿದ ಚುನಾವಣಾ ಆಯೋಗ
ಮೊಹಮ್ಮದ್ ಶಮಿ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರವನ್ನು ಆಯೋಗ ಪರಿಗಣಿಸಿದೆ. ಹೀಗಾಗಿ ಜನವರಿ 5ರ ಡೆಡ್‌ಲೈನ್ ದಿನಾಂಕವನ್ನು ಇದೀಗ ಜನವರಿ 9 ಹಾಗೂ ಜನವರಿ 11ಕ್ಕೆ ಹಾಜರಾಗುವಂತೆ ಸೂಚಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

