ಅಮೆರಿಕದಿಂದ ಮಡುರೊ ಅರೆಸ್ಟ್, ಭಾರತದಿಂದ ಹಫೀದ್ ಬಂಧನ ಆಗಲ್ವಾ? ಓವೈಸಿ ಪ್ರಶ್ನೆಗೆ ಬಿಜೆಪಿ ವಿಶ್ವವೇ ಮೆಚ್ಚುವ ಉತ್ತರ ನೀಡಿದೆ. ವೆನಿಜುವೆಲಾಗೆ ನುಗ್ಗಿ ಅಧ್ಯಕ್ಷರ ಬಂಧಿಸಿದ ನಡೆ ಉಲ್ಲೇಖಿಸಿ ಅಸಾದುದ್ದೀನ್ ಓವೈಸಿ ಮಹತ್ವದ ಪ್ರಶ್ನೆ ಎತ್ತಿದ್ದಾರೆ.
ನವದೆಹಲಿ (ಜ.05) ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಅಮೆರಿಕ ಸೈನ್ಯ ವೆನೆಜುವೆಲಾಗೆ ನುಗ್ಗಿ ಅಲ್ಲಿನ ಚುನಾಯಿತ ಅದ್ಯಕ್ಷರನ್ನ ಅರೆಸ್ಟ್ ಮಾಡಿದೆ. ಇದು ಪರ ವಿರೋಧಕ್ಕೂ ಕಾರಣವಾಗಿದೆ. ವೆನೆಜುವೆಲಾ ದೇಶದ ಸ್ವಾಯತ್ತತೆ, ಸ್ವಾತಂತ್ರ್ಯ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ನಿಕೋಲಸ್ ಮಡುರೊ ಬಂಧಿಸಿ ಅಮೆರಿಕ ಕರೆತಂದು ಜೈಲಿಗಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಹತ್ವದ ಪ್ರಶ್ನೆಯನ್ನು ಪ್ರಧಾನಿ ಮೋದಿ ಸರ್ಕಾರಕ್ಕೆ ಕೇಳಿದ್ದಾರೆ. ಅಮೆರಿಕದ ವೆನಿಜುವೆಲಾಗೆ ನುಗ್ಗಿ ಅಲ್ಲಿನ ಅಧ್ಯಕ್ಷರನ್ನೇ ಬಂಧಿಸುವುದಾದರೆ, ಮೋದಿ ಸರ್ಕಾರ ಪಾಕಿಸ್ತಾನಕ್ಕೆ ನುಗ್ಗಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಝ್ ಸಯೀದ್‌ನನ್ನು ಬಂಧಿಸಿ ಕರೆತರಬೇಕು ಎಂದು ಓವೈಸಿ ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿ ನೀಡಿದ ಉತ್ತರಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಓವೈಸಿಗೆ ಪ್ರಶ್ನೆಗೆ ಭಾರಿ ಬೆಂಬಲ
ಅಸಾದುದ್ದೀನ್ ಓವೈಸಿ ಈ ಪ್ರಶ್ನೆ ಕೇಳುತ್ತಿದ್ದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ಓವೈಸಿ ನಿಲುವು, ನಿರ್ಧಾರಗಳನ್ನು ಹಲವರು ವಿರೋಧಿಸುತ್ತಾರೆ. ಆದರೆ ಈ ಪ್ರಶ್ನೆಗೆ ನಮ್ಮ ಬೆಂಬಲವಿದೆ ಎಂದು ಹಲವರು ಬೆಂಬಲ ಸೂಚಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೆ ಸ್ವತಂತ್ರ ವೆನೆಜುವೆಲಾ ದೇಶಕ್ಕೆ ನುಗ್ಗಿ, ಅಲ್ಲಿನ ಅಧ್ಯಕ್ಷರನ್ನೇ ಬಂಧಿಸಲು ಸಾಧ್ಯವಾಗಿದೆ. ಹೀಗಾಗಿ ಮೋದಿ ಸರ್ಕಾರ ಸೇನೆಯನ್ನು ಪಾಕಿಸ್ತಾನಕ್ಕೆ ನುಗ್ಗಿಸಿ ಉಗ್ರ ಹಫೀಝ್ ಸಯೀದ್ ಅರೆಸ್ಟ್ ಮಾಡಿ ಕರೆತರಬೇಕು ಎಂದು ಓವೈಸಿ ಆಗ್ರಹಿಸಿದ್ದರು.
ಬಿಜೆಪಿಯ ಉತ್ತರವೇನು?
ಓವೈಸಿ ಪ್ರಶ್ನೆ ಭಾರತದಲ್ಲಿ ಭಾರಿ ಚರ್ಚೆಯಾಗುತ್ತಿದ್ದಂತೆ ಬಿಜೆಪಿ ಸಂಸದ ಗುಲಾಮ್ ಅಲಿ ಖಟಾನಾ ತಕ್ಕ ಉತ್ತರ ನೀಡಿದ್ದಾರೆ. ಭಾರತ ಅತೀ ಜೊಡ್ಡ ಪ್ರಜಾಪ್ರಭುತ್ವ ದೇಶ. ಭಾರತ ಪ್ರತಿ ನೆರೆ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಬಯಸುತ್ತದೆ. ಭಾರತದ ಟಾರ್ಗೆಟ್ ಉಗ್ರರೆ ಹೋರತು ಯಾವುದೇ ದೇಶವಲ್ಲ ಎಂದಿದ್ದಾರೆ. ಭಾರತದ ಮೇಲೆ ಉಗ್ರರ ದಾಳಿಯಾದಾಗ ಭಾರತದ ಟಾರ್ಗೆಟ್ ದಾಳಿ ಮಾಡಿದ ಉಗ್ರರು, ಸಂಚು ರೂಪಿಸಿದ ಉಗ್ರರು, ಉಗ್ರರ ತರಬೇತಿ ಕ್ಯಾಂಪ್‌ಗಳ ಮೇಲೆ ದಾಳಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕುವ ಪ್ರಯತ್ನ ಮಾಡುತ್ತದೆ. ಭಾರತ ಯಾವತ್ತೂ ಒಂದು ದೇಶದ ಮೇಲೆ ದಾಳಿ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ ಎಂದು ಗುಲಾಮ್ ಅಲಿ ಖಟಾನ ಹೇಳಿದ್ದಾರೆ. ಅಮೆರಿಕದ ರೀತಿ ದೇಶದ ಮೇಲೆ ದಾಳಿ ಮಾಡಿ ಬಂಧಿಸುವ ಪರಿಪಾಠ ಭಾರತದಲ್ಲಿ ಇಲ್ಲ. ಸೂಕ್ತ ಸಂದರ್ಭದಲ್ಲಿ ದಾಳಿ ಮಾಡಿದ ಪ್ರತಿಯೊಬ್ಬ ಉಗ್ರನ ಮೇಲೆ ಭಾರತ ತಕ್ಕ ಪಾಠ ಕಲಿಸುತ್ತದೆ ಎಂದಿದ್ದಾರೆ.
ಇದೇ ವೇಳೆ ಬಿಹಾರ ಸಚಿವ ದಿಲೀಪ್ ಜೈಸ್ವಾಲ್ ಕೂಡ ಅಸಾದುದ್ದೀನ್ ಓವೈಸಿ ವಿರುದ್ಧ ಹರಿಹಾಯ್ದಿದ್ದಾರೆ. ಓವೈಸಿ ವರ್ಣರಂಜಿತ ಮಾತುಗಳನ್ನಾಡಿ ಗಮನಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಭಾರತದ ನೀತಿ, ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧ ಎಲ್ಲವೂ ತಿಳಿದುಕೊಂಡು ಹೇಳಿಕೆ ನೀಡಿದರೆ ಉತ್ತಮ ಎಂದಿದ್ದಾರೆ.

