ಹಸನ್ ಎಂಬ ವ್ಯಕ್ತಿ ಯಾವುದೇ ಜಿಮ್ ಅಥವಾ ತಜ್ಞರ ಸಹಾಯವಿಲ್ಲದೆ, ಕೇವಲ ಚಾಟ್ ಜಿಪಿಟಿ ಬಳಸಿ 3 ತಿಂಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ಅವರು ತಮ್ಮ ಡಯಟ್ ಪ್ಲಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
ತೂಕ ಇಳಿಸಿಕೊಂಡು ಸ್ಲಿಮ್ ಆಗಿ ಫಿಟ್ & ಫೈನ್ ಆಗಿ ಕಾಣಬೇಕು ಎಂಬುದು ಹಲವರ ಬಯಕೆ. ಆದರೆ ಅನೇಕರಿಗೆ ತೂಕ ಇಳಿಸುವುದೇ ದೊಡ್ಡ ಸವಾಲು. ಇಷ್ಟವಾದ ಆಹಾರಗಳನ್ನು ಎದುರಿಗೆ ನೋಡುವಾಗ ಇರುವುದೊಂದು ಜೀವನ ಆಸೆಯನ್ನು ಕಟ್ಟಿಡೋದು ಏಕೆ ತಿಂದು ಬಿಡೋಣ ಎಂದು ಇಷ್ಟಪಟ್ಟು ತಿನ್ನುತ್ತಾರೆ. ಮತ್ತೆ ಗೊಂದಲಕ್ಕೊಳಗಾಗುತ್ತಾರೆ ತೂಕ ಇಳಿಸಬೇಕು ಎಂದು ಪಣ ತೊಡುತ್ತಾರೆ. ನಿರಂತರ ಡಯಟ್ ಮಾಡಿದರೆ ತೂಕ ಇಳಿಕೆ ಆಗುತ್ತದೆ. ಆದರೆ ಡಯಟ್ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಏರಿಕೆ ಆಗುತ್ತದೆ. ಇದರ ಜೊತೆಗೆ ಹೆಣ್ಣು ಮಕ್ಕಳಿಗಾದರೆ ಆರೋಗ್ಯದಲ್ಲಿ ಮಾಸಿಕ ಋತುಚಕ್ರದಲ್ಲೂ ಏರುಪೇರಾಗುತ್ತದೆ. ಅನೇಕರು ತೂಕ ಇಳಿಕೆ ಮಾಡುವುದಕ್ಕೆ ಹೋಗಿ ಅನಾರೋಗ್ಯಕ್ಕೀಡಾಗುತ್ತಾರೆ. ಆದರೆ ಇಲ್ಲೊಬ್ಬರು ವ್ಯಕ್ತಿ ಯಾವುದೇ ಫಿಟ್‌ನೆಸ್ ತಜ್ಞರ ಸಲಹೆ ಪಡೆಯದೇ ಕೇವಲ ಎಐ ತಂತ್ರಜ್ಞಾನವಾದ ಚಾಟ್ ಜಿಪಿಟಿಯ ಸಲಹೆ ಪಡೆದು ಕೇವಲ 3 ತಿಂಗಳಲ್ಲಿ 27 ಕೇಜಿ ತೂಕ ಇಳಿಕೆ ಮಾಡಿದ್ದಾಗಿ ಹೇಳಿಕೊಂಡಿದ್ದು, ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಟೆಕ್ ಸಂಬಂಧಿ ಕೆಲಸ ಮಾಡುವ ಹಸನ್ ಎಂಬುವವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನನ್ನ ವೈಯಕ್ತಿಕ ತರಬೇತುದಾರನಾಗಿ ಚಾಟ್ ಜಿಪಿಟಿಯನ್ನು ಆಯ್ಕೆ ಮಾಡುವ ಮೂಲಕ ನಾನು 27 ಕಿಲೋಗ್ರಾಂಗಳಷ್ಟು ಕಳೆದುಕೊಂಡೆ. ಜಿಮ್ ಇಲ್ಲ. ದುಬಾರಿ ಅಪ್ಲಿಕೇಶನ್‌ಗಳಿಲ್ಲ. ಬಿಎಸ್ ಇಲ್ಲ. ದೈನಂದಿನ ಶಿಸ್ತಿನ ಜೊತೆ ಚಾಟ್ ಜಿಪಿಟಿ ಪ್ರಾಂಪ್ಟ್‌ಗಳು ನನಗೆ ನಿಜವಾಗಿಯೂ ಒಳ್ಳೆಯ ಶೇಪ್ ನೀಡಿತು ಎಂದು ಅವರು ತಾವು ಬಳಸಿದ ಚಾಟ್ ಜಿಪಿಟಿ ಪ್ರಾಂಪ್ಟ್‌ಗಳ ಬಗ್ಗೆ ಸರಣಿ ಟ್ವಿಟ್ ಮಾಡಿದ್ದಾರೆ. ತನ್ನ ದಿನಚರಿಯಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ತಂದಿದ್ದಕ್ಕಾಗಿ ಅವರು ಚಾಟ್ ಜಿಪಿಟಿಗೆ ಮನ್ನಣೆ ನೀಡುತ್ತಿದ್ದಾರೆ.
ಹಸನ್ ಅವರ ಪ್ರಕಾರ, ಚಾಟ್ ಜಿಪಿಟಿಯನ್ನು ಪ್ರೇರಣೆಯ ಮೂಲವಾಗಿ ಪರಿಗಣಿಸುವ ಹಾಗಿಲ್ಲ. ಆದರೆ ಅದು ನಿಮ್ಮ ತೂಕ ಇಳಿಕೆಯ ಡಯಟ್‌ಗೆ ಚೌಕಟ್ಟು ನಿರ್ಮಿಸುವವನಾಗಿ ಅದನ್ನು ಪರಿಗಣಿಸುವುದು ಮುಖ್ಯ. ಚಾಟ್ ಜಿಪಿಟಿಯ 7 ಸಲಹೆಗಳು ಅವರಿಗೆ ವೈಯಕ್ತಿಕ ತರಬೇತುದಾರ, ಪೌಷ್ಟಿಕತಜ್ಞ ಮತ್ತು ಅಭ್ಯಾಸ ತರಬೇತುದಾರರ ಪಾತ್ರವನ್ನು ಬದಲಿಸುವ ಮೂಲಕ, ಅಭ್ಯಾಸ ಮಾಡಲು, ಯೋಜನೆ ರೂಪಿಸಲು, ಊಟವನ್ನು ರೂಪಿಸಲು, ತಮ್ಮ ಬಯಕೆಗಳನ್ನು ನಿರ್ವಹಿಸಲು ಮತ್ತು ಜವಾಬ್ದಾರಿಯುತವಾಗಿರಲು ಸಹಾಯ ಮಾಡುವ 7 ಸುಳಿವುಗಳನ್ನು ಅವರು ವಿವರಿಸಿದ್ದಾರೆ.
ಮೊದಲನೆಯದಾಗಿ ನಿಮ್ಮ ದೇಹದ ವಿಶ್ಲೇಷಣೆ ಹಾಗೂ ಗುರಿ ನಿಗದಿ:
ಮೊದಲ ಹೆಜ್ಜೆಯಾಗಿ ನೀವು ನಿಮ್ಮ ಆರಂಭವನ್ನು ಅರಿತುಕೊಂಡು ನಿಜವಾಗಿ ಮಾಡಬಹುದಾದ ಗುರಿಗಳನ್ನು ನಿಗದಿ ಮಾಡಬೇಕು. ಮೊದಲಿಗೆ ನಿಮ್ಮ ಪ್ರಸ್ತುತ ತೂಕ ಕೆಜಿ ಗಳಲ್ಲಿ, ಎತ್ತರ: ಸೆಂ.ಮೀ ಗಳಲ್ಲಿ, ವಯಸ್ಸು, ಲಿಂಗ ಮತ್ತು ನಿಮ್ಮ ಗುರಿ: ಕೊಬ್ಬನ್ನು ಕಳೆದುಕೊಳ್ಳುವುದು, ಸ್ನಾಯುಗಳನ್ನು ಹೆಚ್ಚಿಸುವುದು. ವೈಯಕ್ತಿಕ ತರಬೇತುದಾರ ಮತ್ತು ಪೌಷ್ಟಿಕತಜ್ಞರಾಗಿ ಕಾರ್ಯನಿರ್ವಹಿಸಿ. ಜಿಮ್‌ಗೆ ಹೋಗದೇ ಕಾರ್ಯನಿರ್ವಹಿಸುವ 12 ವಾರಗಳ ಫಿಟ್‌ನೆಸ್ ಮತ್ತು ಪೌಷ್ಟಿಕಾಂಶ ಯೋಜನೆಯನ್ನು ರಚಿಸಿ.
ವಾರದ ಊಟ ಯೋಜನೆ: ತೂಕ ಇಳಿಕೆಯ ದಿನಚರಿಯಲ್ಲಿ ಊಟದ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ದಿನಕ್ಕೆ 1800 ಕ್ಯಾಲೋರಿಗಳ ಆಧಾರದ ಮೇಲೆ 7 ದಿನಗಳ ಊಟದ ಯೋಜನೆಯನ್ನು ವಿನ್ಯಾಸಗೊಳಿಸಿ. ಇದರಲ್ಲಿ 120 ಗ್ರಾಂ+ ಪ್ರೋಟೀನ್, ಕನಿಷ್ಠ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಕೈಗೆಟುಕುವ, ಬೇಯಿಸಲು ಸುಲಭವಾದ ಪದಾರ್ಥಗಳಿವೆ. ಮ್ಯಾಕ್ರೋಗಳು ಮತ್ತು ದಿನಸಿ ಪಟ್ಟಿಯನ್ನು ಸೇರಿಸಿ.
ತಿನ್ನುವ ಕಡು ಬಯಕೆಗಳ ಆಸೆಯನ್ನು ನಿರ್ವಹಿಸುವುದು:
ಇಷ್ಟವಾದ ಆಹಾರಗಳು ಕಣ್ಣಿಗೆ ಕಂಡರೆ ತಿನ್ನದಿರುವುದಕ್ಕೆ ಮನಸ್ಸಾಗುವುದಿಲ್ಲ. ಹೀಗಾಗಿ ಅವರು ಚಾಟ್ ಜಿಪಿಟಿ ಸಲಹೆ ಪಡೆದು ಸಕ್ಕರೆ ಹಂಬಲವನ್ನು ನಿಗ್ರಹಿಸಲು ಸಹಾಯ ಮಾಡುವ 200 ಕ್ಯಾಲೋರಿಗಳಿಗಿಂತ ಕಡಿಮೆ ಕ್ಯಾಲೋರಿ ಹೊಂದಿರುವ 10 ಹೆಚ್ಚಿನ ಪ್ರಮಾಣದ, ಕಡಿಮೆ ಕ್ಯಾಲೋರಿ ತಿಂಡಿಗಳ ಪಟ್ಟಿಯನ್ನು ಕೇಳಿ ಪಡೆದರು. ಅವರು ಅತಿಯಾಗಿ ತಿನ್ನುವ ಬಯಕೆಯನ್ನು ಅನುಭವಿಸಿದಾಗ ಅವರು ಪುನರಾವರ್ತಿಸಬಹುದಾದ ಆಹಾರದ ಲಿಸ್ಟ್ ರೆಡಿ ಮಾಡಿದರು.
ಹಸನ್ ಎಂಬ ವ್ಯಕ್ತಿ ಯಾವುದೇ ಜಿಮ್ ಅಥವಾ ತಜ್ಞರ ಸಹಾಯವಿಲ್ಲದೆ, ಕೇವಲ ಚಾಟ್ ಜಿಪಿಟಿ ಬಳಸಿ 3 ತಿಂಗಳಲ್ಲಿ 27 ಕೆಜಿ ತೂಕ ಇಳಿಸಿಕೊಂಡಿದ್ದಾರೆ.ಅವರು ತಮ್ಮ ಡಯಟ್ ಪ್ಲಾನ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಡಿಟೇಲ್ ಸ್ಟೋರಿ ಇಲ್ಲಿದೆ.
ತೂಕ ಇಳಿಕೆಗೆ ಮನೆಯಲ್ಲೇ ಸಣ್ಣ ವರ್ಕೌಟ್: ದೀರ್ಘ ಜಿಮ್ ಅವಧಿಗಳ ಬದಲಾಗಿ, ಅವರು ಸಣ್ಣದಾದ ಮನೆಯಲ್ಲೇ ಮಾಡುವ ವ್ಯಾಯಾಮಗಳತ್ತ ಗಮನಹರಿಸಿದರು. ನಾನು ಯಾವುದೇ ಉಪಕರಣಗಳಿಲ್ಲ ಮನೆಯಲ್ಲಿಯೇ ಮಾಡಬಹುದಾದ 4 ದಿನಗಳ ಸಾಪ್ತಾಹಿಕ ವ್ಯಾಯಾಮ ಯೋಜನೆಯನ್ನು ನಿರ್ಮಿಸಿದೆ. ಕೊಬ್ಬು ನಷ್ಟ, ದೇಹದ ತೂಕದ ಶಕ್ತಿ ಮತ್ತು ಚಲನಶೀಲತೆಯ ಮೇಲೆ ಗಮನಹರಿಸಿ. ಪ್ರತಿ ಅವಧಿಯು 25ರಿಂದ 35 ನಿಮಿಷಗಳಾಗಿರಬೇಕು ಮತ್ತು 12 ವಾರಗಳಲ್ಲಿ ಕ್ರಮೇಣ ಗಟ್ಟಿಯಾಗಬೇಕು.
ಇದನ್ನೂ ಓದಿ: ಕುಡಿದು ಗಲಾಟೆ: ಬಾಯ್‌ಫ್ರೆಂಡ್ ಎದೆ ಬಗೆದ ಮುದ್ದು ಮುಖದ ಪ್ರೇಯಸಿ
ದೈನಂದಿನ ಅಭ್ಯಾಸಗಳ ಟ್ರಾಕಿಂಗ್: ಇವೆಲ್ಲಾ ಪಟ್ಟಿ ಮಾಡುವುದಕ್ಕಿಂಥ ಹೆಚ್ಚಿನದ್ದು, ದೈನಂದಿನ ಪ್ರಕ್ರಿಯೆಯನ್ನು ಟ್ರಾಕ್ ಮಾಡೋದು ಹಾಗೂ ಫಾಲೋ ಮಾಡುವುದು. ನಾನು ನನ್ನ ದೈನಂದಿನ ಆಹಾರ ಕ್ರಮವನ್ನು ಫಾಲೋ ಮಾಡುವುದು. ನಾನು ವರ್ಕೌಟ್ ಮಾಡಿದ್ನಾ ನಾನು ಸರಿಯಾಗಿ ನಿದ್ರೆ ಮಾಡಿದ್ದೇನಾ ಹೀಗೆ ನಾನು ಪ್ರತಿದಿನದ ದಿನಚರಿಯನ್ನು ಟ್ರ್ಯಾಕ್ ಮಾಡುತ್ತಿದ್ದೆ.
ಮನಸ್ಥಿತಿ ಮತ್ತು ಪ್ರೇರಣೆ: ಅವರು ತಮ್ಮ ಈ ಪಯಣದ ಬಗ್ಗೆ ದಿನವೂ ಬರೆಯುವ ಮೂಲಕ ದೈನಂದಿನ ಮಾನಸಿಕ ಶಿಸ್ತಿಗೆ ಆದ್ಯತೆ ನೀಡಿದರು. ಅದರಲ್ಲಿ ಅವರ ಗುರಿಯನ್ನು ನೆನಪು ಮಾಡಿಕೊಳ್ಳುವುದು, ಫಿಟ್‌ನೆಟ್ ಬಗ್ಗೆ ಧೃಡೀಕರಿಸುವುದು ಎಲ್ಲವೂ ಸೇರಿದೆ. ಅಲ್ಲದೇ ಅವರು ಪ್ರತಿವಾರವೂ ತಮ್ಮ ಈ ಪಯಣವನ್ನು ರಿವೈಸ್ ಮಾಡುತ್ತಿದ್ದರು ತಮ್ಮಲ್ಲಾದ ಬೆಳವಣಿಗೆಯ ಬಗ್ಗೆ ಅವರು ಅರಿತುಕೊಳ್ಳುತ್ತಿದ್ದರು. ಈ ಮೂಲಕ ತಾವು 3 ತಿಂಗಳಲ್ಲಿ 27 ಕೇಜಿ ತೂಕ ಇಳಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಗಾಯಕಿ ಚಿತ್ರಾ ಅಯ್ಯರ್‌ಗೆ ಸರಣಿ ಆಘಾತ: ತಂದೆಯ ಸಾವಾಗಿ ತಿಂಗಳು ಕಳೆಯುವ ಮೊದಲೇ ಸೋದರಿಯೂ ಸಾವು


