- Home
- News
- India News
- ನನಗೆ 6 ಮಕ್ಕಳು, ನಿನ್ನನ್ನು ತಡೆದವರು ಯಾರು? ಬಿಜೆಪಿ ನಾಯಕಿ ನವನೀತ್ ರಾಣಾಗೆ ತಿರುಗೇಟು ನೀಡಿದ ಓವೈಸಿ
ನನಗೆ 6 ಮಕ್ಕಳು, ನಿನ್ನನ್ನು ತಡೆದವರು ಯಾರು? ಬಿಜೆಪಿ ನಾಯಕಿ ನವನೀತ್ ರಾಣಾಗೆ ತಿರುಗೇಟು ನೀಡಿದ ಓವೈಸಿ
ಬಿಜೆಪಿ ನಾಯಕಿ ನವನೀತ್ ರಾಣಾ ಅವರ 'ಹಿಂದೂಗಳು ನಾಲ್ಕು ಮಕ್ಕಳನ್ನು ಹೊಂದಬೇಕು' ಎಂಬ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ತಮಗೆ ಆರು ಮಕ್ಕಳಿದ್ದು, ನಾಲ್ಕು ಮಕ್ಕಳನ್ನು ಹೊಂದಲು ಯಾರು ತಡೆಯುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ನಾಯಕಿ ನವನೀತ್ ರಾಣಾ ಅವರ 'ನಾಲ್ಕು ಮಕ್ಕಳ' ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.
"ಹಿಂದೂಗಳು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಬೇಕು" ಎಂಬ ಬಿಜೆಪಿ ನಾಯಕಿ ನವನೀತ್ ರಾಣಾ ಅವರ ಹೇಳಿಕೆಗೆ ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ನನಗೆ ಆರು ಮಕ್ಕಳಿದ್ದಾರೆ, ನಿಮಗೆ ನಾಲ್ಕು ಮಕ್ಕಳನ್ನು ಹೊಂದುವುದಕ್ಕೆ ಯಾರೂ ತಡೆ ಒಡ್ಡುತ್ತಿಲ್ಲ" ಎಂದು ಅವರು ನೇರವಾಗಿ ಹೇಳಿದ್ದಾರೆ.
ನವನೀತ್ ರಾಣಾ ಅವರ ಹೇಳಿಕೆಯನ್ನು ಟೀಕಿಸಿದ ಓವೈಸಿ, ದೇಶದ ಕೆಲವು ರಾಜ್ಯಗಳಲ್ಲಿರುವ ಜನಸಂಖ್ಯಾ ನಿಯಮಗಳನ್ನು ನೆನಪಿಸಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಪಂಚಾಯತ್ ಚುನಾವಣೆ ಸ್ಪರ್ಧಿಸಲು ನಿರ್ಬಂಧವಿದೆ ಎಂದು ಅವರು ಹೇಳಿದರು.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಕೂಡ ಜನಸಂಖ್ಯೆ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ, ಹೆಚ್ಚು ಮಕ್ಕಳನ್ನು ಹೊಂದಲು ಯಾರ ಅಭ್ಯಂತರವೂ ಇಲ್ಲ ಎಂಬರ್ಥದಲ್ಲಿ ಓವೈಸಿ ಮಾತನಾಡಿದ್ದಾರೆ.
ಕೆಲವರು ಹೆಚ್ಚಿನ ಮಕ್ಕಳನ್ನು ಹೆರುವ ಮೂಲಕ ಭಾರತವನ್ನು ಪಾಕಿಸ್ತಾನವನ್ನಾಗಿ ಮಾಡಲು ಸಂಚು ರೂಪಿಸುತ್ತಿದ್ದಾರೆ. ಇದನ್ನು ತಡೆಯಲು ಹಿಂದೂಗಳು ಕನಿಷ್ಠ 3 ರಿಂದ 4 ಮಕ್ಕಳನ್ನು ಹೊಂದಬೇಕು" ಎಂದು ನವನೀತ್ ರಾಣಾ ಹೇಳಿದ್ದರು.
ಒಬ್ಬರು ನಾಲ್ಕು ಹೆಂಡತಿಯರು ಮತ್ತು 19 ಮಕ್ಕಳ ಬಗ್ಗೆ ಬಹಿರಂಗವಾಗಿ ಮಾತನಾಡುವಾಗ, ನಾವು ಕೇವಲ ಒಂದು ಮಗುವಿಗೆ ಯಾಕೆ ತೃಪ್ತರಾಗಬೇಕು?" ಎಂದು ಅವರು ಪ್ರಶ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

